UN NETWORKS
ಉಳ್ಳಾಲ: ಕೋಟೆಕಾರ್ ಪಟ್ಟಣ ಪಂಚಾಯತ್ ವ್ಯಾಪ್ತಿಯ ಒಂಭತ್ತನೇಯ ವಾರ್ಡಿನ ಶಾರದಾ ನಗರ ಹೌಸಿಂಗ್ ಕಾಲನಿಯ ಕಾಂಕ್ರೀಟೀಕರಣ ರಸ್ತೆ ಮತ್ತು ಸುಸಜ್ಜಿತವಾದ ಚರಂಡಿಯ ಉದ್ಘಾಟನೆಯನ್ನು ಶಾರದಾ ನಗರ ಅಭಿವೃದ್ಧಿ ಸೊಸೈಟಿಯ ಉಪಾಧ್ಯಕ್ಷ ರಮೇಶ್ ಹೆಬ್ಬಾರ್ ನೆರವೇರಿಸಿದರು.
ಶಾರದಾ ನಗರ ಅಭಿವೃದ್ಧಿ ಸೊಸೈಟಿಯ ಮಾಜಿ ಅಧ್ಯಕ್ಷ ನಾರಾಯಣ, ಸದಸ್ಯರಾದ ರಘುರಾಮ ಶೆಟ್ಟಿ,ಪೂರ್ಣಿಮಾ, ಪಾರ್ವತಿ ಮುರಳಿ,ಜಮೀಳಾ.ಕೆ, ಮುರಳಿ, ರವಿ ಕಿರಣ್, ಸವಿತಾ, ಖುರ್ಷಿದ ಬಾನು,ಹಸೀನಾ, ಶಹನಾಝ್,ಸಯ್ಯದ್ ಸಿಬಿತುಲ್ಲಾ, ಅಬ್ದುರ್ರಹಮಾನ್, ವನಿತಾ ಶೆಟ್ಟಿ, ಗುತ್ತಿಗೆದಾರ ಇಸ್ಮಾಯಿಲ್ ಉಪಸ್ಥಿತರಿದ್ದರು.