Site icon Ullalavani

ಕೆ.ಸಿ.ನಗರ: ಎಸ್.ಕ್ಯೂ.ಎಸ್ ಕಾಲೇಜಿನಲ್ಲಿ ಕ್ರೀಡೋತ್ಸವ ಉದ್ಘಾಟನೆ

UN NETWORKS

ಉಳ್ಳಾಲ: ತಲಪಾಡಿ ಕೆ.ಸಿ.ನಗರದ ಸ್ಕೂಲ್ ಆಫ್ ಕುರಾನಿಕ್ ಸ್ಟಡೀಸ್ ಅರೇಬಿಕ್ ಕಾಲೇಜಿನಲ್ಲಿ ವಾರ್ಷಿಕ ಕ್ರೀಡೋತ್ಸವ ಕಾರ್ಯಕ್ರಮವು ನಡೆಯಿತು.

ಕ್ರೀಡೋತ್ವವನ್ನು ಉಳ್ಳಾಲ ಕ್ರಿಕೆಟ್ ಬೋರ್ಡ್‍ನ ಕಾರ್ಯದರ್ಶಿ ಫಯಾಝ್ ಪಟ್ಲ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಕ್ರೀಡೆಯು ಶಾಂತಿ ಸೌಹಾರ್ದತೆಯ ಸಂಕೇತವಾಗಿದ್ದು, ಇದು ನಮ್ಮಲ್ಲಿ ಉತ್ತಮ ದೈಹಿಕ ಸಾಮಥ್ರ್ಯವನ್ನು ವೃದ್ದಿಸುವುದಲ್ಲದೆ ನಮ್ಮಲ್ಲಿ ನಾಯಕತ್ವ ಗುಣವನ್ನು ಬೆಳೆಸುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಇಂತಹ ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಳ್ಳಬೇಕು. ಕ್ರೀಡೆಗಳಿಗೆ ಇಂದು ಬಹಳಷ್ಟು ಪ್ರೋತ್ಸಾಹಗಳು ಸಿಗುತ್ತಿದ್ದು, ಯುವ ಸಮುದಾಯ ಇಂತಹ ಅವಕಾಶಗಳನ್ನು ಬಳಸಿಕೊಂಡು ಮುನ್ನಡೆಯಬೇಕು ಎಂದು ಹೇಳಿದರು.

ಉಪಪ್ರಾಂಶುಪಾಲ ಸುಲೈಮಾನ್ ಪುರ್ಖಾನಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ವಿದ್ಯಾರ್ಥಿ ಮಹಮ್ಮದ್ ನಿಸಾರ್ ಕಾರ್ಯಕ್ರಮ ನಿರೂಪಿಸಿದರು. ಮರ್ಝಮ್ ಪಹದಿಯ್ಯ ಕಿರಾಅತ್ ಪಠಿಸಿದರು.

Exit mobile version