Site icon Ullalavani

ಮುಡಿಪು ಜಂಕ್ಷನ್‍ನಲ್ಲಿ ಹೈಮಾಸ್ಟ್ ದೀಪ ಉದ್ಘಾಟನೆ

UN NETWORKS

ಮುಡಿಪು: ಕುರ್ನಾಡು ಪಂಚಾಯಿತಿಯ 2017-18ನೇ ಸಾಲಿನ ಅನುದಾನದಿಂದ ಮುಡಿಪು ಜಂಕ್ಷನ್‍ನಲ್ಲಿ ನಿರ್ಮಿಸಲಾದ ಹೈಮಾಸ್ಟ್ ದೀಪದ ಉದ್ಘಾಟನೆಯು ಶುಕ್ರವಾರ ನಡೆಯಿತು.

ಹೈಮಾಸ್ಟ್ ದೀಪವನ್ನು ಉದ್ಘಾಟಿಸಿ ಮಾತನಾಡಿದ ಅಮ್ಮೆಂಬಳ ಸಹಕಾರಿ ಬ್ಯಾಂಕ್‍ನ ಹಿರಿಯರಾದ ಟಿ.ಜಿ.ರಾಜಾರಾಮ ಭಟ್ ಅವರು, ಮುಡಿಪು ಪ್ರದೇಶವು ಅಭಿವೃದ್ದಿ ಹೊಂದುತ್ತಿರುವ ಪ್ರದೇಶವಾದರೂ ಮುಡಿಪು ಜಂಕ್ಷನ್‍ನಲ್ಲಿ ಸರಿಯಾದ ದೀಪದ ವ್ಯವಸ್ಥೆ ಇಲ್ಲದೆ ಬಹಳಷ್ಟು ತೊಂದರೆಯಾಗುತ್ತಿತ್ತು. ಅಲ್ಲದೆ ಜಂಕ್ಷನ್ ಪ್ರದೇಶದಲ್ಲಿಯೇ ಹಲವಾರು ಕಳ್ಳತನ ಪ್ರಕರಣಗಳೂ ನಡೆದಿದ್ದವು. ಈ ಸಮಸ್ಯೆಯನ್ನು ಮನಗಂಡು ಭ್ರಷ್ಟಾಚಾರ ರಹಿತವಾಗಿ ಆಡಳಿತ ನಡೆಸುತ್ತಿರುವ ಕುರ್ನಾಡು ಪಂಚಾಯಿತಿ ಇದೀಗ ಹೈ ಮಾಸ್ಟ್ ದೀಪವನ್ನು ಒದಗಿಸಿಕೊಟ್ಟು ಮುಡಿಪನ್ನು ಬೆಳಗುವಂತಹ ಕೆಲಸವನ್ನು ಮಾಡಿದೆ ಎಂದರು.

ಮಂಗಳೂರು ವಿಧಾನಸಭಾ ಕ್ಷೇತ್ರದ ಬಿಜೆಪಿಯ ಅಧ್ಯಕ್ಷರಾದ ಸಂತೋಷ್ ಕುಮಾರ್ ಬೋಳಿಯಾರ್ ಮಾತನಾಡಿ, ಕುರ್ನಾಡು, ಮುಡಿಪು ಪ್ರದೇಶಗಳಲ್ಲಿ ಹಲವಾರು ಪ್ರತಿಷ್ಟಿತ ಕಂಪೆನಿಗಳು, ವ್ಯಾಪಾರಮಳಿಗೆಗೆಳು ಆರಂಭಗೊಂಡು ಅಭಿವೃದ್ಧಿ ಹೊಂದುತ್ತಿರುವ ಪ್ರದೇಶವಾಗಿ ಗುರುತಿಸಲ್ಪಟ್ಟಿದೆ. ಈ ಭಾಗದ ಅಭಿವೃದ್ಧಿಯಲ್ಲಿ ಇಲ್ಲಿಯ Pಕುರ್ನಾಡು ಪಂಚಾಯಿತಿಯ ಪ್ರಾಮಾಣಿಕ ಆಡಳಿತವೂ ಪ್ರಮುಖ ಕಾರಣವಾಗಿದೆ. ಅಭಿವೃದ್ಧಿಯಲ್ಲಿ ರಾಜಕೀಯ ಮಾಡದೆ ನಿಷ್ಟಾವಂತವಾಗಿ ಬ್ರಷ್ಟಾಚಾರ ರಹಿತವಾಗಿ ಕುರ್ನಾಡು ಪಂಚಾಯಿತಿ ಆಡಳಿತ ಈ ಭಾಗದ ಅಭಿವೃದ್ಧಿಗೆ ಪೂರಕವಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ಕುರ್ನಾಡು ಪಂಚಾಯಿತಿ ಅಧ್ಯಕ್ಷೆ ಶೈಲಜಾ ಮಿತ್ತಕೋಡಿ, ಉಪಾಧ್ಯಕ್ಷ ನಿತಿನ್ ಗಟ್ಟಿ, ತಾಲೂಕು ಪಂಚಾಯಿತಿ ಸದಸ್ಯರಾದ ನವೀನ್ ಪಾದಲ್ಪಾಡಿ, ಪಂಚಾಯಿತಿ ಸದಸ್ಯರಾದ ಗೋಪಾಲ ಬಂಗೇರ, ಶಿವಶಂಕರ ಭಟ್, ಪುಷ್ಪಾ, ಗೀತಾ, ಬಾಗಿ, ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಡಾ.ಮುನೀರ್ ಬಾವ, ಕುರ್ನಾಡು ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ಶಿವರಾಮ ಶೆಟ್ಟಿ, ಜಯಂತ್ ಪಾದಲ್ಪಾಡಿ, ವಿಕಾಸ್ ಎಂ, ವಿಠಲ್ ಕುಮಾರ್ ಶೆಟ್ಟಿ, ದೇವಪ್ಪ ಆಳ್ವ, ಪ್ರೇಮನಾಥ ಆಳ್ವ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Exit mobile version