UN NETWORKS
ಕೈರಂಗಳ : ಅಲ್-ಅಮೀನ್ ಫ್ರೆಂಡ್ಸ್ ಕೈರಂಗಳ ಇದರ 6ನೇ ವರ್ಷದ ಸವಿನೆನಪಿಗಾಗಿ ನರಿಂಗಾನ ಗ್ರಾಮದ ಡಿ.ಜಿ ಕಟ್ಟೆ ಎಂಬಲ್ಲಿ ನಿರ್ಮಿಸಿದ ಸಾರ್ವಜನಿಕ ಬಸ್ಸು ತಂಗುದಾಣವನ್ನು ತೋಟಾಲ್ ಜುಮಾ ಮಸೀದಿಯ ಖತೀಬ ಮುಹಿಯ್ಯದ್ದೀನ್ ಸ ಅದಿ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಹಂತ ಹಂತವಾಗಿ ಬೆಳೆದು ಬಂದ ಅಲ್-ಅಮೀನ್ ಸಂಘಟನೆ. ಬಸ್ ತಂಗುದಾನ ನಿರ್ಮಿಸಿ ಊರಿಗೆ ನೆರಳು ನೀಡುವ ಮೂಲಕ ರಾಜ್ಯಕ್ಕೆ ಮಾದರಿ ಸಂಘಟನೆಯಾಗಿದೆ ಅಲ್-ಅಮೀನ್ ಫ್ರೆಂಡ್ಸ್ ಎಂದು ಹೇಳಿದರು.
ಕರ್ನಾಟಕ ಬ್ಯಾಂಕ್ ಕೈರಂಗಳ ಬ್ರಾಂಚ್ ಮೆನೇಜರ್ ವಾಸುದೇವ್ ಮಾತನಾಡಿ ಪ್ರಯಾಣಿಕರಿಗೆ ನೆರಳು ನೀಡುವ ಮಹತ್ತರ ಕಾರ್ಯ ಮಾಡಿದ ಅಲ್-ಅಮೀನ್ ಸಂಸ್ಥೆ ಶ್ಲಾಘನೀಯ,ಸಂಸ್ಥೆಯು ಸೌಹಾರ್ದತೆಯ ಪ್ರತೀಕ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬಿಜೆಪಿ ಮಂಗಳೂರು ವಿಧಾನ ಸಭಾಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್ ಮಾತನಾಡಿ ದೇಶ ಯುವ ಸಮೂಹ ಇಂತಹ ಸಮಾಜಪರ ಕಾರ್ಯದಲ್ಲಿ ತೂಡಗಿಸಿದರೆ. ಭಾರತ ದೇಶ ಶ್ರೇಷ್ಠವಾಗಲು ಸಾಧ್ಯ. ಅಲ್-ಅಮೀನ್ ನಂತಹ ಸಂಘಟನೆಗಳು ಹಳ್ಳಿ ಹಳ್ಳಿಯಲ್ಲಿ ಹುಟ್ಟಿ ಬರಲಿ ಎಂದು ಆಶಿಸಿದರು.
ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಎ.ಎ ಹೈದರ್ ಪರ್ತಿಪ್ಪಾಡಿ, ಡಾ.ಎಸ್.ಎಸ್ ರಾಮ್, ಸಮಾಜ ಸೇವಕ ಹಾಜಿ ಎನ್.ಎಸ್ ಉಮರ್ ಸಿದ್ದೀಕ್ ಸುಟ್ಟ, ನರಿಂಗಾನ ಗ್ರಾ.ಪಂ ಸದಸ್ಯರಾದ ಸಿ.ಎಚ್ ರಹಿಮಾನ್ ಚಂದಹಿತ್ಲು, ಫಯಾಝ್ ಮೊಂಟೆಪದವು,ಮುರಳೀಧರ್ ಶೆಟ್ಟಿ, ಮುಡಿಪು ಬ್ಲಾಕ್ ಕಾಂಗ್ರೆಸ್ ಪ್ರ.ಕಾರ್ಯದರ್ಶಿ ಜಲೀಲ್ ಮೋಂಟುಗೋಳಿ, ತೋಟಾಲ್ ಜುಮಾ ಮಸೀದಿ ಅಧ್ಯಕ್ಷ ಟಿ.ಎಸ್ ಇಸ್ಮಾಯಿಲ್ ಹಾಜಿ, ಅಲ್-ಅಮೀನ್ ನ ಗೌರವಾಧ್ಯಕ್ಷ ಅಹ್ಮದ್ ಕುಂಞ, ರಿಫಾಯಿಯ್ಯಾ ಮಸೀದಿ ಅಧ್ಯಕ್ಷ ಹೈದರ್ ಮಲಿ, ಉದ್ಯಮಿ ಹಸನ್ ಹಾಜಿ ಸಾಂಬಾರತೋಟ, ಬಿಜೆಪಿ ಅಲ್ಪ ಸಂಖ್ಯಾತರ ಘಟಕ ಪ್ರ.ಕಾರ್ಯದರ್ಶಿ ಮುನೀರ್ ಮಾಸ್ಟರ್ ಕೈರಂಗಳ,ಯುವ ಕಾಂಗ್ರೆಸ್ ಕೈರಂಗಳ ಅಧ್ಯಕ್ಷ ಸತ್ತಾರ್ ಕೈರಂಗಳ, ಸ್ಥಳೀಯರಾದ ಲೋಹಿತ್ ಗಟ್ಟಿ, ಸಿ.ಎಂ ಶರೀಫ್ ಪಟ್ಟೋರಿ,ಜನಾರ್ದನ್ ಕುಲಾಲ್, ಸೂರ್ಯ ನಾರಾಯಣ ಭಟ್, ರೋಬರ್ಟ್ ಡಿ ಸೋಜಾ, ಮೋದ್ದೀನ್ ಬನೋಟ್, ರುಕ್ಮಯ್ಯ, ಕರವೇ ಕೈರಂಗಳ ಅಧ್ಯಕ್ಷ ಅಬೂ ಸಾಲಿಹ್, ಬರಹಗಾರ ಸಿ.ಐ ಇಸ್ಹಾಕ್ ಫಜೀರ್, ಅಲ್-ಅಮೀನ್ ಫ್ರೆಂಡ್ಸ್ ಕೈರಂಗಳ ಅಧ್ಯಕ್ಷ ಶರೀಫ್ ಕೈರಂಗಳ,
ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.
ತಾ.ಪಂ ಸದಸ್ಯಾರದ ಹೈದರ್ ಕೈರಂಗಳ ಪ್ರಾಸ್ತಾವಿಕ ಭಾಷಣ ಮಾಡಿದರು. ಅಲ್-ಅಮೀನ್ ಫ್ರೆಂಡ್ಸ್ ಕೈರಂಗಳ ನಿರ್ದೇಶಕ ಇಕ್ಬಾಲ್ ಕೈರಂಗಳ ಸ್ವಾಗತಿಸಿ,ಅಕ್ಬರ್ ಜಲ್ಲಿ ವಂದಿಸಿದರು.