Site icon Ullalavani

ಯುವವೈದ್ಯರ ಕೌಶಲ್ಯವೃದ್ಧಿಗೆ ಕಾರ್ಯಗಾರಗಳು ಪೂರಕ: ಡಾ. ಚಾರು ಏಪನ್

UN NETWORKS

ಉಳ್ಳಾಲ: ಯುವ ವೈದ್ಯರ ಕೌಶಲ್ಯ ವೃದ್ಧಿಯೊಂದಿಗೆ ಭೌತಚಿಕಿತ್ಸೆ ಅಭಿವೃದ್ಧಿಗೆ ಕಾರ್ಯಗಾರ ಪೂರಕವಾಗಿದೆ ಎಂದು ಮಂಗಳೂರು ಕೆಎಂಸಿ ಆಸ್ಪತ್ರೆಯ ಫಿಸಿಯೋಥೆರಪಿ ವಿಭಾಗ ಮುಖ್ಯಸ್ಥೆ ಡಾ. ಚಾರು ಏಪನ್ ಅಭಿಪ್ರಾಯಪಟ್ಟರು.

ಅವರು `ಭೌತಚಿಕಿತ್ಸೆಯಲ್ಲಿ ಉದ್ಯಮಶೀಲತೆ ‘ ವಿಚಾರದ ಕುರಿತ ಪೂರ್ವಭಾವಿ ವೈಜ್ಞಾನಿಕ ಕಾರ್ಯಗಾರವನ್ನು ದೇರಳಕಟ್ಟೆಯ ಕ್ಷೇಮ ಆಡಿಟೋರಿಯಂನಲ್ಲಿ ಮಂಗಳವಾರ ಉದ್ಘಾಟಿಸಿ ಮಾತನಾಡಿದರು. ವೈದ್ಯಕೀಯ ಕಾಲೇಜುಗಳ ಕಲಿಕೆಯಲ್ಲಿ ಯುವವೈದ್ಯರು ಸಾಕಷ್ಟು ಜ್ಞಾನದ ಕೊರತೆಯನ್ನು ಅನುಭವಿಸುತ್ತಾರೆ. ಇದರಿಂದ ವೃತ್ತಿ ಜೀವನದಲ್ಲಿ ಅನಾನುಕೂಲಗಳು ಆಗುವ ಸಾಧ್ಯತೆಗಳಿರುತ್ತವೆ. ಇತರೆ ವಿಭಾಗಗಳ ಜತೆಗೆ ಸೇರಿಕೊಂಡು ಜ್ಞಾನವನ್ನು ವೃದ್ಧಿಸುವುದರ ಜತೆಗೆ , ಕಾರ್ಯಗಾರದಲ್ಲಿ ಸಿಗುವ ಮಾಹಿತಿಗಳಿಂದ ಕೌಶಲ್ಯ ವೃದ್ಧಿ ಜತೆಗೆ ಚಿಕಿತ್ಸಾ ವಿಧಾನವನ್ನು ಅಭಿವೃದ್ಧಿ ಪಡಿಸಬಹುದು ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಿಟ್ಟೆ ಸಂಸ್ಥೆಯ ಉಪಕುಲಪತಿ ಡಾ.ಸತೀಶ್ ಕುಮಾರ್ ಭಂಡಾರಿ ಮಾತನಾಡಿ ಫಿಸಿಯೋಥೆರಪಿಸ್ಟ್ ಗಳು ನಾವೀನ್ಯತೆಯನ್ನು ಹುಡುಕುವುದರ ಜತೆಗೆ ವಿಭಿನ್ನವಾಗಿ ಯೋಚಿಸುವ ಮನಸ್ಥಿತಿಯನ್ನು ಬೆಳೆಸಬೇಕಿದೆ. ವಿಫಲತೆಗಳನ್ನು ಎದುರಿಸಲು ಸಿದ್ಧರಾದಂತೆ ವೃತ್ತಿ ಜೀವನದಲ್ಲಿ ಯಶಸ್ಸನ್ನು ಕಾಣುತ್ತೀರಿ ಎಂದರು.

ಡಾ.ಪುರುಷೋತ್ತಮ್ ಚಿಪ್ಪಲ ಉಪಸ್ಥಿತರಿದ್ದರು. ನವದೆಹಲಿಯ ಮನೋವಿಜ್ಞಾನ ಸ¯ಹೆಗಳ ಮಾತುಗಾರ ಅಕ್ಷಯ್ ಅಗರವಾಲ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.

ಕ್ಷೇಮ ಫಿಸಿಯೋಥೆರಪಿ ಕಾಲೇಜು ಪ್ರಾಂಶುಪಾಲ ಡಾ| ಧಾನೇಶ್ ಕುಮಾರ್ ಕೆ.ಯು ಸ್ವಾಗತಿಸಿದರು. ಡಾ.ಅಜಯ್ ಥಾಕೂರ್ ಕಾರ್ಯಕ್ರಮ ನಿರೂಪಿಸಿದರು. ರಾಕೇಶ್ ಕೃಷ್ಣ ವಂದಿಸಿದರು.

Exit mobile version