UN NETWORKS
ಉಳ್ಳಾಲ : ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರತೀ ಕ್ಲಸ್ಟರ್ ಸಂಪನ್ಮೂಲ ಕೇಂದ್ರಕ್ಕೆ ಟ್ಯಾಬ್ ನೀಡುವ ಬಗ್ಗೆ ಸರಕಾರಕ್ಕೆ ಪ್ರಸ್ತಾಪ ಸಲ್ಲಿಸಲಾಗಿದ್ದು, ಸರಕಾರ ಟ್ಯಾಬ್ ನೀಡಿದರೆ ಶಿಕ್ಷಕರಿಗೆ ಸಹಕಾರಿಯಾಗಲಿದೆ ಎಂದು ಶಿಕ್ಷಣ ಇಲಾಖೆಯ ಕ್ಷೇತ್ರ ಸಮನ್ವಯ ಅಧಿಕಾರಿ ಶಿಕ್ಷಣ ಗೀತಾ ಶ್ಯಾನುಭೋಗ್ ತಿಳಿಸಿದರು.
ಗ್ರಾಮಸ್ಥರೊಬ್ಬರು ಶಿಕ್ಷಕರಿಗೆ ಆಂತರ್ಜಾಲದ ಸಮಸ್ಯೆಯೊಂದಿಗೆ ರಾಣಿಪುರ ಶಾಲೆಯಲ್ಲಿ ಶಿಕ್ಷಕರ ಕೊರತೆಯ ಕುರಿತು ಗ್ರಾಮ ಸಭೆಯಲ್ಲಿ ಪ್ರಶ್ನೆ ಕೇಳಿ ಏಳು ತರಗತಿ ಇದ್ದರೂ, ಐದೇ ಶಿಕ್ಷಕಕರು ಕಾರ್ಯ ನಿರ್ವಹಿಸುತ್ತಿದ್ದು, ಇದರಿಂದ ಬಡ ಮಕ್ಕಳ ಶೈಕ್ಷಣಿಕ ಜೀವನಕ್ಕೆ ತೊಂದರೆ ಇದೆ ಹೆಚ್ಚುವರಿ ಶಿಕ್ಷಕರನ್ನು ನೇಮಿಸಬೇಕು ಎಂದರು. ಇದಕ್ಕೆ ಉತ್ತರಿಸಿದ ಗೀತಾ ಶ್ಯಾನ್‍ಭೋಗ್ ಸರಕಾರ ನಿಯಮದಂತೆ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಣ ಇಲಾಖೆ ಶಿಕ್ಷಕರ ನೇಮಕ ಮಾಡುತ್ತದೆ ಹೆಚ್ಚುವರಿ ಶಿಕ್ಷಕರ ಅಗತ್ಯತೆಯ ಬಗ್ಗೆ ಸಚಿವರ ಗಮನಕ್ಕೆ ತಂದು ಅಲ್ಲಿಂದಲೇ ಸುತ್ತೋಲೆ ಬಂದರೆ ಶಿಕ್ಷಕರ ನೇಮಕ ಸಾಧ್ಯ ಎಂದರು.
