Site icon Ullalavani

ವೀರಕಂಭ ಮಸೀದಿಗೆ ಕಲ್ಲು

UN NETWORKS

ಕಲ್ಲಡ್ಕ: ಕಲ್ಲಡ್ಕ ಸಮೀಪದ ವೀರಕಂಬದ ಮಸೀದಿಗೆ ಬುಧವಾರ ತಡರಾತ್ರಿ ದುಷ್ಕರ್ಮಿಗಳು ಕಲ್ಲು ಎಸೆದಿದ್ದಾರೆ. ಘಟನೆಯಿಂದ ಮಸೀದಿಯ ನಾಲ್ಕು ಕಿಟಕಿಯ ಗಾಜುಗಳಿಗೆ ಹಾನಿಯಾಗಿದೆ.

ಇಂದು ಬೆಳಗ್ಗೆ ನಮಾಝ್ ವೇಳೆ ಈ ಕೃತ್ಯ ಬೆಳಕಿಗೆ ಬಂದಿದೆ. ಜಮಾಅತ್ ಹಾಗೂ ಸ್ಥಳೀಯರು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿದ್ದಾರೆ.

Exit mobile version