UN NETWORKS
ತಲಪಾಡಿ : ತಲಪಾಡಿ, ದೇವಿನಗರ ಶ್ರೀ ರಕ್ತೇಶ್ವರೀ ಸೇವಾ ಟ್ರಸ್ಟ್ ಇವರ ವತಿಯಿಂದ ಜ. 19 ರಿಂದ ಜ. 26ರ ವರೆಗೆ ಹರಿಕಥಾ ಸಪ್ತಾಹ ಮತ್ತು ಶ್ರೀ ದೇವಿಗೆ ಹೂವಿನ ಪೂಜೆ ಹಾಗೂ ಯಕ್ಷಗಾನ ಬಯಲಾಟ ತಲಪಾಡಿ ದೇವಿನಗರದ ಗಂಗನಿಲಯದಲ್ಲಿ ನಡೆಯಲಿದೆ.
ವೇದಮೂರ್ತಿ ಶ್ರೀ ಬಾಲಕೃಷ್ಣ ಭಟ್ ಪಂಜಾಳ ಅವರ ಉಪಸ್ಥಿತಿಯಲ್ಲಿ ಪ್ರೊ| ಎಂ. ಬಿ. ಪುರಾಣಿಕ್, ಸುನಂದಾ ಎಂಬಿ ಪುರಾಣಿಕ್ ಹರಿಕಥಾ ಸಪ್ತಾಹದ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ.
ಹರಿಕಥಾ ಸಪ್ತಾಹದಲ್ಲಿ ಭಕ್ತ ಕನಕದಾಸ, ಭಕ್ತ ಪುಂಡರೀಕ, ಭಕ್ತ ಹನುಮ, ಭಕ್ತ ಪ್ರಹ್ಲಾದ, ಭಕ್ತ ತುಳಸಿದಾಸ, ಭಕ್ತ ಪುರಂದರದಾಸ, ಭಕ್ತ ಕುಚೇಲ ಎಂಬಿತ್ಯಾದಿ ಹರಿಕಥೆಗಳ ಕಥಾಭಾಗವನ್ನು ಪ್ರಸ್ತುತಪಡಿಸಲಿದ್ದಾರೆ ಎಂದು ಟ್ರಸ್ಟ್‍ನ ಪ್ರಕಟಣೆ ತಿಳಿಸಿದೆ.