Site icon Ullalavani

ಬಾಳೆಪುಣಿ: ಸೋಲಾರ್ ದೀಪಗಳ ಉದ್ಘಾಟನೆ

UN NETWORKS

ಬಾಳೆಪುಣಿ: ಬಾಳೆಪುಣಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ನಾರ್ಯ ಎಂಬಲ್ಲಿ ಎಸ್ಸಿ ಎಸ್ಟಿ ಕಾಲೋನಿಯ ಬಾಳೆಪುಣಿ ಮೂರನೇ ವಾರ್ಡ್ ನಲ್ಲಿ ಇಂದು ಪಂಚಾಯಿತಿಯ ಗೌರವಾನ್ವಿತ ಸದಸ್ಯರಾದ ಭಾಸ್ಕರ್ ಕೋಟ್ಯಾನ್ ಅವರ ನೇತೃತ್ವದಲ್ಲಿ ವಾರ್ಡಿನ ಇತರೆ ಸದಸ್ಯರುಗಳಾದ  ಸರಸ್ವತಿ ,ಹರಿಣಾಕ್ಷಿ ,ಲಕ್ಷ್ಮಣ ಗಟ್ಟಿ ಇವರುಗಳ ಹದಿನಾಲ್ಕನೇ ಹಣಕಾಸಿನ ಯೋಜನೆಯ ಅನ್ವಯ 5 ಸೋಲಾರ್ ವಿದ್ಯುತ್ ದೀಪಗಳನ್ನು ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ  ಸಂತೋಷ್ ಕುಮಾರ್ ರೈ ಬೋಳಿಯಾರ್ ಇವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಬಾಳೆಪುಣಿ ಗ್ರಾಮ ಪಂಚಾಯತ್ ಸದಸ್ಯರಾದ ಲೋಹಿತ್ ವಿ ಗಟ್ಟಿ ,ಬಾಳೆಪುಣಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ  ಲೀಲಾವತಿ ಭಾಸ್ಕರ್ ಮಂಗಳೂರು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಪ್ರಧಾನ ಕಾರ್ಯದರ್ಶಿಗಳಾದ ಮುನೀರ್ ಮಾಸ್ಟರ್ ಬಾಳೆಪುಣಿ ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ರಾದ ಮಹೇಶ್ ಚೌಟ ,ಕಾರ್ಯದರ್ಶಿಗಳಾದ ಯೋಗೀಶ್ ,ಮಂಗಳೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡರುಗಳಾದ ಯಶವಂತ ಅಮೀನ್ ,ಸಂಜೀವ ಶೆಟ್ಟಿ ,ಸ್ಥಳೀಯ ಬಿಜೆಪಿ ಪ್ರಮುಖರಾದ ರಾಮಕೃಷ್ಣ ಶಾಸ್ತ್ರಿ ,ಕಮಲಾಕ್ಷ ಗಟ್ಟಿ ,ಶೈಲೇಶ್, ಹೇಮಚಂದ್ರ ಸ್ಟೈಲೊ, ಬಾಲಚಂದ್ರ ಅಚಾರ್ಯ, ಚಂದ್ರಶೇಖರ ನಾರ್ಯ ಪೂವಪ್ಪ ನಾರ್ಯ ರವೀಂದ್ರ ಎಸ್ ಕೋಟ್ಯಾನ್ ,ಸುನಿಲ್ ಗಟ್ಟಿ ಮುಂತಾದ ನಾಯಕರುಗಳು ಉಪಸ್ಥಿತರಿದ್ದರು.

Exit mobile version