Site icon Ullalavani

ಪೆರ್ಮನ್ನೂರು:ಸಮೂಹ ಶಿಕ್ಷಣ ಸಂಸ್ಥೆಗಳ ದಿನಾಚರಣೆಯ ಅಂಗವಾಗಿ ಕೃತಜ್ಞಾತಾ ಪೂಜೆ

UN NETWORKS

ತೊಕ್ಕೊಟ್ಟು: ಇಲ್ಲಿನ ಪೆರ್ಮನ್ನೂರು ಸಂತ ಸೆಬೆಸ್ಟಿಯನ್ ಧರ್ಮಕೇಂದ್ರದ ಶತಮಾನೋನ್ಸವ ಸಂಭ್ರಮದ ಪ್ರಥಮ ದಿನವಾದ ಶುಕ್ರವಾರ ಧರ್ಮಕೇಂದ್ರದ ಸಮೂಹ ಶಿಕ್ಷಣ ಸಂಸ್ಥೆಗಳ ದಿನಾಚರಣೆಯ ಅಂಗವಾಗಿ ಕೃತಜ್ಞಾತಾ ಪೂಜೆ ಧರ್ಮಕೇಂದ್ರದಲ್ಲಿ ನಡೆಯಿತು.

ಶಿವಮೊಗ್ಗ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತೀ ವಂದನೀಯ ಡಾ| ಫ್ರಾನ್ಸಿಸ್ ಸೆರಾವೊ,ಪೂಜೆ ನೆರವೇರಿಸಿ ಶಿಕ್ಷಣ ಸಂಸ್ಥೆಗಳು ಜಾತಿ ಮತ ಭೇದ ಮರೆತು ಇತರರಿಗೆ ಬೆಳಕು ನೀಡುವ ದೀಪವಾಗಬೇಕು ಎಂದರು.

ಪೆರ್ಮನ್ನೂರು ಸಂತ ಸೆಬೆಸ್ಟಿಯನ್ ಧರ್ಮಕೇಂದ್ರದ ಧರ್ಮಗುರು ವಂ| ಡಾ| ಜೆ. ಬಿ. ಸಲ್ಡಾನ್ಹಾ , ಕಥೋಲಿಕ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ವಂದನೀಯ ಜೆರಾಲ್ಡ್ ಡಿ’ಸೋಜ, ಸಂತ ಸೆಬೆಸ್ಟಿಯನ್ ಧರ್ಮಕೇಂದ್ರ ಸಹಾಯಕ ಧರ್ಮಗುರುಗಳಾದ ಫಾ| ಸ್ಟ್ಯಾನಿ ಪಿಂಟೊ, ಫಾ| ಲೈಝಿಲ್ ಡಿ’ಸೋಜ, ಸಂತ ಸೆಬೆಸ್ಟಿಯನ್ ಶಿಕ್ಷಣ ಸಂಸ್ಥೆಗಳು ಪ್ರಾಂಶುಪಾಲ ಫಾ| ಎಡ್ವಿನ್ ಮಸ್ಕರೇನಸ್, ವಂ| ಫೆಲಿಕ್ಸ್ ನೊರೊನ್ಹಾ , ಧರ್ಮಭಗಿನಿಯರು, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Exit mobile version