Site icon Ullalavani

ಭಗತ್ ಸಿಂಗ್ ಸೇವಾ ಪ್ರತಿಷ್ಠಾನ ವತಿಯಿಂದ ವಿವೇಕ ಧ್ವನಿ – 2018 ಕಾರ್ಯಕ್ರಮ.

UN NETWORKS

ತೊಕ್ಕೊಟ್ಟು: ಭಗತ್ ಸಿಂಗ್ ಸೇವಾ ಪ್ರತಿಷ್ಠಾನ ತೊಕ್ಕೊಟ್ಟು  ಇದರ ವತಿಯಿಂದ ಸ್ವಾಮಿ ವಿವೇಕಾನಂದರ 155 ನೇ ಜನ್ಮದಿನಾಚರಣೆ ಪ್ರಯುಕ್ತ ವಿವೇಕ ಧ್ವನಿ -2018 ಕಾರ್ಯಕ್ರಮ ಮತ್ತು ಕೆ.ಎಮ್.ಸಿ. ವತಿಯಿಂದ ಮಣಿಪಾಲ್ ಆರೋಗ್ಯ ಕಾರ್ಡ್ ವಿತರಣೆ ಕಾರ್ಯಕ್ರಮ ತೊಕ್ಕೊಟು ಕ್ಲಿಕ್ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮ ಉಧ್ಟಾಟಿಸಿದ ಮಂಗಳೂರು ರಥಬೀದಿ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಡಾ.ನವೀನ್ ಕೊಣಾಜೆಯವರು ಸ್ವಾಮಿ ವಿವೇಕಾನಂದರು ಸನಾತನ ಹಿಂದೂ ಧರ್ಮ ಮತ್ತು ಭಾರತದ ಮಣ್ಣಿನ ಶಕ್ತಿಯನ್ನು ಸಮಗ್ರ ಜಗತ್ತಿಗೆ ಪರಿಚಯಿಸಿದ್ದ ವೀರ ಸನ್ಯಾಸಿ. ಇಂದಿನ ಯುವ ಸಮುದಾಯಕ್ಕೆ ಸರ್ವ ವಿಧದಲ್ಲೂ ಪ್ರೇರಣೆ ನೀಡುವ ಮಹಾನ್ ಮೇಧಾವಿ.ಅವರ ಮಾರ್ಗದರ್ಶನದ ಬೆಳಕಿನಿಂದ ಭಾರತ ವಿಶ್ವ ಗುರುವಾಗಲಿದೆ ಎಂದು ಹೇಳಿದರು.

ಕೆ.ಎಮ್.ಸಿ. ಅತ್ತಾವರದ ಸಾರ್ವಜನಿಕ ಸಂರ್ಪಕಧಿಕಾರಿ ರಾಕೇಶ್ ಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಆರೋಗ್ಯ ಬಗ್ಗೆ ಉಪಯುಕ್ತ ಮಾಹಿತಿ ನೀಡಿದರು. ಭಗತ್ ಸಿಂಗ್ ಸೇವಾ ಪ್ರತಿಷ್ಠಾನದ ಅಧ್ಯಕ್ಷರಾಗದ ಜೀವನ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ಸಾಮಾಜಿಕ ಕಾರ್ಯಕರ್ತರಾದ ಸೌರಜ್ ಮಂಗಳೂರು ಇವರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು

ಜಾಹೀರಾತು

ಪ್ರತಿಷ್ಠಾನದ ಗೌರವ ಸಲಹೆಗಾರರಾದ ಆನಂದ ಕೆ.ಅಸೈಗೋಳಿ, ಕೋಶಾಧಿಕಾರಿ ರಾಕೇಶ್ ಬೈಪಾಸ್ ಉಪಸ್ಥಿತಿತರಿದ್ದರು.
ಪ್ರ.ಕಾರ್ಯದರ್ಶಿ ಗಣೇಶ್ ಕಾಪಿಕಾಡ್ ಸ್ವಾಗತಿಸಿದರು. ಕಿರಣ್ ಕೊಲ್ಯ ಆರೋಗ್ಯ ಕಾರ್ಡ್ ಫಲಾನುಭವಿಗಳ ಪಟ್ಟಿ ಓದಿದರು. ಕೃಷ್ಣ ಪೊನ್ನೊತೋಡು ಪ್ರಾರ್ಥನೆಗೈದರು, ಪ್ರವೀಣ್ ಬಸ್ತಿ ವಂದಿಸಿದರು. ಪ್ರವೀಣ್ ಎಸ್.ಕುಂಪಲ ಮತ್ತು ಹರೀಶ್ ಅಂಬ್ಲ ಮೊಗರು ಕಾರ್ಯಕ್ರಮ ನಿರೂಪಿಸಿದರು.

Exit mobile version