UN NETWORKS
ಉಳ್ಳಾಲ: ಇಂದಿರಾ ಕ್ಯಾಂಟೀನ್ ತೆರೆದರೆ ತಮ್ಮ ವ್ಯಾಪಾರಕ್ಕೆ ತೊಂದರೆಯಾಗಬಹುದು ಎಂದು ಆತಂಕಿಸಿ ಕೆಲವು ಹೋಟೆಲ್‍ನವರು ಬೇರೆಯವರನ್ನು ಛೂ ಬಿಟ್ಟು ವಿರೋಧ ವ್ಯಕ್ತಪಡಿಸುತ್ತಿದ್ದು, ಉಳ್ಳಾಲದಲ್ಲಿ ಗುರುತಿಸಲಾಗಿರುವ ಖಾಲಿ ಜಾಗದಲ್ಲಿರುವ ಕೊರಗಜ್ಜನ ಕಟ್ಟೆಯನ್ನು ಯಾವುದೇ ಕಾರಣಕ್ಕೂ ತೆಗೆಯುವುದಿಲ್ಲ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ನಗರದ ಸರ್ಕ್ಯೂಟ್ ಹೌಸ್‍ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಕುಮಾರಸ್ವಾಮಿಗೆ ಖಾದರ್ ತಿರುಗೇಟು : ರಾಜಕೀಯ ಕಾರಣಗಳಿಗಾಗಿ ಹೇಳಿಕೆ ನೀಡುವಂತಹ ರಾಜಕೀಯ ಬೇಡ. ಕೊಲೆ ಪ್ರಕರಣ ಬಗ್ಗೆ ರಾಜಕೀಯ ಮಾಡುವುದು ಬೇಡ. ರಾಜಕೀಯ ಮಾಡಲು ಸಾಕಷ್ಟು ವಿಚಾರಗಳಿವೆ ಎಂದು ರಾಜ್ಯ ಆಹಾರ ಸಚಿವ ಯು.ಟಿ. ಖಾದರ್ ಜೆಡಿಎಸ್ ಮುಖಂಡ ಹೆಚ್,ಡಿ. ಕುಮಾರಸ್ವಾಮಿಯವರಿಗೆ ತಿರುಗೇಟು ನೀಡಿದ್ದಾರೆ. ದೀಪಕ್ ಕೊಲೆಪ್ರಕರಣ ಸಂಬಂದ ಕುಮಾರಸ್ವಾಮಿಯವರು ನೀಡಿರುವ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಕೊಲೆ ಪ್ರಕರಣ ದ ಹಿಂದಿರುವ ವಿಚಾರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ರಾಜಕೀಯ ಕಾರಣಕ್ಕಾಗಿ ಹೇಳಿಕೆ ಬೇಡ. ಅವರಿಗೆ ಮಾಹಿತಿ ಇದ್ದರೆ ಪೊಲೀಸರಿಗೆ ನೀಡಲಿ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅಪಪ್ರಚಾರ ಆಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಂಗಳೂರು ತಾಪಂ ಅಧ್ಯಕ್ಷ ಮುಹಮ್ಮದ್ ಮೋನು, ಕಾಂಗ್ರೆಸ್ ಮುಖಂಡರಾದ ಸುರೇಖಾ ಚಂದ್ರಹಾಸ್, ವಿಲ್ಮಾ ಡಿಸೋಜ, ಪಿಯುಶ್ ಮೊಂತೇರೊ, ಬಾಝಿಲ್ ಡಿಸೋಜ, ಜಬ್ಬಾರ್ ಬೋಳಿಯಾರ್, ಸುಹೈಲ್ ಕಂದಕ್, ಆಹಾರ ಇಲಾಖೆ ಉಪನಿರ್ದೇಶಕ ಜಯಪ್ಪ ಉಪಸ್ಥಿತರಿದ್ದರು.