UN NETWORKS
ದೇರಳಕಟ್ಟೆ : ದೇರಳಕಟ್ಟೆಯನ್ನು ಕೇಂದ್ರವಾಗಿಟ್ಟುಕೊಂಡು ಬ್ಯಾರಿ ಲೇಖಕರು ಮತ್ತು ಕಲಾವಿದರನ್ನು ಒಳಗೊಂಡ `ಮೇಲ್ತೆನೆ’ ಸಂಘಟನೆಯ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಅಧ್ಯಕ್ಷ ಆಲಿಕುಂಞ ಪಾರೆ ಅವರ ಅಧ್ಯಕ್ಷತೆಯಲ್ಲಿ ಜರಗಿತು.
2018ನೆ ಸಾಲಿನ ನೂತನ ಅಧ್ಯಕ್ಷರಾಗಿ ಬಶೀರ್ ಅಹ್ಮದ್ ಕಿನ್ಯ, ಗೌರವಾಧ್ಯಕ್ಷರಾಗಿ ಆಲಿಕುಂಞ ಪಾರೆ, ಪ್ರಧಾನ ಕಾರ್ಯದರ್ಶಿಯಾಗಿ ಹಂಝ ಮಲಾರ್, ಜೊತೆ ಕಾರ್ಯದರ್ಶಿಯಾಗಿ ನಿಯಾಝ್ ಪಿ., ಕೋಶಾಧಿಕಾರಿಯಾಗಿ ರಫೀಕ್ ಪಾಣೇಲ, ಉಪಾಧ್ಯಕ್ಷರಾಗಿ ಬಶೀರ್ ಕಲ್ಕಟ್ಟ, ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಇಸ್ಮತ್ ಪಜೀರ್, ಇಸ್ಮಾಯೀಲ್ ಟಿ., ಮುಹಮ್ಮದ್ ಬಾಷಾ, ಆರೀಫ್ ಕಲ್ಕಟ್ಟ ಅವರನ್ನು ಆಯ್ಕೆ ಮಾಡಲಾಯಿತು.