Site icon Ullalavani

ತೊಕ್ಕೊಟ್ಟು ಚರ್ಚ್ ಶತಮಾನೋತ್ಸವದ ಪ್ರಯುಕ್ತ ಪವಿತ್ರ ಮೆರವಣಿಗೆ

UN NETWORKS

ತೊಕ್ಕೊಟ್ಟು : ತೊಕ್ಕೊಟ್ಟು ಪೆರ್ಮನ್ನೂರಿನ ಸಂತ ಸೆಬೆಸ್ತಿಯನ್ನರ ಧರ್ಮಕೇಂದ್ರದ ಶತಮನೋತ್ಸವದ ಸಮಾರೋಪ ಕಾರ್ಯಕ್ರಮದ ಉದ್ಘಾಟನೆಯ ಅಂಗವಾಗಿ ಪವಿತ್ರ ಮೂರ್ತಿಯ ಮೆರವಣಿಗೆ ವಾಹನ ಜಾಥಾದ ಮೂಲಕ ಸೋಮೆಶ್ವರದಿಂದ ತೊಕ್ಕೊಟ್ಟು ಧರ್ಮಕೇಂದ್ರದ ವರೆಗೆ ಬುಧವಾರ ಸಂಜೆ ನಡೆಯಿತು.

ಫೋಟೋ:ಪಚ್ಚು ಪೆರ್ಮನ್ನೂರು

ಶತಮಾನೋತ್ಸವದ ಧ್ವಜಾರೋಹಣ ಹಾಗೂ ಶತಮನೋತ್ಸವದ ಸಮಾರೋಪ ಸಮಾರಂಭದ ಉದ್ಘಾಟನೆಯನ್ನು ಮಂಗಳೂರು ಧರ್ಮಪ್ರಾಂತ್ಯದ ಫಾ. ವಿಕಾರ್ ಜನರಲ್ ಡೆನಿಸ್ ಮೊರಸ್ ಪ್ರಭುನೆರವೇರಿಸಿದರು.

ಪೂರ್ವಿ ತಯಾರಿಯಾಗಿ 9 ದಿವಸಗಳ ನೋವೆನ ಪ್ರಾರ್ಥನೆಗಳ ಮೊದಲ ದಿನದ ಪ್ರಾರ್ಥನೆ ನಡೆಯಿತು. ಈ ಸಂದರ್ಭ ಕುಟುಂಬಗಳಿಗಾಗಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಲಾಯಿತು. ಈ ಭಕ್ತಿವಿಧಿಯಲ್ಲಿಸಂತ ಸೆಬೆಸ್ಟಿಯನ್ ಧರ್ಮಕೇಂದ್ರದ ಧರ್ಮಗುರುಗಳಾದ ಫಾ| ಜೆ.ಬಿ. ಸಲ್ಡಾನ್ಹಾ, ಸಂತ ಸೆಬೆಸ್ಟಿಯನ್ ಧರ್ಮಕೇಂದ್ರದ , ಸಹಾಯಕ ಧರ್ಮಗುರುಗಳಾದ ಫಾ| ಸ್ಟ್ಯಾನಿ ಪಿಂಟೊ , |ಫಾ| ಲೈಝಿಲ್ ಡಿ’ಸೋಜ, ಸಂತ ಸೆಬೆಸ್ಟಿಯನ್ ಧರ್ಮಕೇಂದ್ರದ ಪ್ರಾಂಶುಪಾಲರಾದ ಫಾ| ಎಡ್ವಿನ್ ಮಸ್ಕರೇನಸ್, ತೊಕ್ಕೊಟ್ಟು ಡಿವೈನ್ ಸೆಂಟರಿನ ಫಾ| ಜೋಸೆಫ್, ನೆಹರುನಗರ ಆಲೋಶಿಯನ್ ಕಾನ್ವೆಂಟಿನ ಮುಖ್ಯಸ್ಥೆ ಸಿ| ಬೆನ್ನಿ ಬರೆಟ್ಟೊ, ಉಳ್ಳಾಲ ನಿರ್ಮಲ ಕಾನ್ವೆಂಟಿನ ಮುಖ್ಯಸ್ಥೆ ಸಿ| ಎಮ್ಮ ಜೊಸೇಫ್, ಪೆರ್ಮನ್ನೂರು ಬೆತೆಲ್ ಕಾನ್ವೆಂಟಿನ ಮುಖ್ಯಸ್ಥೆ ಸಿ| ಕಾರ್ಮಿನ್ ಮಿಸ್ಕಿತ್, ಸಂತ ಸೆಬೆಸ್ಟಿಯನ್ ಧರ್ಮಕೇಂದ್ರದ ಸೇವಾದರ್ಶಿ ಫ್ಲೇವಿಯನ್ ಲೋಬೊ, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷೆ ಮೆಲ್ವಿನ್ ಸಿ. ಡಿಸೋಜ, ಕಾರ್ಯದರ್ಶಿ ರೊನಾಲ್ಡ್ ಫೆರ್ನಾಂಡಿಸ್, ಶತಮಾನೋತ್ಸವ ಸಮಿತಿ ಉಪಾಧ್ಯಕ್ಷೆ ಡೆಮೆಟ್ರಿಯಸ್ ಡಿ’ಸೋಜ, ಕಾರ್ಯದರ್ಶಿ ಜೋಸ್ಲಿನ್ ಡಿ’ಸೋಜ, ಜೆರ್ಮಿ ಮೊಂತೆರೊ ಉಪಸ್ಥಿತರಿದ್ದರು.

Exit mobile version