Site icon Ullalavani

ವಾಸುದೇವ ಕ್ರಿಯಾ ಯೋಗ ಕಾರ್ಯಾಗಾರಕ್ಕೆ ಚಾಲನೆ

UN NETWORKS

ಉಳ್ಳಾಲ: ನಿಟ್ಟೆ ಇನ್‍ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿ, ನಿಟ್ಟೆ ವಿಶ್ವವಿದ್ಯಾಲಯ ದೇರಳಕಟ್ಟೆ ಆಶ್ರಯದಲ್ಲಿ ಇತ್ತೀಚೆಗೆ “ವಾಸುದೇವ ಕ್ರಿಯಾಯೋಗ” ಎಂಬ ವಿಷಯದ ಕುರಿತ ಕಾರ್ಯಾಗಾರ ನಡೆಯಿತು.

ಕಾರ್ಯಾಗಾರವನ್ನು ನಿಟ್ಟೆ ವಿಶ್ವವಿದ್ಯಾಲಯದ ಸಹ ಕುಲಪತಿ ಪ್ರೋ.ಡಾ.ಎಂ.ಎಸ್ ಮೂಡಿತ್ತಾಯ ಉದ್ಘಾಟಿಸಿದರು.
ಮುಖ್ಯ ಅತಿಥಿಯಾಗಿ ಮಣಿಪಾಲ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಬಿ.ಎಂ ಹೆಗ್ಡೆ ದಿಕ್ಸೂಚಿ ಭಾಷಣಗೈದರು.
“ವಾಸುದೇವ ಕ್ರಿಯಾ ಯೋಗ ” ವಿಭಾಗದ ಮುಖ್ಯಸ್ಥ ರಾಜೇಂದ್ರ ಯಂಕಣ್ಣ ಮೂಲೆ ವಿದ್ಯಾರ್ಥಿಗಳಿಗೆ ವಾಸುದೇವ ಕ್ರಿಯಾಯೋಗ ಇದರ ವಿಧಿವಿಧಾನಗಳು ಆರೋಗ್ಯದ ಹಾಗೂ ಮಾನಸಿಕ ಪರಿಣಾಮಗಳು,ವಿಭಿನ್ನ ಒಳಿತುಗಳ ಕುರಿತು ಮಾಹಿತಿ ನೀಡಿದರು.

ಕಾಲೇಜು ಪ್ರಾಂಶುಪಾಲ ಡಾ.ಧಾನೇಶ್ ಕುಮಾರ್ ಕೆ.ಯು ಸ್ವಾಗತಿಸಿದರು. ಡಾ.ಪುರುಷೋತ್ತಮ ಟಿಪ್ಪಲ ವಂದಿಸಿದರು.
ಡಾ.ರಶ್ಮಿತಾ ಶೆಟ್ಟಿ ನಿರೂಪಿಸಿದರು. ಸುಮಾರು 100 ವಿದ್ಯಾರ್ಥಿಗಳು ಭಾಗವಹಿಸಿದರು.

Exit mobile version