UN NETWORKS
ಮಂಗಳೂರು: ದಕ ಜಿಲ್ಲೆ ಹಿಂದೂ ಜಾಗರಣೆ ವೇದಿಕೆಯ ಜಿಲ್ಲಾಧ್ಯಕ್ಷರಾದ ರತ್ನಾಕರ ಶೆಟ್ಟಿಯವರನ್ನು ಗಡಿಪಾರು ಮಾಡಿ ಹೊರಡಿಸಿದ್ದ ಆದೇಶವನ್ನು ಬಂಟ್ವಾಳ ಪೊಲೀಸರು ಇಂದು ಕಾರ್ಯಗತಗೊಳಿಸಿದರು. ಇಂದು ಬೆಳಿಗ್ಗೆ ದೇವಸ್ಥಾನಕ್ಕೆ ತೆರಳಿ ವಾಪಸು ಮನೆಗೆ ಮರಳುತ್ತಿದ್ದ ಸಂಧರ್ಭದಲ್ಲಿ ಅವರನ್ನು ವಶಕ್ಕೆ ಪಡೆದ ಬಂಟ್ವಾಳ ಪೊಲೀಸರು ,ಅವರನ್ನು ಜಿಲ್ಲೆಯ ಗಡಿ ದಾಟಿಸಿ ಬಿಡುಗಡೆಗೊಳಿಸಿದ್ದಾರೆ. ಗಡಿಪಾರು ಆದೇಶ ವಜಾಗೊಳ್ಳುವವರೆಗೆ ಇನ್ನು ಅವರು ಜಿಲ್ಲೆಯ ಗಡಿ ಪ್ರವೇಶಿಸುವಂತಿಲ್ಲ.
ಇದೇ ವರ್ಷದ ಜುಲೈ 13ರಂದು ಕಲ್ಲಡ್ಕದಲ್ಲಿ ನಡೆದ ಚೂರಿ ಇರಿತ ಹಾಗೂ ಹಲ್ಲೆ ಸಂಧರ್ಭದಲ್ಲಿ ಗಾಯಗೊಂಡಿದ್ದ ಅವರು ಪುತ್ತೂರು ಖಾಸಗಿ ಆಸ್ಫತ್ರೆಯಲ್ಲಿ 2 ತಿಂಗಳುಗಳ ಕಾಲ ಚಿಕಿತ್ಸೆ ಪಡೆದಿದ್ದರು.ಇದೇ ಪ್ರಕರಣದಲ್ಲಿ ಅವರ ಮೇಲೂ ಹಲ್ಲೆ ಯತ್ನ ಕೇಸು ದಾಖಲಾಗಿತ್ತು. ಈ ಪ್ರಕರಣ ನಡೆದ ಕೆಲ ದಿನಗಳ ಬಳಿಕ ಅವರನ್ನು ಗಡಿಪಾರುಗೊಳಿಸುವ ಆದೇಶವನ್ನು ಜಿಲ್ಲ್ಲಾದಲಿತ ಕೈಗೊಂಡಿತ್ತು.ಇದೀಗ ಇಂದು ಬೆಳಿಗ್ಗೆ ಅವರನ್ನು ಪೂಲೀಸ್ ಇಲಾಖೆ ಅವರನ್ನು ಗಡಿಪಾರುಗೊಳಿಸಿದೆ