Site icon Ullalavani

ಶಾಲೆಯ ಅಭಿವೃದ್ಧಿಯಲ್ಲಿ ಹಳೆ ವಿದ್ಯಾರ್ಥಿಗಳ ಪಾತ್ರ ಮಹತ್ತರವಾದದ್ದು : ಡಾ.ಪ್ರಾನ್ಸಿಸ್ ಪೇರಾವ

UN NETWORKS

ತೊಕ್ಕೊಟ್ಟು: ಸಂತ ಸೆಬಾಸ್ಟಿಯನ್ ಸಮುದಾಯ ಸಂಸ್ಥೆಗಳಲ್ಲಿ ಕಲಿತ ವಿದ್ಯಾರ್ಥಿಗಳೇ ಈ ಸಂಸ್ಥೆಯ ಆಧಾರಸ್ತಂಭಗಳಾಗಿದ್ದು, ಶಾಲೆಯ ಅಭಿವೃದ್ಧಿಯಲ್ಲಿ ಹಳೆವಿದ್ಯಾರ್ಥಿಗಳ ಪಾತ್ರ ಮಹತ್ವದ್ದು ಎಂದು ಶಿವಮೊಗ್ಗ ಧರ್ಮಪ್ರಾಂತ್ಯದ ಧರ್ಮಾದ್ಯಕ್ಷ ಅತಿ ವಂದನೀಯ ಢಾ| ಪ್ರಾನ್ಸಿಸ್ ಸೆರಾವೋ ಅಭಿಪ್ರಾಯಪಟ್ಟರು.

ಅವರು ತೊಕ್ಕೊಟ್ಟು ಪೆರ್ಮನ್ನೂರಿನ ಸಂತ ಸೆಬೆಸ್ಟಿಯನ್ ಧರ್ಮಕೇಂದ್ರದ ಶತಮಾನೋತ್ಸವ ಸಂಭ್ರಮದ ಪ್ರಯುಕ್ತ ಸೆಬೆಸ್ಟಿಯನ್ ಚರ್ಚ್ ವಠಾರದಲ್ಲಿ ಶುಕ್ರವಾರ ನಡೆದ ಧರ್ಮಕೇಂದ್ರದ ಸಮೂಹ ಶಿಕ್ಷಣ ಸಂಸ್ಥೆಗಳ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಯಾವುದೇ ಸಂಸ್ಥೆ 60 ವರ್ಷ ದಾಟಿದರೆ ಆ ಸಂಸ್ಥೆ ಶಾಶ್ವತವಾಗಿ ಅಭಿವೃದ್ಧಿಯ ಪಥದತ್ತ ಸಾಗುತ್ತದೆ. ಈ ನಿಟ್ಟಿನಲ್ಲಿ ಶತಮಾನೋತ್ಸವ ಆಚರಿಸುತ್ತಿರುವ ಸಂತ ಸೆಬಾಸ್ಟಿಯನ್ ಚರ್ಚ್ ಮತ್ತು ಅದರ ಶಿಕ್ಷಣ ಸಂಸ್ಥೆಗಳು ಕೇವಲ ಒಂದು ಧರ್ಮಕ್ಕೆ ಸೀಮಿತವಾಗಿರದೆ ಪರರಿಗಾಗಿ ವ್ಯಕ್ತಿಗಳನ್ನು ರೂಪಿಸುವ ಕಾರ್ಯವನ್ನು ಈ ಸಂಸ್ಥೆ ನಡೆಸುತ್ತಿರುವುದು ಶ್ಲಾಘನೀಯ ಎಂದರು.

ಸಂತ ಸೆಬಾಸ್ಟಿಯನ್ ಧರ್ಮಕೇಂದ್ರದ ಧರ್ಮಗುರು ವಂ| ಡಾ| ಜೆ.ಬಿ.ಸಲ್ದಾನ ಮಾತನಾಡಿ ಶತಮಾನೋತ್ಸವ ಆಚರಿಸುವ ಭಾಗ್ಯ ಎಲ್ಲರಿಗೂ ಸಿಗುವುದಿಲ್ಲ. ಇದೋಮದು ಅನಂತ ಭಾಗ್ಯವಾಗಿದ್ದು, ಚರ್ಚ್‍ನ ಶಿಕ್ಷಣ ಸಂಸ್ಥೆಗಳಲ್ಲಿ ನೂರಾರು ಶಿಕ್ಷಕರು ಸಾವಿರಾರು ವಿದ್ಯಾರ್ಥಿಗಳು ಇಲ್ಲಿ ಕುಟುಂಬ ಜೀವನವನ್ನು ನಡೆಸುವುದರಿಂದ ಮೌಲ್ಯಾಧಾರಿತ ಶಿಕ್ಷಣ ನೀಡಲು ಸಾದ್ಯವಾಗಿದ್ದು, ಈ ನಿಟ್ಟಿನಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಹೆತ್ತವರ ಪ್ರೋತ್ಸಾಹದಿಂದ ಸಾಧ್ಯವಾಗಿದೆ ಎಂದರು.

