Site icon Ullalavani

ಉಳ್ಳಾಲ: ಆಟೊ ಚಾಲಕರ ಸ್ನೇಹಕೂಟ

UN NETWORKS

ಉಳ್ಳಾಲ: ಭಾರತ ದೇಶದಾದ್ಯಂತ ಆಟೊ ರಿಕ್ಷಾ ಚಾಲಕರ ಸಮಸ್ಯೆ ಅದನ್ನ ಬಗೆಹರಿಸಲು ಮತ್ತು ನ್ಯಾಯಯುತವಾಗಿ ಅವರಿಗೆ ಸಿಗುವಂತಹ ಸವಲತ್ತುಗಳನ್ನು ಎಲ್ಲಾ ಅಟೋ ರಿಕ್ಷಾ ಚಾಲಕರು ಪಡೆಯಬೇಕೆಂಬ ನಿಟ್ಟಿನಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಆಟೋ ಯೂನಿಯನ್ ದೇಶದಾದ್ಯಂತ ಕಾರ್ಯಚರಿಸುತ್ತಾ ಇದ್ದು ಈ ನಿಟ್ಟಿನಲ್ಲಿ ಉಳ್ಳಾಲದಲ್ಲಿಯೂ ಆಟೋ ರಿಕ್ಷಾ ಚಾಲಕರ ಯೂನಿಯನ್ ಬಲಪಡಿಸುವ ಅಗತ್ಯ ಇದೆ ಎಂದು ಮಂಗಳೂರು ಕ್ಷೇತ್ರದ ಅಟೋ ರಿಕ್ಷಾ ಚಾಲಕರ ಅಧ್ಯಕ್ಷ ಅಬ್ಬಾಸ್ ಕಿನ್ಯ ಅಭಿಪ್ರಾಯಪಟ್ಟರು.

ಉಳ್ಳಾಲ ನಗರ ಸಭೆಯ ಸಮುದಾಯ ಭವನದಲ್ಲಿ ಮಂಗಳೂರು ಕ್ಷೇತ್ರ ಸಮಿತಿಯಿಂದ ನಡೆದಂತಹ ಅಟೋ ರಿಕ್ಷಾ ಚಾಲಕರ ಸ್ನೇಹ ಕೂಟದಲ್ಲಿ ನೂತನವಾಗಿ ಉಳ್ಳಾಲನಗರ ಸಭಾ ಸಮಿತಿಯ ಸಭೆಯ ಅದ್ಯಕ್ಷತೆ ವಹಿಸಿ ಮಾತನಾಡಿದರು.

ಸಭೆಯಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಆಟೋ ಯೂನಿಯನ್ ಇದರ ಜಿಲ್ಲಾ ಮುಖಂಡ ಅಶ್ರಫ್ ಮಂಚಿ ಚಾಲಕರಿಗೆ ಯೂನಿಯನ್ ನ ಅಗತ್ಯತೆಯನ್ನು ಸಭೆಯಲ್ಲಿ ತಿಳಿಸಿಕೊಟ್ಟರು ಚುನಾವಣಾ ಪ್ರಕ್ರಿಯೆಯ ಮೂಲಕ ಉಳ್ಳಾಲ ನಗರ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಯಿತು, ಖಲೀಲ್ ಮೇಲಂಗಡಿ ಅಧ್ಯಕ್ಷರಾಗಿ, ಹೈದರ್ ತೊಕ್ಕೋಟು ಕಾರ್ಯದರ್ಶಿಯಾಗಿ ಆಯ್ಕೆಯಾದರು. ಒಟ್ಟು ಒಂಭತ್ತು ಪದಾಧಿಕಾರಿಗಳ ಸಮಿತಿಯನ್ನು ರಚಿಸಲಾಯಿತು. ಅಟೋ ರಿಕ್ಷಾ ಚಾಲಕರ ಸಮಸ್ಯೆ ಮತ್ತು ಅದಕ್ಕೆ ಬೇಕಾದಂತಹ ಪರಿಹಾರದ ಬಗ್ಗೆ ಚರ್ಚಿಸಲಾಯಿತು.

ಅಟೋ ರಿಕ್ಷಾ ಚಾಲಕರಿಗೆ ಅಧಿಕಾರಿಗಳು ಕೊಡುವಂತಹ ಕಿರುಕುಳದ ಬಗ್ಗೆ ಮತ್ತು ಅವರಿಗೆ ಸಿಗುವಂತಹ ಸವಲತ್ತುಗಳನ್ನು ಅಧಿಕಾರಿಗಳ ನಿರ್ಲಕ್ಷ್ಯ ತನದ ಬಗ್ಗೆ ಈಗಾಗಲೇ ಸಭೆಯಲ್ಲಿ ಚರ್ಚಿಸಲಾಯಿತು. ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಉಳ್ಳಾಲ ನಗರ ಸಭಾ ಸಮಿತಿಯ ಅಧ್ಯಕ್ಷ ಅಬ್ಬಾಸ್ ಸಮಾರೋಪ ಭಾಷಣವನ್ನು ಮಾಡಿದರು.

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಉಳ್ಳಾಲ ನಗರ ಸಭಾ ಕಾರ್ಯದರ್ಶಿ ಮೊಹಮ್ಮದ್ ಯು.ಬಿ. ಪ್ರಸ್ತಾವಿಕವಾಗಿ ಮಾತನಾಡಿದರು. ಆಟೋ ಯೂನಿಯನ್ ಇದರ ಜಿಲ್ಲಾ ಸಂಚಾಲಕ ಯೂಸುಫ್ ಆಲಡ್ಕ ವಿಷಯ ಮಂಡಿಸಿದರು. ಉಳ್ಳಾಲ ನಗರ ಸಮಿತಿ ಸದಸ್ಯ ಸಲೀಮ್ ವಂದಸಿದರು. ಮಂಗಳೂರು ಕ್ಷೇತ್ರದ ಸಂಚಾಲಕ ಹಸೈನಾರ್ ಕೊಣಾಜೆ ಕಾರ್ಯಕ್ರಮ ನಿರೂಪಿಸಿದರು.

Exit mobile version