Site icon Ullalavani

ತುಳು ಭಾಷೆಗೆ ಅವಮಾನಿಸಿದ ಜಾನ್ ಕ.ರ.ವೇ ಯಿಂದ ಉಚ್ಛಾಟನೆ

UN NETWORKS

ಮಂಗಳೂರು: ತುಳು ಭಾಷೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕೀಳು ಶಬ್ದಗಳಿಂದ ನಿಂದನೆ ಮಾಡಿರುವ ಕ.ರ.ವೇ ಕಾರ್ಯಕರ್ತ ಜಾನ್ ನನ್ನು ಸಂಘಟನೆಯಿಂದ ಉಚ್ಛಾಟಿಸಲಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣ ಗೌಡ ಹೇಳಿದ್ದಾರೆ.
ಕನ್ನಡ ಭಾಷೆಯ ಸೋದರ ಭಾಷೆಯಾದ ತುಳು ಭಾಷೆ ಮತ್ತು ತುಳುನಾಡಿನ ಜನರ ಬಗ್ಗೆ ಕರವೇ ಅಪಾರವಾದ ಗೌರವ ಹೊಂದಿದೆ.

ಸಂವಿಧಾನದ 8 ನೇ ಪರಿಚ್ಛೇದದಲ್ಲಿ ತುಳು ಮತ್ತು ಕೊಡವ ಭಾಷೆಗೆ ಸಾಂವಿಧಾನಿಕ ಸ್ಥಾನಮಾನ ನೀಡುವಂತೆ ಕರವೇ ಕೇಂದ್ರ ಸರಕಾರವನ್ನು ಹಲವು ಬಾರಿ ಒತ್ತಾಯಿಸಿದೆ.

ಜಾಹೀರಾತು

ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ಕನ್ನಡಪರ ಹೋರಾಟಗಳ ಕುರಿತಾಗಿ ಅತ್ಯಂತ ಕೀಳು ಶಬ್ದಗಳಲ್ಲಿ ನಿಂದನೆ ಮಾಡುವ ಕೆಲಸ ಕನ್ನಡಿಗರಿಂದಲೇ ನಡೆಯುತ್ತಿರುವುದು ನೋವಿನ ಸಂಗತಿ. ಕರವೇ ಕಾರ್ಯಕರ್ತ ಜಾನ್ ಎಂಬವರು ಸಾಮಾಜಿಕ ಜಾಲತಾಣದಲ್ಲಿ ತುಳು ಭಾಷೆಯ ಬಗ್ಗೆ ಅವಾಚ್ಯಶಬ್ದಗಳಿಂದ ನಿಂದನೆ ಮಾಡಿರುವುದು ತಪ್ಪಾಗಿದೆ. ಇದು ಜಾನ್ ಹೇಳಿಕೆಯೇ ಹೊರತು ಕರವೇ ನಿಲುವಲ್ಲ. ಅದಕ್ಕಾಗಿ ಜಾನ್ ನನ್ನು ಕರವೇ ಯಿಂದ ಉಚ್ಛಾಟನೆ ಮಾಡಲಾಗಿದೆ. ಅದಕ್ಕಾಗಿ ತುಳು ಭಾಷೆ ಲಮಾತನಾಡುವ ಕನ್ನಡ ಸಹೋದರರು ವಿಚಾರವನ್ನು ಇಲ್ಲಿಗೆ ಕೈಬಿಡಬೇಕು ಎಂದು ಮನವಿ ಮಾಡುತ್ತಿದ್ದೇವೆ ಎಂದು ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣ ಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version