ಕ್ಯಾಥೊಲಿಕ ಬೋರ್ಡ್ ಆಫ್ ಎಜುಕೇಶನ್‍ನ ಕಾರ್ಯದರ್ಶಿ ಫಾ| ಜೆರಾಲ್ಡ್ ಡಿ’ಸೋಜ, ಪಬ್ಲಿಕ್ ಇನ್‍ಸ್ಟ್ರಕ್ಷನ್‍ನ ಡೆಪ್ಯುಟಿ ಡೈರೆಕ್ಟರ್ ವೈ ಶಿವರಾಮಯ್ಯ , ಬಿಇಒ ಎಂ.ಪಿ. ಜ್ಞಾನೇಶ್, ನಗರಸಭೆಯ ಪೌರಾಯುಕ್ತೆ.ವಾಣಿ ವಿ.ಆಳ್ವ, ಬೆಥನಿ ಸಿಸ್ಟರ್ಸ್ ಪ್ರೊವೆನ್ಸಿಯಲ್ ಸುಪೀರಿಯರ್ ಸಿಸ್ಟರ್ ಸಿಸಿಲಿಯಾ ಮೆಂಡೋನ್ಸಾ, ಅರ್ಸುಲೈನ್ಸ್ ಸಿಸ್ಟರ್ಸ್ ರಿಟಾ ವಾಸ್, ಚಾಮರಾಜನಗರ ಜಿಲ್ಲಾ ಕ್ರೈಮ್ ರೆಕಾರ್ಡ್ ಬ್ಯೂರೋದ ಪ್ರಮೋದ್ ಕುಮಾರ್ ಪಿ, ನ್ಯಾಯವಾದಿ ಗಂಗಾಧರ್ ಉಳ್ಳಾಲ, ಉಳ್ಳಾಲ ಪುರಸಭಾ ಮಾಜಿ ಅದ್ಯಕ್ಷ ದಿನಕರ್ ಉಳ್ಳಾಲ್, ಶಾಲಾ ಆಡಳಿತ ಸಮಿತಿಯ ಸದಸ್ಯ ಮೌರೀಸ್ ಮೊಂತೇರೊ ಭಾಗವಹಿಸಿದ್ದರು.

ಜಾಹೀರಾತು

ಚರ್ಚ್ ಪಾಲನಾ ಪರಿಷತ್‍ನ ಉಪಾಧ್ಯಕ್ಷ ಮೆಲ್ವಿನ್ ಡಿಸೋಜ, ಕಾರ್ಯದರ್ಶಿ ರೊನಾಲ್ಡ್ ಫೆರ್ನಾಂಡೀಸ್, ಪ್ರಾಂಶುಪಾಲ ಫಾ| ಎಡ್ವಿನ್ ಮಸ್ಕರೇಸ್, ಕಾರ್ಯದರ್ಶಿ ಜೊಸ್ಲಿನ್ ಡಿ.ಸೋಜ, ಸಹಾಯಕ ಧರ್ಮಗುರುಗಳಾದ ಫಾ| ಸ್ಟ್ಯಾನಿ ಪಿಂಟೋ, ಫಾ| ಲೈಝಿಲ್ ಡಿಸೋಜ, ಫಾ| ಫೆಲಿಕ್ಸ್ ನೊರೊನ್ಹ , ಶಿಕ್ಷಣ ಸಂಸ್ಥೆಗಳ ರಕ್ಷಕ ಶಿಕ್ಷಕ ಸಂಘದ ಪದಾ„ಕಾರಿಗಳು, ನಿವೃತ್ತ ಮುಖ್ಯೋಪಾಧ್ಯಾಯರು, ಹಾಲಿ ಮುಖ್ಯೋಪಾಧ್ಯಾಯರು ಮತಉ ಶಿಕ್ಷಕರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಚರ್ಚ್‍ನ ಶಿಕ್ಷಣ ಸಂಸ್ಥೆಗಳಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಲಾಯಿತು.
ಶತಮಾನೋತ್ಸವ ಸಮಿತಿ ಸಂಯೋಜಕ ಡೆಮೆಟ್ರಿಯಸ್ ಡಿ.ಸೋಜ ಸ್ವಾಗತಿಸಿದರು. ಚರ್ಚ್ ಪಾಲನಾ ಪರಿಷತ್‍ನ ಕಾರ್ಯದರ್ಶಿ ರೊನಾಲ್ಡ್ ಫೆರ್ನಾಂಡೀಸ್ ವಂದಿಸಿದರು.ಉಪನ್ಯಾಸಕರಾದ ಅರುಣ್ ಉಳ್ಳಾಲ್ ಹಾಗೂ ಚೈತ್ರ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

Exit mobile version