Site icon Ullalavani

ಜ.28 ರಂದು ತಲಪಾಡಿ ದೇವಿನಗರದಲ್ಲಿ ದೀಪ ಪೂಜೆ

UN NETWORKS

ತಲಪಾಡಿ: ಸಾಮಾಜಿಕ ಸಾಮರಸ್ಯದ ಜತೆಗೆ ಸಮಾಜವನ್ನು ಒಟ್ಟುಗೂಡಿಸಿ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಮಾತೃಶಕ್ತಿಯನ್ನು ಬದಲಾಯಿಸುವ ಉದ್ದೇಶದಿಂದ ಜ.28 ರಂದು ಸಂಜೆ 4 ಕ್ಕೆ ದೇವಿನಗರ ತಲಪಾಡಿಯ ಶಾರದಾ ವಿದ್ಯಾನಿಕೇತನ ಪಬ್ಲಿಕ್ ಶಾಲೆ ಇದರ ಸ್ವಾಮಿ ವಿವೇಕಾನಂದ ಕ್ರೀಡಾಂಗಣದಲ್ಲಿ `ದೀಪ ಪೂಜೆ’ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಎಂ.ಬಿ.ಪುರಾಣಿಕ್ ಹೇಳಿದ್ದಾರೆ.

ಅವರು ತಲಪಾಡಿ ದೇವಿನಗರದ ಶಾರದ ವಿದ್ಯಾನಿಕೇತನ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದ ಸುದ್ಧಿಗೋಷ್ಠಿಯಲ್ಲಿ ಕಾರ್ಯಕ್ರಮದ ವಿವರ ನೀಡಿದರು.

ಎಲ್ಲದರಲ್ಲೂ ಬದಲಾವಣೆಯ ಜತೆಗೆ ವ್ಯವಸ್ಥೆಗಳು ಬದಲಾವಣೆಯಾಗುತ್ತಿದೆ. ಇದರಿಂದ ಯುವಸಮುದಾಯ ಸಂಸ್ಕøತಿಯ ಅರಿವಿಲ್ಲದೆ ಹಾದಿತಪ್ಪುವಂತಹ ಕೆಲಸಕ್ಕೆ ಮುಂದಾಗುತ್ತಿದೆ. ಆದ್ದರಿಂದ ದೀಪ ಪೂಜೆ ಅನ್ನುವ ಸಂಸ್ಕøತಿಯ ಜಾಗೃತಿ ಮೂಡಿಸುವಂತಹ ಕಾರ್ಯಕ್ರಮದ ಮೂಲಕ 2,000 ದಷ್ಟು ಮಹಿಳೆಯರ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯಲಿದೆ. ಶಾರದಾ ವಿದ್ಯಾ ಸಮೂಹ ಸಂಸ್ಥೆಗಳಲ್ಲಿ ಆಧುನಿಕ ಶಿಕ್ಷಣದ ಜತೆಗೆ ಧಾರ್ಮಿಕ ಪಂಚಮುಖಿ ಶಿಕ್ಷಣವನ್ನು ನೀಡುವಂತಹ ಕೆಲಸಗಳು ಆಗುತ್ತಿವೆ. ಸಮಾಜದ ಹಿತದೃಷ್ಠಿಯಿಂದ ತಾಯಂದಿರನ್ನು ಒಟ್ಟುಗೂಡಿಸಿ ಸಾಮಾಜಿಕ ಬದಲಾವಣೆ ನಡೆಸುವ ಪ್ರಾಮಾಣಿಕ ಪ್ರಯತ್ನ ಕಾರ್ಯಕ್ರಮದಿಂದ ಆಗಲಿದೆ. ಈ ನಿಟ್ಟಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಿದೆ ಎಂದರು.

ದೀಪ ಪೂಜೆ ನಡೆಸಿಕೊಡುವ ಯೋಗಾಚಾರ್ಯ ಪುಂಡೀಕಾಕ್ಷ ಬೆಳ್ಳೂರು ಮಾತನಾಡಿ ಮನೆಗಳಲ್ಲಿ ದೀಪ ಬೆಳಗಿಸುವುದರ ಮೂಲಕ ಧನಾತ್ಮಕ ಚಿಂತನೆಗಳು ಲಭಿಸಲು ಸಾಧ್ಯವಿದ್ದು, ಇದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ. ಐದು ರೀತಿಗಳಲ್ಲಿ ಅರ್ಚನೆ ನಡೆಸುವ ವಿಧಾನದ ಜತೆಗೆ ವಿಚಾರಗಳ ತಿಳಿಸುವ ಕಾರ್ಯ ಆಗಲಿದೆ. 24 ಬಾರಿ ದೇವಿಯ ನಾಮಸ್ಮರಣೆಯ ಜತೆಗೆ ಮುದ್ರಾಭ್ಯಾಸ, ಓಂಕಾರ , ಪ್ರದಕ್ಷಿಣೆ ಮತ್ತು ನಮಸ್ಕರಿಸುವ ಕಾರ್ಯ ನಡೆಯಲಿದೆ ಎಂದರು.

ಸುದ್ಧಿಗೋಷ್ಠಿಯಲ್ಲಿ ಶಾಲಾ ಆಡಳಿತಾಧಿಕಾರಿ ವಿವೇಕ್ ತಂತ್ರಿ, ಸ್ಥಳೀಯ ಹಿಂದು ಮುಖಂಡರುಗಳಾದ ನಾರಾಯಣ ಕಜೆ ಹಾಗೂ ಬಿ. ನಾರಾಯಣ ಕುಂಪಲ ಉಪಸ್ಥಿತರಿದ್ದರು.

Exit mobile version