Site icon Ullalavani

ಚರ್ಚ್ ಸೇವೆ ನಡೆಸುವುದೆಂದರೆ ವಿಶೇಷ ಆಸಕ್ತಿ: ಸಚಿವ ಖಾದರ್

UN NETWORKS

ಉಳ್ಳಾಲ: ಚರ್ಚ್ ಸೇವೆ ನಡೆಸಲು ವಿಶೇಷ ಪ್ರೀತಿ, ಹಿಂದಿನ ಅವಧಿಯಲ್ಲಿ ನಸುಕಿನ ಜಾವ 4 ಗಂಟೆಯ ತನಕ ಇದ್ದು ರಾಣಿಪುರದ ಚರ್ಚಿನಲ್ಲಿ ಕಾಮಗಾರಿ ನಿರ್ವಹಿಸಿದ್ದೇವೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ಅವರು ಮುನ್ನೂರು ರಾಣಿಪುರ ಚರ್ಚ್ ವಠಾರಕ್ಕೆ ರೂ. 5 ಲಕ್ಷ ಅನುದಾನದಲ್ಲಿ ಇಂಟರ್‍ಲಾಕ್ ಅಳವಡಿಕೆಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.

ತಂದೆ ದಿ.ಯು.ಟಿ ಫರೀದ್ ಅವರ ಅವರ ಅಸೌಖ್ಯದ ಸಮಯದಲ್ಲಿ ಚರ್ಚ್ ಕಾಮಗಾರಿ ನಿಂತುಹೋಗಿತ್ತು. ತದನಂತರ ಶಾಸಕನಾದ ಸಂದರ್ಭ ಅದನ್ನು ಮುಂದುವರಿಸಿದ್ದೆವು. ಇದೀಗ ಗ್ರಾಮೀಣ ಪ್ರದೇಶದ ಸೌಂದರ್ಯೀಕರಣಕ್ಕೆ ಹೆಚ್ಚಿನ ಒತ್ತನ್ನು ನೀಡಲಾಗುತ್ತಿದ್ದು, ಅದಕ್ಕಾಗಿ ಚರ್ಚ್ ಆವರಣ ಅಭಿವೃದ್ಧಿಗೊಳಿಸುವ ಸಲುವಾಗಿ ಚರ್ಚಿನವರ ಬೇಡಿಕೆಯಂತೆ ಅಭಿವೃದ್ಧಿ ಕಾಮಗಾರಿಗೆ ರೂ. 5 ಲಕ್ಷ ಬಿಡುಗಡೆ ಮಾಡಲಾಗಿದೆ. ಮತ್ತೆ ಹೆಚ್ಚಿನ ಕಾಮಗಾರಿ ಕೈಗೊಂಡಲ್ಲಿ ಸರಕಾರದಿಂದ ನೆರವು ಕೊಡುವ ಭರವಸೆಯನ್ನು ನೀಡಿದರು.

ಜಾಹೀರಾತು

ಈ ವೇಳೆ ರಾಣಿಪುರ ಚರ್ಚ್ ಧರ್ಮಗುರು ಸಂತೋಷ್ ಡಿಸೋಜಾ, ತಾಲೂಕು ಪಂಚಾಯತ್ ಸದಸ್ಯೆ ವಿಲ್ಮಾ ಡಿಸೋಜ , ಮುನ್ನೂರು ಗ್ರಾ.ಪಂ ಸದಸ್ಯ ವಿಲ್ಫ್ರೆಡ್ , ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ನವೀನ್ ಡಿಸೋಜಾ , ಕರಾವಳಿ ಪ್ರಾಧಿಕಾರದ ಸಲಹಾ ಸಮಿತಿ ಸದಸ್ಯ ಪಿಯೂಷ್ ಮೊಂತೇರೊ , ಮಂಜನಾಡಿ ಯುವಕಾಂಗ್ರೆಸ್ ಮುಖಂಡ ಅಶ್ರಫ್ ಕಟ್ಟೆಮಾರ್, ರಫೀಕ್ ಕಲ್ಕಟ್ಟ, ಮುಂತಾದವರು ಉಪಸ್ಥಿತರಿದ್ದರು.

Exit mobile version