ಸಭೆಯಲ್ಲಿ ಮನೆಯಲ್ಲೇ ಹೆರಿಗೆಯಾದರೆ ಜನನ ಪ್ರಮಾಣ ಪತ್ರದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಂಗನವಾಡಿ ಮೇಲ್ವಿಚಾರಕಿ ಶಂಕರಿ ಈ ಕುರಿತು ಸ್ಥಳೀಯ ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಹಿತಿ ನೀಡಿದರೆ ಅವರು ಪರಿಶೀಲಿಸಿ ದೃಢೀಕರಣ ಪತ್ರ ನೀಡಿದರೆ ಆ ಪತ್ರದ ಆಧಾರದಲ್ಲಿ ಸಂಬಂ„ತ ಇಲಾಖೆ ಜನನ ಪ್ರಮಾಣ ಪತ್ರ ನೀಡುತ್ತದೆ ಎಂದರು. ಈ ಸಂದರ್ಭದಲ್ಲಿ ಜನನ ಪ್ರಮಾಣ ಪತ್ರಕ್ಕೆ ಸಂಬಂ„ಸಿದ ಇತರ ಪ್ರಶ್ನೆಗಳಿಗೆ ಶಂಕರಿ ಮಾಹಿತಿ ನೀಡಿದರು. ಮುಖ್ಯ ರಸ್ತೆಯಲ್ಲಿ ಮಣ್ಣು, ಮರಳು ಮತ್ತು ಕಲ್ಲು ಸಾಗಿಸುವ ಲಾರಿಗಳು ಯಾವುದೇ ಟರ್ಪಾಲ್ ಬಳಸದೆ ಸಾಗಾಟ ನಡೆಸಿದಾಗ ದ್ವಿಚಕ್ರ ವಾಹನ ಚಾಲಕರು ಮತ್ತು ರ್ಸತೆಯಲ್ಲಿ ನಡೆದುಕೊಂಡು ಹೋಗುವವರ ಕಣ್ಣಿಗೆ ಮಣ್ಣು , ಮರಳು ಎರಚುತ್ತದೆ ಇದಕ್ಕೆ ಸಂಬಂ„ಸಿದಂತೆ ಕ್ರಮ ಕೈಗೊಳ್ಳಬೇಕು ಎಂದು ಸಭೆಯಲ್ಲಿ ಭಾಗವಹಿಸಿದ ಪೊಲೀಸ್ ಸಿಬಂದಿಗಳಿಗೆ ಮನವಿ ಮಾಡಿದರು. ಇದ್ಲದೆ ಯಾವುದಾದರೂ ಅಕ್ರಮದ ಬಗ್ಗೆ ಮಾಹಿತಿ ನೀಡಿದರೆ ದೂರು ನೀಡಿದವರ ಮಾಹಿತಿಯನ್ನು ತಿಳಿಸುವುದರಿಂದ ಅವರು ಜೀವ ಬೆದರಿಕೆ ಒಡ್ಡುತ್ತಾರೆ ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಗಮನ ಹರಿಸಬೇಕು ಎಂದಾಗ ಸಿಬಂದಿ ಈ ಕುರಿತು ಮಾಹಿತಿಯನ್ನು ಮೇಲಾ„ಕಾರಿಯವರ ಗಮನಕ್ಕೆ ತರಲಾಗುವುದು ಎಂದರು.
ಪಂಚಾಯತ್ ಅಧ್ಯಕ್ಷೆ ರೂಪಾ ಶೆಟ್ಟಿ ಸಭೆಯ ಅಧ್ಯಕ್ಷೆ ವಹಿಸಿದ್ದರು. ಜಿಲ್ಲಾ ಪಂಚಾಯತ್ ಸದಸ್ಯೆ ಧನಲಕ್ಷ್ಮಿ ಗಟ್ಟಿ, ತಾಲೂಕು ಪಂಚಾಯತ್ ಆಲ್ಪ್ರೆಡ್ ವ್ಮಿ ಡಿ.ಸೋಜ, ಉಪಾಧ್ಯಕ್ಷ ಹರೀಶ್ ಭಂಡಾರಬೈಲು, ವಿವಿಧ ಇಲಾಖೆಯ ಅ2ಕಾರಿಗಳು ಮತ್ತು ಗ್ರಾಮ ಪಂಚಾಯತ್ ಸದಸ್ಯರು, ಗ್ರಾಮ ಪಂಚಾಯತ್ ಅ„ಕಾರಿಗಳು ಉಪಸ್ಥಿತರಿದ್ದರು. ಮುನ್ನೂರು ಗ್ರಾಮ ಪಂಚಾಯತ್‍ನ ಪ್ರತೀ ಕುಟುಂಬಕ್ಕೆ ನೀಡುವ ಸೊಳ್ಳೆ ಪರದೆಯನ್ನು ಸಾಂಕೇತಿಕವಾಗಿ ಗ್ರಾಮಸ್ಥರಿಗೆ ನೀಡಲಾಯಿತು. ಪಂಚಾಯತ್ ಅಭಿವೃದ್ಧಿ ಅ„ಕಾರಿ ಕೃಷ್ಣಸ್ವಾಮಿ ಬಿ.ಎಸ್.ಸ್ವಾಗತಿಸಿದರು.