UN NETWORKS
ಕುತ್ತಾರು: ಕುತ್ತಾರು ರಾಜರಾಜೇಶ್ವರಿ ಸಿದ್ಧಿವಿನಾಯಕ ಬಡಾವಣೆಯ 1ನೇ ಮತ್ತು 2ನೇ ಕಾಂಕ್ರೀಟೀಕರಣ ರಸ್ತೆಯ ಉದ್ಘಾಟನೆಯನ್ನು ಆಹಾರ ಸಚಿವ ಯು.ಟಿ.ಖಾದರ್ ಅವರು ನೆರವೇರಿಸಿದರು.
ಬಳಿಕ ಮಾತನಾಡಿದ ಅವರು ಈ ರಸ್ತೆಯು ಬಹಳಷ್ಟು ವರ್ಷದಿಂದ ಹದಗೆಟ್ಟಿದ್ದು,ಊರಿನ ಪ್ರಮುಖರು ಕಳೆದ ಚುನಾವಣೆ ಸಂದರ್ಭದಲ್ಲಿ ರಸ್ತೆ ಅಬಿವೃದ್ಧಿ ಪಡಿಸಲು ಬೇಡಿಕೆಯನ್ನಿಟ್ಟಿದ್ದರು,ಆ ನಿಟ್ಟಿನಲ್ಲಿ ನನ್ನ ವಿಶೇಷ ನಿಧಿಯಿಂದ 20 ಲಕ್ಷ ಅನುಧಾನದಲ್ಲಿ ಉತ್ತಮ ಕಾಂಕ್ರೀಟೀಕರಣ ರಸ್ತೆ ಮಾಡಿದ್ದೇನೆ ಎಂದರು.
ಇದೇ ಸಂದರ್ಭದಲ್ಲಿ ಆಹಾರ ಸಚಿವ ಯು.ಟಿ.ಖಾದರ್,ಉಳ್ಳಾಲ ನಗರ ಸಭೆ ಸದಸ್ಯೆ ಕುಮಾರಿ ಭಾರತಿ.ಎಂ, ಸಾಮಾಜಿಕ ಕಾರ್ಯಕರ್ತ ಸತೀಶ್ ಕುತ್ತಾರ್ ಅವರನ್ನು ಸನ್ಮಾನಿಸಲಾಯಿತು.
ಉಳ್ಳಾಲ ನಗರ ಸಭೆ ಅಧ್ಯಕ್ಷ ಹುಸೈನ್ ಕುಂಞ ಮೋನು,ಸ್ಥಾಯಿ ಸಮಿತಿ ಅಧ್ಯಕ್ಷ ಉಸ್ಮಾನ್ ಕಲ್ಲಾಪು, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ,ಗುರು ಸ್ವಾಮಿ ಈಶ್ವರ್ ಬಡಾಜೆ,ಮಾಜಿ ತಾಲೂಕು ಪಂಚಾಯತ್ ಸದಸ್ಯ ಮೊಹಮ್ಮದ್ ಮುಸ್ತಫ,ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಸಂಘಟನಾ ಕಾರ್ಯದರ್ಶಿ ಇಕ್ಬಾಲ್ ಸಾಮಾನಿಗೆ,ಸಲೀಮ್ ಮೆಗಾ,ಸೋಮೇಶ್ವರ ಪಂಚಾಯತ್ ಸದಸ್ಯ ಪುರುಷೋತ್ತಮ ಪಿಲಾರ್ ಹಾಗೂ ಶ್ರೀಮತಿ ಶಾಂತ ಶರತ್,ಕ್ಲೀಟಸ್,ಚಿತ್ರ,ಚಂದ್ರಹಾಸ,ಮುಖೇಶ್,ಜಯರಾಮ್,ಅನಿಲ್,ರೋಶನ್,ಭವಾನಿ ಶಂಕರ್,ರೋನಿ ಪೆರ್ನಾಂಡೀಸ್,ರಮೇಶ್ ಶೆಟ್ಟಿಗಾರ್,ಗಣೇಶ್ ಕುತ್ತಾರ್,ರೋಹಿತ್,ಕೇಶವ,ರೋಬರ್ಟ್, ಸರಿತ,ಸವಿತ,ಪ್ರೇಮ , ಐರಿನ್ ಡಿಸೋಜ, ಶಕೀಲಾ ಉಪಸ್ಥಿತರಿದ್ದರು.