ಉಳ್ಳಾಲ: ಕೊಲ್ಯ ಸೋಮೇಶ್ವರದ ನಾಟ್ಯನಿಕೇತನ ಇದರ ವಜ್ರ ಮಹೋತ್ಸವ ವರ್ಷಾಚರಣೆಯ ಪ್ರಯುಕ್ತ ನಾಟ್ಯಮೋಹನಂ ಕಾರ್ಯಕ್ರಮ ಅಂಬಿಕಾರೋಡಿನ ಗಟ್ಟಿ ಸಮಾಜ ಭವನದಲ್ಲಿ ಜ.26 ರಂದು ಮಧ್ಯಾಹ್ನ 3.30 ರಿಂದ ನಡೆಯಲಿದೆ.
ನಾಟ್ಯರಾಣಿ ಶಾಂತಲಾ ಪ್ರಶಸ್ತಿ ಪುರಸ್ಕೃತ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಗುರು ಉಳ್ಳಾಲ ಶ್ರೀ ಮೋಹನ್ ಕುಮಾರ್ ಅವರ ನೇತೃತ್ವದಲ್ಲಿ ನಾಟ್ಯಮೋಹನಂ ನಾಟ್ಯನಿಕೇತನದ ವಿದ್ಯಾರ್ಥಿಗಳಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ. ಬಳಿಕ ನಡೆಯುವ ಸಭಾ ಕಾರ್ಯಕ್ರಮವನ್ನು ನೃತ್ಯಗುರು ಶೀಲಾ ಜಗದೀಶ್ ಗೋವಾ ಉದ್ಘಾಟಿಸಲಿದ್ದಾರೆ, ಅಧ್ಯಕ್ಷತೆಯನ್ನು ಆನಂದಾಶ್ರಮ ಹೈಸ್ಕೂಲಿನ ನಿವೃತ್ತ ಮುಖ್ಯೋಪಾಧ್ಯಾಯ ಹಾಗೂ ಫಾರಂ ಫಾರ್ ಬ್ಲೈಂಡ್ ಇದರ ನಿರ್ದೇಶಕ ಪಿ.ಗುರುರಾಜ ರಾವ್ ವಹಿಸಲಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಚಂದ್ರಹಾಸ ರೈ, ಉಳ್ಳಾಲ ಅಬ್ಬಕ್ಕ ಉತ್ಸವ ಸಮಿತಿ ಕಾರ್ಯಾಧ್ಯಕ್ಷ ದಿನಕರ ಉಳ್ಳಾಲ್, ರಥಬೀದಿ ಕಾಲೇಜು ಮಂಗಳೂರು ಇದರ ಇತಿಹಾಸ ವಿಭಾಗ ಮುಖ್ಯಸ್ಥರಾದ ಡಾ.ನವೀನ್ .ಎನ್.ಕೊಣಾಜೆ, ಜಿಲ್ಲಾ ಪಂಚಾಯತ್ ಸದಸ್ಯ ಧನಲಕ್ಷ್ಮೀ ಗಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಬಹುಮುಖ ಪ್ರತಿಭೆಗಳಾದ ಮಾ| ಮನುಜ ನೇಹಿಗ, ಮಾ| ಸುಮುಖ ಕಾರಂತ್ ಕು| ವಂಶಿ ರತ್ನಕುಮಾರ್ ಕು| ಅನನ್ಯಾ ಐತಾಳ್, ಕು| ಪೂರ್ವಿ ಕೆ. ರಾವ್ ಇವರಿಗೆ ಅಭಿನಂದನೆ ನಡೆಯಲಿದೆ.