Site icon Ullalavani

ನಾಟೆಕಲ್ ದಾಂಧಲೆ : ವರ್ತಕರಿಂದ ಕಮೀಷನರ್ ಗೆ ಮನವಿ

UN NETWORKS

ಉಳ್ಳಾಲ: ನಾಟೆಕಲ್‍ನಲ್ಲಿ ಮಸೀದಿ, ಅಂಗಡಿಗಳಿಗೆ ದಾಂಧಲೆ ನಡೆಸಿ ಗಲಭೆಗೆ ಪ್ರಚೋದಿಸಿದ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳ ಹಿಂದಿರುವ ಶಕ್ತಿಗಳನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ನಾಟೆಕಲ್ ವರ್ತಕರ ಸಂಘ ಮಂಗಳೂರು ಪೊಲೀಸ್ ಆಯುಕ್ತ ಟಿ.ಆರ್ ಸುರೇಶ್ ಅವರಿಗೆ ಗುರುವಾರ ಮನವಿ ಸಲ್ಲಿಸಿತು.

ಜ.7 ರಂದು ರಕ್ಷೀದಿ ಮಸೀದಿಗೆ ನುಗ್ಗಿದ ಇಬ್ಬರು ದುಷ್ಕರ್ಮಿಗಳು ಉಸ್ತಾದರನ್ನು ಹುಡುಕಿ ಸಿಗದೇ ಇದ್ದಾಗ ಮಸೀದಿಯ ಪೀಠೋಪಕರಣಗಳನ್ನು ಹಾನಿಗೈದಿದ್ದರು. ಇದೇ ವೇಳೆ ನಾಟೆಕಲ್ ಪರಿಸರದಲ್ಲಿರುವ ಮೂರು ಅಂಗಡಿಗಳ ಸೊತ್ತುಗಳಿಗೂ ಹಾನಿ ನಡೆಸಿದ್ದರು. ಇದಕ್ಕೆ ಸಂಬಂಧಿಸಿದ ಪ್ರಮುಖ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರೂ, ಇವರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿ ಇವರ ಹಿಂದಿರುವ ಶಕ್ತಿಗಳನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.

                                                      ಜಾಹೀರಾತು  

ಈ ವೇಳೆ ನಾಟೆಕಲ್ ವರ್ತಕರ ಸಂಘದ ಅಧ್ಯಕ್ಷ ಹನೀಫ್, ಉಪಾಧ್ಯಕ್ಷ ಅನಂದ್. ಕಾರ್ಯದರ್ಶಿ ಇಮ್ರಾನ್, ಜೊತೆ ಕಾರ್ಯದರ್ಶಿ ಕೆ ಮೊಹಮ್ಮದ್. ಮಾಧ್ಯಮ ಸಲಹೆಗಾರ ಅಬ್ಬಾಸ್ ಕಿನ್ಯ, ಸದಸ್ಯರಾದ ಇಬ್ರಾಹಿಂ ಸಾಧಿಕ್, ಎ.ಎಸ್ ಮೊಹಮ್ಮದ್, ಹನೀಫ್ ನಡುದಾರಿ ಉಪಸ್ಥಿತರಿದ್ದರು.

Exit mobile version