UN NETWORKS
ಉಳ್ಳಾಲ: ಟಯರ್ ಅಂಗಡಿ ಬೆಂಕಿಗೆ ಸಂಪೂರ್ಣ ಆಹುತಿಯಾಗಿರುವ ಘಟನೆ ತೊಕ್ಕೊಟ್ಟು ಸಮೀಪದ ಕಲ್ಲಾಪು ಎಂಬಲ್ಲಿ ಮಂಗಳವಾರ ತಡರಾತ್ರಿ ವೇಳೆ ಸಂಭವಿಸಿದ್ದು, ಘಟನೆಯಿಂದ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.
ತೊಕ್ಕೊಟ್ಟು ನಿವಾಸಿ ಶರೀಫ್ ಎಂಬವರಿಗೆ ಸೇರಿದ ಟಯರ್ ಅಂಗಡಿಯಲ್ಲಿ ಬೆಂಕಿ ಅನಾಹುತ ಸಂಭವಿಸಿದೆ. ಘಟನೆಯಿಂದ ರೂ. 6 ಲಕ್ಷ ನಷ್ಟ ಅಂದಾಜಿಸಲಾಗಿದೆ. ಮಧ್ಯರಾತ್ರಿ 2.20ರ ಸುಮಾರಿಗೆ ಅಂಗಡಿ ಬೆಂಕಿಗೆ ಆಹುತಿಯಾಗುವುದನ್ನು ಗಮನಿಸಿದ ವಾಹನ ಸವಾರರೊಬ್ಬರು ಅಗ್ನಿ ಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಮಂಗಳೂರಿನಿಂದ 10 ನಿಮಿಷಗಳಲ್ಲಿ ಸ್ಥಳಕ್ಕೆ ಧಾವಿಸಿದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಲು ಹರಸಾಹಸ ಪಟ್ಟರು.
ತಪ್ಪಿದ ಭಾರೀ ಅವಘಢ: ಬೆಂಕಿ ಬಿದ್ದ ಟಯರ್ ಅಂಗಡಿ ಸಮೀಪವೇ ಹೊಟೇಲ್ ಕಾರ್ಯಾಚರಿಸುತಿತ್ತು. ಹೊಟೇಲಿನ ಅಡುಗೆ ಕೋಣೆಯಲ್ಲಿ ಆರು ಅನಿಲ ಸಿಲಿಂಡರ್ ಗಳಿದ್ದು, ಇದನ್ನು ಗಮನಿಸಿದ ಅಗ್ನಿ ಶಾಮಕ ಸಿಬ್ಬಂದಿ ಪ್ರಥಮವಾಗಿ ಆರು ಸಿಲಿಂಡರ್ ಗಳನ್ನು ಹೊರಹಾಕಿದ್ದರಿಂದ ಸಂಭಾವ್ಯ ಅನಾಹುತ ತಪ್ಪಿದಂತಾಗಿದೆ. ಸ್ಥಳದಲ್ಲಿ ಅನೇಕ ಮನೆಗಳಿದ್ದು, ಅನಿಲ ಸಿಲಿಂಡರ್ ಗಳಿಗೆ ಹಾನಿಯಾಗುತ್ತಿದ್ದಲ್ಲಿ ಭಾರೀ ದುರಂತ ಸಂಭವಿಸುವ ಸಾಧ್ಯತೆಗಳಿತ್ತು ಎಂದು ಅಗ್ನಿ ಶಾಮಕ ಪೊಲೀಸರು ತಿಳಿಸಿದ್ದಾರೆ. ಸತತ ನಾಲ್ಕು ಗಂಟೆಗಳ ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಮದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಾಲೀಕರು ನೀಡಿರುವ ದೂರಿನಲ್ಲಿ ಶಾಟ್ ್ ಸಕ್ರ್ಯುಟ್ ನಿಂದ ಬೆಂಕಿ ಅವಘಢ ಸಂಭವಿಸಿದೆ ಎಂದು ಸಂಶಯಿಸಲಾಗಿದೆ.