Site icon Ullalavani

ನಾಟೆಕಲ್‍ನಲ್ಲಿ ಸುಸಜ್ಜಿತ ಎಕಸ್ಟ್ರೀಂ ಫಿಟ್‍ನೆಸ್ ಜಿಮ್ ಶುಭಾರಂಭ

UN NETWORKS

ಉಳ್ಳಾಲ: ನಾಟೆಕಲ್‍ನ ಫಾತಿಮಾ ಕಾಂಪ್ಲೆಕ್ಸ್‍ನಲ್ಲಿ ನೂತನವಾಗಿ ಆರಂಭಗೊಂಡ ಎಕ್ಟ್ರೀಂ ಫಿಟ್‍ನೆಸ್ ಜಿಮ್ ಸೋಮವಾರ ಉಳ್ಳಾಲದ ಸೈಯ್ಯಿದ್ ಮದನಿ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಹಾಜಿ ಉದ್ಘಾಟಿಸಿದರು.


ಬಳಿಕ ಮಾತನಾಡಿದ ಅವರು ಯುವಕರಿಗೆ ಆಲಸ್ಯ ಜಾಸ್ತಿಯಾಗಿದೆ. ವ್ಯಾಯಾಮ ನಡೆಸದೆ ಅನಾರೋಗ್ಯಕ್ಕೊಳಗಾಗುವವರ ಸಂಖ್ಯೆಯೇ ಹೆಚ್ಚಿದೆ. ನಮಾಝ್ ಸಮಯದಲ್ಲೂ ಯುವಕರು ಆಲಸ್ಯ ನಡೆಸುವುದು ಕಾಣುತ್ತಿದೆ. ಇಂತಹ ಆಲಸ್ಯ ಮನೋಭಾವನೆಯಿಂದ ವ್ಯಾಯಾಮ ಶಾಲೆಗಳು ಮುಚ್ಚಿಹೋಗುತ್ತಿವೆ. ದುಬಾರಿ ಬೆಲೆಯ ಸಾಮಗ್ರಿಗಳ ಜತೆಗೆ ಜಿಮ್ ಅನ್ನು ಸ್ಥಾಪಿಸಿರುವ ಪಾಲುದಾರರಾದ ಶಬೀರ್ ಮತ್ತು ರಾಮಕೃಷ್ಣ ಅವರು ಯುವಕರನ್ನು ಉತ್ತಮ ತರಬೇತಿಯನ್ನು ನೀಡುವಂತಾಗಲಿ ಎಂದರು.
ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಸಂತೋಷ್ ರೈ ಬೋಳಿಯಾರ್ ಮಾತನಾಡಿ ಜಿಮ್ ಹೆಸರನ್ನು ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸುವಂತೆ ಮಾಡಬೇಕಿದೆ. ಅದಕ್ಕಾಗಿ ಯುವಕರು ದುಶ್ಚಟಗಳಲ್ಲಿ ಭಾಗವಹಿಸದೆ ತರಬೇತಿಯನ್ನು ಪಡೆದು ಸ್ಪರ್ಧೆಗಳಲ್ಲಿ ಭಾಗವಹಿಸುವುದರ ಮೂಲಕ ಜಿಮ್ ಹೆಸರನ್ನು ಶಾಶ್ವತವಾಗಿ ಉಳಿಸುವಂತಾಗಬೇಕು ಎಂದರು.
ಉಮರ್ ಮೌಲವಿ ಅಲೇಕಳ ಇವರು ದುಆ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಏಕಲವ್ಯ ಪ್ರಶಸ್ತಿ ವಿಜೇತ, ದೇಹದಾಡ್ರ್ಯ ಪಟು ರೋಷನ್ ಫೆರಾವೊ, ನ್ಯಾಯವಾದಿ ಹರೀಶ್ ಕುಮಾರ್, ಯುವಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ನಾಸಿರ್ ಅಹಮ್ಮದ್ ಸಾಮಣಿಗೆ, ಉಳ್ಳಾಲ ನಗರಸಭೆ ಸದಸ್ಯ ಯು.ಎ.ಇಸ್ಮಾಯಿಲ್, ಉಳ್ಳಾಲ ಸೈಯ್ಯದ್ ಮದನಿ ಟ್ರಸ್ಟ್ ಕಾರ್ಯದರ್ಶಿ ತ್ವಾಹ ಹಾಜಿ, ಕರ್ನಾಟಕ ರಕ್ಷಣಾ ವೇದಿಕೆ ವಕ್ತಾರ ಮುನ್ಸೀರ್ ಅಹಮ್ಮದ್ ಸಾಮಣಿಗೆ, ಯುವಕಾಂಗ್ರೆಸ್ ಉಪಾಧ್ಯಕ್ಷ ಜಾಫರ್ ಅಲೇಕಳ, ಪಾಲುದಾರ ಶಬೀರ್ ತಂದೆ ಯು.ಯಸ್ ಹಸನಬ್ಬ, ಮುಖ್ಯ ಅತಿಥಿಗಳಾಗಿದ್ದರು. ಮಹಮ್ಮದ್ ಶಬೀರ್ ಮತ್ತು ರಾಮಕೃಷ್ಣ ಕುತ್ತಾರ್ ಮಾಲೀಕತ್ವದಲ್ಲಿ ಜಿಮ್ ಸ್ಥಾಪನೆಗೊಂಡಿದೆ.
ರಿಯಾಯಿತಿ ದರದಲ್ಲಿ ತರಬೇತಿ : ತಿಂಗಳಿಗೆ ರೂ. 700, 3 ತಿಂಗಳಿಗೆ ರೂ. 1,900, 6 ತಿಂಗಳಿಗೆ ರೂ. 3,700, ವಾರ್ಷಿಕ ರೂ. 6,000 ಶುಲ್ಕ ಪಾವತಿಸುವ ಮೂಲಕ ತರಬೇತಿಯನ್ನು ಪಡೆಯಬಹುದಾಗಿದೆ ಎಂದು ತರಬೇತುದಾರರು ತಿಳಿಸಿದ್ದಾರೆ.
ಮಹಿಳೆಯರಿಗೂ ಅವಕಾಶ : ದಿನದ 10 ರಿಂದ 3 ಗಂಟೆಯ ಅವಧಿಯಲ್ಲಿ ಮಹಿಳೆಯರಿಗೂ ತರಬೇತಿಯನ್ನು ಪಡೆಯಲು ಅವಕಾಶವಿದೆ. ಮಹಿಳಾ ತರಬೇತುದಾರರೇ ಮಹಿಳೆಯರು, ಯುವತಿಯರಿಗೆ ಫಿಟ್ ನೆಸ್ ಕಾಪಾಡಲು ಅವಕಾಶವನ್ನು ಕಲ್ಪಿಸಲಾಗಿದೆ ಎಂದು ಸಂಸ್ಥೆ ಮುಖ್ಯಸ್ಥರು ತಿಳಿಸಿದ್ದಾರೆ.

Exit mobile version