Site icon Ullalavani

ಉಳ್ಳಾಲ ನಗರಸಭೆ ಕನ್ನಡ ರಾಜ್ಯೊತ್ಸವ ದಿನಾಚರಣೆ

UN NETWORKS

ಉಳ್ಳಾಲ : ಉಳ್ಳಾಲ ನಗರಸಭಾ ಮಹಾತ್ಮಾ ಗಾಂಧಿ ರಂಗಮಂದಿರ ಸಭಾಂಗಣದಲ್ಲಿ  ಕನ್ನಡ ರಾಜ್ಯೋತ್ಸವದ ಅಂಗವಾಗಿ ಸನ್ಮಾನ್ಯ  ಯು.ಟಿ ಖಾದರ್ ಶಾಸಕರು, ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಚಾಮರಾಜನಗರ ಉಸ್ತುವಾರಿ ಸಚಿವರು ಇವರಿಂದ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.

ನಂತರ ಕಾರ್ಯಕ್ರಮವನ್ನು ಉದ್ಘಾಟಿಸಿ ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕನ್ನಡ ರಾಜ್ಯೋತ್ಸವದ ಶುಭಾಶಯಗಳನ್ನು ಹಾರೈಸಿದರು. ಕನ್ನಡ ನಾಡು ನುಡಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರದ್ದು. ರಾಜ್ಯದ ನಗರಸಭೆಗಳಲ್ಲಿ ಮುಂಚೂಣಿಯಲ್ಲಿರುವ ಉಳ್ಳಾಲ ನಗರಸಭೆ – ನವ ಕರ್ನಾಟಕದ ನಿರ್ಮಾಣ ಸಮಯದಲ್ಲಿ ನವ ಉಳ್ಳಾಲವಾಗಿ ರೂಪುಗೊಳ್ಳಲು ಸಾರ್ವಜನಿಕರು ಸಹಕರಿಸಬೇಕು ಎಂದು ವಿನಂತಿಸಿದರು.

ನಗರಸಭಾ ಪೌರಾಯುಕ್ತರಾದ  ವಾಣಿ.ವಿ.ಆಳ್ವರವರಿಂದ ಐಕ್ಯತಾ ಶಪಥ ಬೋಧಿಸಲಾಯಿತು. ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೀರು ಸರಬರಾಜು ವಿಭಾಗದ 16 ಸಿಬ್ಬಂದಿಗಳಿಗೆ ಧನಸಹಾಯ ನೀಡಿ ಗೌರವಿಸಲಾಯಿತು. ಶೇ.24.10ರ ಯೋಜನೆಯಲ್ಲಿ 31 ಫಲಾನುಭವಿಗಳಿಗೆ ಚೆಕ್ ವಿತರಣೆ ಹಾಗೂ 15 ಮಂದಿ ವಿಕಲಚೇತನರಿಗೆ ಸಾಧನ ಸಲಕರಣೆ ವಿತರಣಾ ಕಾರ್ಯಕ್ರಮ ಹಾಗೂ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ನಗರಸಭಾ ಪೌರಾಯುಕ್ತರಾದ  ವಾಣಿ.ವಿ.ಆಳ್ವರು ಸ್ವಾಗತಿಸಿದರು. ಆರೋಗ್ಯ ನಿರೀಕ್ಷಕರಾದ ರಾಜೇಶ್.ಕೆ.ರವರು ವಂದಿಸಿದರು. ಕಾರ್ಯಕ್ರಮವನ್ನು ನಗರಸಭಾ ಸದಸ್ಯರಾದ ಯು.ಎ.ಇಸ್ಮಾಯಿಲ್‍ರವರು ನಿರೂಪಿಸಿದರು.

ಸದ್ರಿ ಕಾರ್ಯಕ್ರಮದಲ್ಲಿ ಸಯ್ಯದ್ ಮದನಿ ದರ್ಗಾದ ಅಧ್ಯಕ್ಷರು ಶ್ರೀ ಅಬ್ದುಲ್ ರಶೀದ್, ನಿತ್ಯಾಧರ್ ಚರ್ಚ್ ನ ಫಾದರ್ ಸಾಲ್ದಾನರವರು, ಮೊಗವೀರ ಸಂಘದ ಮಾಜಿ ಅಧ್ಯಕ್ಷರು ಸದಾನಂದ ಬಂಗೇರ, ಬಾಬು ಬಂಗೇರ, ನಗರಸಭಾ ಅಧ್ಯಕ್ಷರಾದ  ಹುಸೈನ್ ಕುಂಞಮೋನು, ಉಪಾಧ್ಯಕ್ಷರಾದ ಚಿತ್ರಾ, ಸದಸ್ಯರುಗಳಾದ  ಇಸ್ಮಾಯಿಲ್ ಪೊಡಿಮೋನು,  ಸುಂದರ್ ಉಳಿಯ,  ಫಾರೂಕ್ ಉಳ್ಳಾಲ್,  ಸೂರ್ಯಕಲಾ ಸುರೇಶ್,  ಮೊಹಮ್ಮದ್ ಮುಕ್ಕಚ್ಚೇರಿ, ದಿನೇಶ್ ರೈ,  ಮುಸ್ತಾಫ ಉಳ್ಳಾಲ್,  ಶಶಿಕಲಾ ಶೆಟ್ಟಿ,  ಸುಕುಮಾರ್, ರಝಿಯಾ ಇಬ್ರಾಹಿಂ,  ಫಾರೂಕ್ ಯು.ಹೆಚ್,  ಬಾಝಿಲ್ ಡಿಸೋಜಾ, ಜೇನ್ ಶಾಂತಿ ಡಿಸೋಜಾ, ನಾ.ನಿ.ಸದಸ್ಯರುಗಳಾದ  ವಾರಿಜಾ ಶ್ರೀಯಾನ್,  ರಿಚರ್ಡ್ ವೇಗಸ್,  ರವಿ ಕಾಪಿಕಾಡ್,  ಕಿಶೋರ್ ಕುಮಾರ್,  ಯು.ಹೆಚ್.ಹಮ್ಮಬ್ಬ ಮತ್ತು ಕಾವೇರಿ ಲಯನ್ಸ್ ಕ್ಲಬ್ ನ ಅಧ್ಯಕ್ಷರಾದ ಡಾ|| ಪ್ರಿಯದರ್ಶಿನಿ ಡಿಸೋಜ ಮತ್ತು ಸದಸ್ಯರು , ನಗರಸಭೆಯ ಎಲ್ಲಾ ಸಿಬ್ಬಂಧಿಗಳು, ಸ್ವಸಹಾಯ ಗುಂಪುಗಳ ಸದಸ್ಯರು, ಶಾಲಾ ಶಿಕ್ಷಕ ವರ್ಗ ಮತ್ತು ಮಕ್ಕಳು ಎಲ್ಲಾ ಸಾರ್ವಜನಿಕರು ಹಾಜರಿದ್ದರು.

Exit mobile version