UN NETWORKS
ಮಂಗಳೂರು: ಉಳ್ಳಾಲದ ಟಾರ್ಗೆಟ್ ಗ್ರೂಪ್ ಲೀಡರ್ ಕುಖ್ಯಾತಿ ಟಾರ್ಗೆಟ್ ಇಲ್ಯಾಸ್‍ನನ್ನು ತನ್ನ ಮನೆಯೊಳಗೆ ನುಗ್ಗಿದ ದುಷ್ಕರ್ಮಿಗಳು ಚೂರಿಯಿಂದ ಚುಚ್ಚಿ ಹತ್ಯೆಗೈದಿರುವ ಘಟನೆ ಕುಡ್ಪಾಡಿ ಮಸೀದಿ ಎದುರುಗಡೆಯ ಮಿಸ್ತಾಹ್ ಗೆಲೋರ್ ಅಪಾರ್ಟ್‍ಮೆಂಟಿನಲ್ಲಿ ಶನಿವಾರ ಮುಂಜಾನೆ ವೇಳೆ ಸಂಭವಿಸಿದೆ.
ಪತ್ನಿ ಹಾಗೂ ಒಂದೂವರೆ ವರ್ಷದ ಮಗುವಿನ ಜತೆಗೆ ಅಪಾರ್ಟ್‍ಮೆಂಟಿನಲ್ಲಿದ್ದ ವಾಸವಿದ್ದ ಇಲ್ಯಾಸ್ ಮನೆಗೆ ಬೆಳಿಗ್ಗೆ ಬಂದಿರುವ ದುಷ್ಕರ್ಮಿಗಳು, ಬಾಗಿಲು ತಟ್ಟಿದ್ದರು. ಖುದ್ದು ಇಲ್ಯಾಸ್ ಬಾಗಿಲು ತೆಗೆಯುತ್ತಿದ್ದಂತೆ ಇಬ್ಬರು ದುಷ್ಕರ್ಮಿಗಳು ಇಲ್ಯಾಸ್ ಎದೆಯ ಭಾಗಕ್ಕೆ ಚೂರಿಯಿಂದ ಚುಚ್ಚಿ ಪರಾರಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡು ತನ್ನ ಮನೆಯಲ್ಲೇ ಬಿದ್ದಿದ್ದ ಆತನನ್ನು ಕಂಕನಾಡಿಯ ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಮೃತಪಟ್ಟಿದ್ದಾರೆ. ಉಳ್ಳಾಲದಲ್ಲಿ ನಡೆದ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿ ವಾರೆಂಟ್ ಎದುರಿಸುತ್ತಿದ್ದ ಈತ , ಮುಕ್ಕಚ್ಚೇರಿ ಜುಬೈರ್ ಹತ್ಯೆ ನಂತರ ಉಳ್ಳಾಲ ಪೊಲೀಸರು ಬಂಧಿಸಿದ್ದರು. ಪಾಂಡೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ದುಷ್ಕರ್ಮಿಗಳಿಗಾಗಿ ಹುಡುಕಾಟ ಮುಂದುವರಿಸಿದ್ದಾರೆ.