Site icon Ullalavani

ಸ್ಚಚ್ಚತೆಯಿಂದ ಮಾದರಿ ಸಮಾಜ ನಿರ್ಮಿಸೋಣ: ಸೀತಾರಾಮ ಶೆಟ್ಟಿ

UN NETWORKS

ಮುಡಿಪು: ಸ್ವಚ್ಚತೆಯ ಬಗ್ಗೆ ಪ್ರತಿಯೊಬ್ಬರಲ್ಲೂ ಜಾಗೃತಿ ಮೂಡಿಸುವ ಕಾರ್ಯ ಆಗಬೇಕಾಗಿದ್ದು ಈ ನಿಟ್ಟಿನಲ್ಲಿ ಯುವ ಸಮುದಾಯ ಸ್ವಚ್ಚತೆಯೊಂದಿಗೆ ಮಾದರಿ ಸಮಾಜ ನಿರ್ಮಿಸಲು ಪಣತೊಡಬೇಕು ಎಂದು ಪಜೀರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸೀತಾರಾಮ ಶೆಟ್ಟಿ ಅವರು ಹೇಳಿದರು.

ಅವರು ಪಜೀರು ಗ್ರಾಮ ಪಂಚಾಯಿತಿ ವತಿಯಿಂದ ಕಂಬ್ಲಪದವು ಬಳಿ ಸ್ವಚ್ಚತೆಗಾಗಿ ನಡೆದ ಕಾಲ್ನಡಿಗೆ ಜಾಥಾವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು. ಇಂದು ದೇಶದೆಲ್ಲೆಡೆ ಸ್ವಚ್ಚತೆಯ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಇಂತಹ ಕಾರ್ಯಕ್ರಮಗಳಿಗೆ ನಾವೆಲ್ಲರೂ ಪ್ರೋತ್ಸಾಹಿಸುವುದರೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಡಿ.ಎಸ್.ಗಟ್ಟಿ, ಪಜೀರು ಪಂಚಾಯಿತಿ ಉಪಾಧ್ಯಕ್ಷರಾದ ಜ್ಯೋತಿ, ತಾಲೂಕು ಪಂಚಾಯಿತಿ ಸದಸ್ಯ ನವೀನ್ ಪಾದಲ್ಪಾಡಿ, ಮಾಜಿ ಸದಸ್ಯರಾದ ಉಮ್ಮರ್ ಪಜೀರು, ಪಂಚಾಯಿತಿ ಮಾಜಿ ಅಧ್ಯಕ್ಷರಾದ ಇಂತಿಯಾಝ್, ಪ್ಲೋರಿನ ಡಿಸೋಜ, ನಝೀರ್ ಮೊಯ್ದಿನ್, ಮುಖಂಡರಾದ ಪದ್ಮನಾಭ ನರಿಂಗಾನ, ಸಮೀರ್ ಪಜೀರು, ಸದಸ್ಯರಾದ ರಫೀಕ್ ಮೊದಲಾದವರು ಉಪಸ್ಥಿತರಿದ್ದರು.

Exit mobile version