ತಲಪಾಡಿ: ಫಲಾಹ್ ಅನುದಾನಿತ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ರಕ್ಷಕ – ಶಿಕ್ಷಕರ ಸಮ್ಮಿಲನ, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮಾರ್ಗದರ್ಶನ ಕಾರ್ಯಾಗಾರ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ಸನ್ಮಾನ ಸಮಾರಂಭ ಇತ್ತೀಚಿಗೆ ಜರಗಿತು.
ಸಂಪನ್ಮೂಲ ವ್ಯಕ್ತಿಯಾದ ಖ್ಯಾತ ಶಿಕ್ಷಣ ತಜ್ಞ ಅಬ್ದುಲ್ ಖಾದರ್ ಕಡಬ ರವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಈ ಸಂದರ್ಭದಲ್ಲಿ ಎನ್‍ಎಂಎಂಎಸ್ ರಾಜ್ಯ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ರ್ಯಾಂಕ್ ಪಡೆದ ಸಜಿನಾ ಫರ್ವೀನ್ ಹಾಗೂ ನಸ್ರೀಯಾರನ್ನು ಸನ್ಮಾನಿಸಲಾಯಿತು. ವಿವಿಧ ವಿಭಾಗಗಳಲ್ಲಿ ಸಾಧನೆಗೈದ 81 ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾಸಂಸ್ಥೆಯ ಅಧ್ಯಕ್ಷರಾಗಿರುವ ಹಾಜಿ ಯು. ಬಿ ಮೊಹಮ್ಮದ್, ಉಪಾಧ್ಯಕ್ಷರಾದ ಟಿ ಎಂ ಅಬ್ಬಾಸ್, ಕಾರ್ಯದರ್ಶಿ ಟಿ ಎಂ ಬಶೀರ್, ಮಾಜಿ ಅಧ್ಯಕ್ಷ ಹಾಜಿ ಅಬ್ಬಾಸ್ ಮಜಲ್, ಮಾಜಿ ಕಾರ್ಯದರ್ಶಿ ಹಾಜಿ ಅರಬಿಕುಂಞ, ಕನ್ನಡ ಮಾಧ್ಯಮ ಪ್ರೌಢಶಾಲಾ ಮುಖ್ಯ ಶಿಕ್ಷಕ ಮಹಮ್ಮದ್ ರಫೀಕ್, ಆಂಗ್ಲ ಮಾಧ್ಯಮ ಪ್ರೌಢಶಾಲಾ ಮುಖ್ಯಶಿಕ್ಷಕಿ ಶ್ರಿಮತಿ ಆಯಿಶಾ ಸಬೀನಾ ಕೈಸೀರನ್, ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ವಿದ್ಯಾ ಡಿ’ ಸೋಜ ಮೊದಲಾದವರು ಉಪಸ್ಥಿತರಿದ್ದರು.
ಶಿಕ್ಷಕಿ ಚಂದ್ರಕಲಾ ಎಂ ಸ್ವಾಗತಿಸಿ, ಸಾಧನಾ ರಾವ್ ವಂದಿಸಿದರು. ಶ್ರೀಮತಿ ಐರಿನ್ ರೋಡ್ರಿಗಸ್ ಕಾರ್ಯಕ್ರಮ ನಿರೂಪಿಸಿದರು.