Site icon Ullalavani

ವಿಶ್ವ ಅರಭಿಕ್ ಭಾಷಾ ದಿನದ ಪ್ರಯುಕ್ತ ವಿಚಾರ ಸಂಕಿರಣ

UN NETWORKS

ತಲಪಾಡಿ : ತಲಪಾಡಿ ಕೆ.ಸಿರೋಡ್ ನ ಸ್ಕೂಲ್ ಆಫ್ ಕುರಾನಿಕ್ ಸ್ಟಡೀಸ್ ಹಾಗು ಝೀನತ್ ಎಜ್ಯುಕೇಶನಲ್ ಟ್ರಸ್ಟ್( ರಿ) ಇದರ ಆಶ್ರಯದಲ್ಲಿ ವಿಶ್ವ ಅರಭಿ ಭಾಷಾ ದಿನದ ಪ್ರಯುಕ್ತ ಅರಭಿ ಬಾಷಾ ಮತ್ತು ಸಾಹಿತ್ಯ ವಿಚಾರ ಸಂಕಿರಣವು ಕೆ.ಸಿ.ರೋಡ್‍ನಲ್ಲಿ ಗುರುವಾರ ನಡೆಯಿತು.

ವಿಚಾರಸಂಕಿರಣದ ಉದ್ಘಾಟನೆಯನ್ನು ಮಂಗಳೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವರಾದ ಪ್ರೊ.ಎ.ಎಂ.ಖಾನ್ ಅವರು ನೆರವೇರಿಸಿದರು. ಬಳಿಕ ಮಾತನಾಡಿದ ಅವರು ಅರಭಿ ಭಾಷೆಯು ವಿಶ್ವದ ಪ್ರಮುಖ ಸುಂದರ ಸುಲಲಿತ ಭಾಷೆಗಳಲ್ಲಿ ಒಂದಾಗಿದೆ.

ಭಾಷೆಗಳಿಗೆ ಧಾರ್ಮಿಕತೆಯ ಬಣ್ಣವನ್ನು ಯಾವತ್ತೂ ಬಲಿಯಬಾರದು. ಅರಭಿ ಭಾಷೆಯು ಇಸ್ಲಾಂ ಧರ್ಮದ ಭಾಷೆ ಮುಸ್ಲಿಮರ ಭಾಷೆಯೂ ಅಲ್ಲ. ಸೃಷ್ಟಿಕರ್ತನು ಅರಭೀ ಬಾಷೆಯಲ್ಲಿ ಕುರಾನನ್ನು ಅವತೀರ್ಣಗೊಳಿಸಿದನು. ಹಾಗೂ ಆ ಕುರಾನ್‍ನಿಂದಾಗಿ ಲೋಕಕ್ಕೆ ಪ್ರಕಾಶ ಲಭಿಸಿತು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಶಾಸಕ ಮೊಯ್ದಿನ್ ಬಾವಾ ಅವರು, ನಮ್ಮ ಜೀವನಕ್ಕೆ ಒಂದು ಸ್ಪಷ್ಟವಾದ ಗುರಿಯಿರಬೇಕು. ನಮ್ಮನ್ನು ವ್ಯರ್ಥವಾಗಿ ಇಲ್ಲಿ ಸೃಷ್ಟಿಸಲಾಗಿಲ್ಲ. ಬದಲಾವಣೆಯ ಮಾರ್ಗ ಪವಿತ್ರ ಕುರಾನ್‍ನಲ್ಲಿ ಅಡಗಿದೆ. ಹಾಗೆಯೇ ಅರಬಿಕ್ ಭಾಷೆಯ ಅಧ್ಯಯನಕ್ಕೆ ನಾವು ಹೆಚ್ಚಿನ ಮಹತ್ವ ನೀಡಬೇಕಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಂಸ್ಥೆಯ ನಿರ್ದೇಶಕರಾದ ಉಮರ್ ಆಶಿಕ್ ಅವರು, ಭಾಷೆ ಮತ್ತು ಸಾಹಿತ್ಯದ ಅಭಿವೃದ್ಧಿಗಳ ಬಗ್ಗೆ ಯೋಜನೆಗಳನ್ನು ರೂಪಿಸಿಕೊಂಡು ಮುನ್ನಡೆಯಬೇಕು ಮತ್ತು ಇದಕ್ಕೆ ಎಲ್ಲರ ಸಹಕಾರವೂ ಅಗತ್ಯ ಎಂದರು.
ಕಾಲೇಜಿನ ಉಪನ್ಯಾಸಕ ಅಬ್ದುಲ್ ರಝಾಕ್ ಉಮರಿಯಾ ಅವರು ಕಾಲೇಜು ನಡೆದು ಬಂದ ಹಾದಿ ಮತ್ತು ಯೋಜನೆಗಳ ಬಗ್ಗೆ ವರದಿಯನ್ನು ಮಂಡಿಸಿದರು. ಕಾಲೇಜಿನ ಉಪಪ್ರಾಂಶುಪಾಲ ಸುಲೈಮಾನ್ ಪುರ್ಖನಿಯ ಅವರು ಕಾಲೇಜು ಅಭಿವೃದ್ಧಿಯ ಮನವಿ ಪತ್ರವನ್ನು ಪರಿಕ್ಷಾಂಗ ಕುಲಸಚಿವರಿಗೆ ಹಾಗೂ ಶಾಸಕ ಮೊಯ್ದಿನ್ ಭಾವ ಅವರಿಗೆ ನೀಡಿದರು.

ಉಪನ್ಯಾಸಕ ಉಮರ್ ಫಾರೂಕ್ ಅವರು ವಂದಿಸಿದರು. ವಿದ್ಯಾರ್ಥಿ ಅಬ್ದುಲ್ ಶುಕೂರ್ ಮುದಸ್ಸೀರ್ ಕಾರ್ಯಕ್ರಮ ನಿರೂಪಿಸಿದರು. ವಿಚಾರಸಂಕಿರಣವು ಒಟ್ಟು ಮೂರು ಹಂತಗಳಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಉಪನ್ಯಾಸಕ ಸಲ್ಮಾನ್, ಮಹಮ್ಮದ್ ಸಂಸೀರ್ ಸ್ವಲಾಹಿ, ಅಬೂಬಕ್ಕರ್ ಮೊಯ್ದಿನ್, ಮಸೂದ್ ಇಬ್ನು, ಅಬ್ದುಲ್ ಖಾದರ್ ಮೊದಲಾದವರು ಉಪಸ್ಥಿತರಿದ್ದರು.

Exit mobile version