UN NETWORKS
ಉಳ್ಳಾಲ: ಬಿಳಿ ತಲೆ ಹುಳ ಬಾಧೆಯಿಂದ ಉಳ್ಳಾಲ ಭಾಗದಲ್ಲಿ ಸತ್ತುಬಿದ್ದಿರುವ ತೆಂಗಿನಮರ ಹೊಂದಿದ್ದ ರೈತರಿಗೆ ಸಚಿವರಾಗಲಿ, ಸಂಸದರಾಗಲಿ ಪರಿಹಾರವಾಗಿ ವಿಶೇಷ ಪ್ಯಾಕೇಜನ್ನು ನೀಡಲು ವಿಫಲರಾಗಿದ್ದು, ತುರ್ತಾಗಿ ಪರಿಹಾರ ಕ್ರಮಕೈಗೊಳ್ಳದೇ ಇದ್ದಲ್ಲಿ ಸರ್ವೋಚ್ಛ ನ್ಯಾಯಾಲಯದಲ್ಲಿ ದಾವೆ ಹೂಡುವುದಾಗಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಮುಖಂಡ ಮನೋಹರ್ ಶೆಟ್ಟಿ ಎಚ್ಚರಿಕೆ ನೀಡಿದ್ದಾರೆ.
ಕಲ್ಲಾಪು ಸಭೆಯಲ್ಲಿಯೂ ಸತ್ತ ಗಿಡಗಳನ್ನು ಕಡಿದು, ಅದೇ ಸ್ಥಳದಲ್ಲಿ ಬೇರೆ ಗಿಡಗಳನ್ನು ನೆಡಲು ಇಲಾಖೆ ವತಿಯಿಂದ ಸೂಚಿಸಲಾಗಿತ್ತು. ಆದರೆ ಇತರೆ ಕಾರ್ಯಗಳಿಗೆ ಕೋಟ್ಯಂತರ ರೂ ವ್ಯಯಿಸುತ್ತಿರುವ ಸರಕಾರ ಕನಿಷ್ಟ ಬೆಳೆ ನಷ್ಟ ಪರಿಹಾರ, ಕಡಿದ ಮರಗಳ ಸ್ಥಳದಲ್ಲಿ ನೂತನವಾಗಿ ಸಂಶೋಧಿಸಲಾದ ಡಾರ್ಫ್ ( ಕುಬ್ಜ) ಬಹುಬೇಗ ಬೆಳೆಯುವ ಗಿಡಗಳನ್ನು ಉಚಿತವಾಗಿ ನೀಡುವ ಮೂಲಕ ಅಮೂಲ್ಯ ತೆಂಗಿನ ಮರಗಳನ್ನು ಪುನರುಜ್ಜೀವನಗೊಳಿಸುವಲ್ಲಿ ಶ್ರಮಿಸಬೇಕಿದೆ. ತುರ್ತಾಗಿ ಕ್ರಮಕೈಗೊಳ್ಳದೇ ಇದ್ದಲ್ಲಿ ಸರ್ವೋಚ್ಛ ನ್ಯಾಯಾಲಯದ ಮೂಲಕ ದಾವೆ ಹೂಡಿ ರೈತರಿಗೆ ನ್ಯಾಯ ಒದಗಿಸಲು ರೈತ ಸಂಘ ಹಸಿರು ಸೇನೆ ಸಿದ್ಧ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.