Site icon Ullalavani

ಫಲಾಹ್ ವಿದ್ಯಾಸಂಸ್ಥೆಗಳ ವಾರ್ಷಿಕ ಕ್ರೀಡಾಕೂಟ

UN NETWORKS

ತಲಪಾಡಿ: ತಲಪಾಡಿ ಕೆ.ಸಿ.ರೋಡ್‍ನ ವಿದ್ಯಾನಗರದ ಫಲಾಹ್ ವಿದ್ಯಾಸಂಸ್ಥೆಗಳ ವಾರ್ಷಿಕ ಕ್ರೀಡಾಕೂಟ ಬುಧವಾರ 03-01-2018 ರಂದು ಫಲಾಹ್ ಮೈದಾನದಲ್ಲಿ ಫಲಾಹ್ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷ ಹಾಜಿ ಯು.ಬಿ. ಮೊಹಮ್ಮದ್, ಕಾರ್ಯದರ್ಶಿ ಟಿ.ಎಂ.ಬಶೀರ್, ಕೋಶಾಧಿಕಾರಿ ಇಸ್ಮಾಯಿಲ್ ನಾಗತೋಟ, ಹಾಗೂ ಮಾಜಿ ಕಾರ್ಯದರ್ಶಿ ಎನ್.ಅರಬಿ ಕುಂಞ ಪಾರಿವಾಳಗಳನ್ನು ಬಾನಿಗೆ ಹಾರಿಸುವ ಮೂಲಕ ಉದ್ಘಾಟಿಸಿದರು. ಇಸ್ಮಾಯಿಲ್ ನಾಗತೋಟ ಪ್ರಾಸ್ತವಿಕವಾಗಿ ಮಾತನಾಡಿದರು.

ಸಭೆಯಲ್ಲಿ ಸಂಸ್ಥೆಯ ಪ್ರಾಂಶುಪಾಲ ಅಬ್ದುಲ್ ಖಾದರ್ ಹುಸೇನ್, ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಮುಖ್ಯಶಿಕ್ಷಕಿ ಶ್ರೀಮತಿ ಆಯಿಶಾ ಸಬೀನಾ ಕೈಸಿರಾನ್, ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಶ್ರೀಮತಿ ವಿದ್ಯಾ ಡಿ ಸೋಜ ಉಪಸ್ಥಿತರಿದ್ದರು. ಫಲಾಹ್ ಅನುದಾನಿತ ಕನ್ನಡ ಪ್ರೌಡಶಾಲೆಯ ಮುಖ್ಯ ಶಿಕ್ಷಕ ಮಹಮ್ಮದ್ ರಫೀಕ್ ವಂದಿಸಿದರು. ಶಿಕ್ಷಕ ರಮೇಶ್ ಕಾರ್ಯಕ್ರಮ ನಿರೂಪಿಸಿದರು.

Exit mobile version