UN NETWORKS
ಮಂಗಳೂರು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಷ್ಟ್ರಾದ್ಯಂತ ಹಮ್ಮಿಕೊಡಿರುವ ನ್ಯಾಷನಲ್ ಸ್ಕಾಲರ್ ಶಿಪ್ 2018 ಅಭಿಯಾನದ ಅಂಗವಾಗಿ ಕರ್ನಾಟಕ ರಾಜ್ಯದ ವತಿಯಿಂದ ದ.ಕ ಜಿಲ್ಲೆ ಮತ್ತು ಉಡುಪಿ ಜಿಲ್ಲೆಯ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ವಿತರಣಾ ಕಾರ್ಯಕ್ರಮವು ಮಂಗಳೂರಿನ ಕಂಕನಾಡಿ ಜಮಿಯತುಲ್ ಫಲಾಹ್ ಹಾಲ್ ನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಒಟ್ಟು 248 ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಚೆಕ್ ವಿತರಿಸಲಾಯಿತು.