UN NETWORKS
ಉಳ್ಳಾಲ:ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಅಸೈ ಇದರ ದಶಮಾನೋತ್ಸವ ಸಂಭ್ರಮ ಇತ್ತೀಚೆಗೆ ಶಾಲಾ ವಠಾರದಲ್ಲಿ ನಡೆಯಿತು.
ಈ ಸಂದರ್ಭ ಶಾಲೆಯಿಂದ ವರ್ಗಾವಣೆ ಗೊಂಡ ಶಿಕ್ಷಕರಿಗೆ ಮತ್ತು ಪ್ರಸ್ತುತ ಕಾರ್ಯನಿರ್ವಾಹಿಸುತ್ತಿರುವ ಶಿಕ್ಷಕರಿಗೆ ಸನ್ಮಾನಿಸಲಾಯಿತು.
ಮುನ್ನೂರು ಸಮೂಹ ಸಂಪನ್ಮೂಲ ವ್ಯಕ್ತಿ ವತ್ಸಲ ಜೋಗಿ, ಮಂಜನಾಡಿ ಗ್ರಾ.ಪಂ ಸದಸ್ಯರಾದ ಅಬ್ಬಾಸ್ ಮದ್ಪಾಡಿ, ಕೌಸರ್ ಬಾನು, ಸೀತಾ ವಿ.ನಾಯ್ಕ, ಮಂಜನಾಡಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಮಂಜಪ್ಪ ಎಚ್.ಎಚ್, ಉಳ್ಳಾಲ ಮದನಿ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಆನಂದ್, ಬೆಳ್ಮ ಗ್ರಾ.ಪಂ ಸದಸ್ಯ ಮುಹಮ್ಮದ್ ಕಬೀರ್, ನಮ್ಮ ನಾಡು ನಮ್ಮದು ವಾಟ್ಸ್ಆ್ಯಫ್ ಗುಂಪಿನ ಕಾರ್ಯನಿರ್ವಾಹಕ ಬಶೀರ್, ನಿವೃತ್ತ ಮುಖ್ಯೋಪಾಧ್ಯಾಯ ರಾಜೀವ, ಪಾಣೆಲಬರಿಕೆ ಮುಖ್ಯೋಪಾಧ್ಯಾಯಿನಿ ಯೋಗಿನಿ, ಹಿರಿಯ ನಾಗರಿಕರಾದ ಎ.ಐ ಹಮೀದ್, ಮುಹಮ್ಮದ್ ಮುಂತಾದವರು ಈ ಸಂದರ್ಭ ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾಧ್ಯಾಯಿನಿ ಗ್ರೆಟ್ಟಾ ಮೇಬರ್ ಡಿಸೋಜ ಸ್ವಾಗತಿಸಿದರು. ಸಹ ಶಿಕ್ಷಕರಾದ ಸುನಿತ ವೇಗಸ್ ಮತ್ತು ನೇತ್ರಾವತಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ವಾಣಿ.ಸಿ ವಂದಿಸಿದರು.