UN NETWORKS
ಹೊಸದಿಲ್ಲಿ : ಕುವೆಂಪು ಎಂದೇ ಖ್ಯಾತರಾದ ಕನ್ನಡದ ರಾಷ್ಟ್ರಕವಿ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಅವರ 113ನೇ ಜನ್ಮದಿನೋತ್ಸವವಾದ ಡಿಸೆಂಬರ್ 29, ಶುಕ್ರವಾರ ಗೂಗಲ್ ಅವರಿಗೆ ಆಕರ್ಷಕ ಡೂಡಲ್ ಮೂಲಕ ಗೌರವ ಸಲ್ಲಿಸಿದೆ.
ಡಿಸೆಂಬರ್ 29, 1904ರಂದು ಮೈಸೂರಿನಲ್ಲಿ ಜನಿಸಿದ ಅವರು ಕನ್ನಡದ ಪ್ರಪ್ರಥಮ ಜ್ಞಾನಪೀಠ ಪ್ರಶಸ್ತಿ ವಿಜೇತರು. ಕರ್ನಾಟಕ ಸರಕಾರ ಅವರಿಗೆ 1958ರಲ್ಲಿ ರಾಷ್ಟ್ರಕವಿ ಹಾಗೂ 1992ರಲ್ಲಿ ಕರ್ನಾಟಕ ರತ್ನ ಬಿರುದುಗಳನ್ನಿತ್ತು ಗೌರವಿಸಿತ್ತು. ಅವರ ಕೃತಿ `ಶ್ರೀ ರಾಮಾಯಣ ದರ್ಶನಂ’ ಆಧುನಿಕ ಕಾಲದಲ್ಲಿ ಮಹಾಕಾವ್ಯ ಯುಗವನ್ನು ಪುನರಾರಂಭಿಸಿದ ಕೃತಿ ಎಂದೇ ವರ್ಣಿಸಲ್ಪಟ್ಟಿದೆ. ವಿಶ್ವ ಮಾನವ ಸಂದೇಶವನ್ನು ಮಾನವತೆಗೆ ಸಾರಿದ ಕುವೆಂಪು ನವೆಂಬರ್ 1, 1994ರಂದು ತಮ್ಮ 89ನೇ ವಯಸ್ಸಿನಲ್ಲಿ ನಿಧನ ಹೊಂದಿದರು.