Site icon Ullalavani

ಕ.ರ.ವೇ ವಿರೋಧಿಸಿದ ತುಳು ಸಂಘಟನೆಗಳು

UN NETWORKS

ಮಂಗಳೂರು: ಮಹದಾಯಿ ಯೋಜನೆ ಜಾರಿಗೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಮಂಗಳೂರಿನ ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆ ಗೊಂದಲಕ್ಕೆ ಕಾರಣವಾಗಿತ್ತು. ತುಳುನಾಡಿನ ಬಗ್ಗೆ ಹಾಗೂ ತುಳುವಿನ ಬಗ್ಗೆ ಅವಮಾನಕಾರಿ ಹಾಗೂ ಅವಹೇಳನಕಾರಿ ಹೇಳಿಕೆ ನೀಡಿದ್ದ ಕ.ರ.ವೇ ಬೆಂಗಳೂರು ಘಟಕದ ಸಂಘಟನಾ ಕಾರ್ಯದರ್ಶಿ ಜಾನ್ ಎಂಬಾತನಿಗೆ ಬುದ್ಧಿ ಕಲಿಸಲು ಕಾಯುತ್ತಿದ್ದ ತುಳುನಾಡು ಸಂಘಟನೆಗಳು ಈ ಅವಕಾಶವನ್ನು ರೈಲು ನಿಲ್ದಾಣದಲ್ಲಿ ಸರಿಯಾಗಿ ಬಳಸಿಕೊಂಡಿತು.

ರೈಲು ತಡೆ ಪ್ರತಿಭಟನೆಗೆ ಬಂದಿದ್ದ ಕರ್ನಾಟಕ ರಕ್ಷಣಾ ವೇದಿಕೆಯ ಜಾನ್ ವಿರುದ್ಧ ಕೆಂಡಾಮಂಡಲವಾದ ತುಳುನಾಡ ಸಂಘಟನೆಗಳು ಆತನ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ ಜಿಲ್ಲೆಯ ಕ.ರ.ವೇ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳ ಬೆವರಿಳಿಸಿದ್ದಾರೆ.

ಕ.ರ.ವೇ ಜಿಲ್ಲಾಧ್ಯಕ್ಷ ಅನಿಲ್ ದಾಸ್ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ ತುಳುನಾಡ ಸಂಘಟನೆಗಳು ತುಳುನಾಡಿನ ಬಗ್ಗೆ ಅವಮಾನಕಾರಿ ಹೇಳಿಕೆ ನೀಡುವವರ ವಿರುದ್ಧ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನೂ ನೀಡಿದೆ.

ಜಾಹೀರಾತು

ಎತ್ತಿನಹೊಳೆ ಯೋಜನೆಯ ವಿರುದ್ಧ ಪ್ರತಿಭಟನೆಗೆ ಬೆಂಬಲ ನೀಡದ ಜಿಲ್ಲೆಯ ಕ.ರ.ವೇ ಪದಾಧಿಕಾರಿಗಳು ಇದೀಗ ಮಹದಾಯಿ ಯೋಜನೆ ಹೋರಾಟಕ್ಕೆ ಪ್ರತಿಭಟನೆ ಮಾಡುವುದಕ್ಕೂ ತುಳುನಾಡು ಸಂಘಟನೆಗಳು ವಿರೋಧ ವ್ಯಕ್ತಪಡಿಸಿದವು.

Exit mobile version