UN NETWORKS
ಮಂಗಳೂರು: ದಿನಾಂಕ 27/10/2017 ನೇ ಶುಕ್ರವಾರದಂದು ಸೈಂಟ್ ಜೊಸೆಪ್ಸ್ ಹೈಸ್ಕೂಲ್, ಬಜಾಲ್ ಇಲ್ಲಿ ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆ ಮಾಹಿತಿ ಕಾರ್ಯಗಾರ ನಡೆಯಿತು. ಸ್ವಸ್ತಿಕ್ ಕಲಾಕೇಂದ್ರ ಜಲ್ಲಿಗುಡ್ಡೆ ಮಂಗಳೂರು ಮತ್ತು ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ,ಮಂಗಳೂರು ಇವರುಗಳ ಜಂಟಿ ಆಶ್ರಯದಲ್ಲಿ ಈ ಮಾಹಿತಿ ಶಿಬಿರ ನಡೆಯಿತು.
ಸ್ವಸ್ತಿಕ್ ಕಲಾಕೇಂದ್ರ ಇದರ ಅಧ್ಯಕ್ಷರಾದ ಹರಿಶ್ಚಂದ್ರ ರಾವ್ ಇವರು ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲಾ ಶಾಲೆಗಳಲ್ಲಿ ಈ ಮಾಹಿತಿ ಶಿಬಿರ ನಡೆಯಬೇಕು ಎಂದು ಒತ್ತಾಯಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನದ ಕಾರ್ಯದರ್ಶಿ ಡಾ|| ಮುರಲಿ ಮೋಹನ್ ಚೂಂತಾರು ಇವರು ವಹಿಸಿದ್ದರು. ಸೈಂಟ್ ಜೋಸೆಪ್ ಹೈಸ್ಕೂಲಿನ ಮುಖ್ಯೋಪಾಧ್ಯಯಿನಿ ಲವಿನ ಸೀಕ್ವೆರ ಮತ್ತು ಶಿಕ್ಷಕಿ ಸಿಸಿಲ ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾರತ್ ಸೇವಾದಳದ ಆಲ್ಪೋನ್ ಪ್ರಾಂಕೋ ಇವರು ಭಾಗವಹಿಸಿದರು. ಪ್ರತಿಯೊಬ್ಬ ಭಾರತೀಯರು ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆ ಬಗ್ಗೆ ವಿಶೇಷ ಅಭಿಮಾನ ಮತ್ತು ಗೌರವ ಬೆಳಸಿಕೊಳ್ಳಬೇಕು. ರಾಷ್ಟ್ರ ಧ್ವಜ ನಮ್ಮ ಸ್ವಾಭಿಮಾನದ ಸಂಕೇತ. ಯಾವುದೇ ಕಾರಣಕ್ಕೂ ರಾಷ್ಟ್ರ ಧ್ವಜಕ್ಕೆ ಅವಮಾನವಾಗದಂತೆ ಎಚ್ಚರವಹಿಸಬೇಕು ಎಂದು ಕರೆನೀಡಿದರು.
ಸ್ವಸ್ತಿಕ್ ಕಲಾಕೇಂದ್ರದ ಸದಸ್ಯರು ಮತ್ತು ಕಾರ್ಯದರ್ಶಿಗಳು ಈ ಸಂದರ್ಬದಲ್ಲಿ ಹಾಜರಿದ್ದರು. ಸುಮಾರು ಮುನ್ನುರು ಮಂದಿ ಮಕ್ಕಳು ಈ ಶಿಬಿರದಲ್ಲಿ ಪ್ರಯೋಜನ ಪಡೆದರು.