Site icon Ullalavani

ಕೆ.ಸಿ ರೋಡು 26ನೇ ದ್ಸಿಕ್ರ್ ವಾರ್ಷಿಕ- ಜ,18 ರಿಂದ ಜ, 25ರ ತನಕ ಧಾರ್ಮಿಕ ಮತ ಪ್ರವಚನ

UN NETWORKS

ಕೋಟೆಕಾರು :ಅಲ್-ಮುಬಾರಕ್ ಜುಮಾ ಮಸೀದಿ ಕೆ.ಸಿ ರೋಡು ಕೋಟೆಕಾರು ಇದರ 26ನೇ ದ್ಸಿಕ್ರ್ ವಾರ್ಷಿಕದ ಪ್ರಯುಕ್ತ 8ದಿವಸಗಳ ಧಾರ್ಮಿಕ ಮತ ಪ್ರವಚನ ಜ ,18ರಿಂದ25ತನಕ ಪ್ರತಿ ದಿನ ರಾತ್ರಿ 7.30ಕ್ಕೆ ಅಲ್-ಮುಬಾರಕ್ ಮಸೀದಿ ವಠಾರದಲ್ಲಿ ನಡೆಯಲಿದೆ.
ಜ,18ರಂದು ಖಾಝಿ ಅಸ್ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಕೂರ ದುಅದೊಂದಿಗೆ ಮಸೀದಿ ಅಧ್ಯಕ್ಷ ಎ.ಎಂ ಅಬ್ಬಾಸ್ ಹಾಜಿ ಅಧ್ಯಕ್ಷತೆಯಲ್ಲಿ ಕೆ.ಪಿ ಹುಸೈನ್ ಸ ಅದಿ ಕೆ.ಸಿ ರೋಡು ಮತ್ತು ಮುದರ್ರಿಸ್ ಮುನೀರ್ ಸಖಾಫಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ.

ಜ,19ರಂದು ಖಾಝಿ ಪಿ.ಎಂ ಇಬ್ರಾಹಿಂ ಮುಸ್ಲಿಯಾರ್ ಬೆಕಲ್, ಜ,20ರಂದು ಅಬ್ದುಲ್ ಮಜೀದ್ ಬಾಖವಿ, ಜ,21ರಂದು ರಫೀಕ್ ಸ ಅದಿ ದೇಲಂಪಾಡಿ, ಜ,22ರಂದು ನೌಫಲ್ ಸಖಾಫಿ ಕಳಸ, ಜ,23ರಂದು ಹಂಝ ಮಿಸ್ಬಾಹಿ ಓಟೆಪದವು, ಜ,24ರಂದು ಹುಸೈನ್ ಸ ಅದಿ ಕೆ.ಸಿ ರೋಡು ಮುಂತಾದವರು ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಜ,25ರಂದು ದ್ಸಿಕ್ರ್ ವಾರ್ಷಿಕ ಸಮಾರೋಪ ಸಮಾರಂಭ ಅಸ್ಸಯ್ಯಿದ್ ಅಬ್ದುರ್ರಹ್ಮಾನ್ ಇಂಬಿಚ್ಚಿಕೋಯ ತಂಙಳ್ ಬಾಯರ್ ಕೂಟು ಪ್ರಾರ್ಥನೆ ನೇತೃತ್ವದಲ್ಲಿ ಎಂಎಸ್ಎಂ ಅಬ್ದುರ್ರಶೀದ್ ಝೈನಿ ಕಾಮಿಲ್ ಮತ್ತು ಉಚ್ಚಿಲ ಮುದರ್ರಿಸ್ ಇಬ್ರಾಹಿಂ ಫೈಝಿ ಮುಖ್ಯ ಪ್ರಭಾಷಣ ಗೈಯಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Exit mobile version