Site icon Ullalavani

ಕಲ್ಲಾಪುವಿನಿಂದಲೇ ವಿಜಯದ ಯಾತ್ರೆ ಆರಂಭ: ಉಸ್ಮಾನ್

UN NETWORKS

ಕಲ್ಲಾಪು: ಮಂಗಳೂರು ವಿದಾನಸಭಾ ಕ್ಷೇತ್ರದ ಆರಂಭ ಕಲ್ಲಾಪುವಿನಿಂದಾಗಿದ್ದು, ಇಲ್ಲಿಂದಲೇ ಕಾಂಗ್ರೆಸ್ ವಿಜಯದ ಯಾತ್ರೆ ಆರಂಭಗೊಳ್ಳಲಿದೆ ಎಂದು ಉಳ್ಳಾಲ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಉಸ್ಮಾನ್ ಕಲ್ಲಾಪು ಹೇಳಿದರು.

ಗುರುವಾರ ಕಲ್ಲಾಪು ಖಾಸಗಿ ಹೊಟೇಲ್‍ನಲ್ಲಿ ನಡೆದ ಕಲ್ಲಾಪು, ಅಂಬಟ್ಟಾಡಿ ಸಹಿತ ನಾಲ್ಕು ವಾರ್ಡ್‍ಗಳ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

ಮಂಗಳೂರು ಕ್ಷೇತ್ರದಲ್ಲಿ ಎಂದಿಗೂ ಯು.ಟಿ.ಖಾದರ್ ಅವರದ್ದೇ ಗೆಲುವು, ಅವರನ್ನು ಸೋಲಿಸಬೇಕು ಎನ್ನುವ ನಿಟ್ಟಿನಲ್ಲಿ ವಿರೋಧಿಗಳು ಅಪಪ್ರಚಾರ ಮಾಡುತ್ತಿದ್ದು, ಕಾಂಗ್ರೆಸ್ ಸೋಲಿಸಲು ಎಂತಹ ಕುತಂತ್ರದಿಂದಲೂ ಅಸಾಧ್ಯ. ಮುಕಚ್ಚೇರಿಯಲ್ಲಿ ಝುಬೇರ್ ಕೊಲೆಗೀಡಾಗಿರುವುದು ಎಲ್ಲರಿಗೂ ಬೇಸರದ ವಿಚಾರವಾಗಿತ್ತು. ಆದರೆ ಬಿಜೆಪಿ ಸೂತಕದ ಮನೆಯಲ್ಲೂ ರಾಜಕೀಯ ಬೇಳೆ ಬೇಯಿಸಲು ನೋಡಿದ್ದು ದುರದೃಷ್ಟಕರ. ಮುಂದಿನ ಚುನಾವಣೆಯಲ್ಲಿ ಕಲ್ಲಾಪುವಿನಲ್ಲಿ ಇತರ ಪಕ್ಷದ ಬೂತ್‍ಗಳೂ ಇರದಂತೆ ಮತದಾರರು ನೋಡಿಕೊಳ್ಳಲಿದ್ದಾರೆ ಎಂದರು.

ಮುಖಂಡ ಅಯೂಬ್ ಮಂಚಿಲ ಮಾತನಾಡಿ, ಕಲ್ಲಾಪು ಎನ್ನುವುದು ಕಾಂಗ್ರೆಸ್ ಭದ್ರಕೋಟೆಯಾಗಿದೆ, ಇಲ್ಲಿನ ಯುವಜನತೆ ಪಕ್ಷಕ್ಕಾಗಿ ಯಾವುದೇ ತ್ಯಾಗಕ್ಕೂ ಸಿದ್ಧರಿದ್ದಾರೆ. ಉಳ್ಳಾಲದ ಇತರ ಭಾಗಗಳಲ್ಲಿ ಗಾಂಜಾ ವ್ಯಸನದ ಬಗ್ಗೆ ಆರೋಪಗಳಿದ್ದರೂ ಕಲ್ಲಾಪುವಿನಲ್ಲಿ ಅಂತಹ ಯಾವುದೇ ಪ್ರಕರಣಗಳಿಲ್ಲ. ಈ ಭಾಗದಲ್ಲಿ ಗಾಂಜಾ ವ್ಯಸನಿಗಳು ಕಂಡುಬಂದರೆ ಸ್ಥಳೀಯರೇ ಪೊಲೀಸರಿಗೆ ಒಪ್ಪಿಸುವ ಕೆಲಸ ಮಾಡುತ್ತಿರುವುದು ಉತ್ತಮ ಬೆಳವಣಿಗೆ ಎಂದು ತಿಳಿಸಿದರು.

ಜಿಲ್ಲಾ ಅಲ್ಪಸಂಖ್ಯಾತ ಘಟಕಾಧ್ಯಕ್ಷ ಎನ್.ಎಸ್.ಕರೀಂ ಉದ್ಘಾಟಿಸಿದರು. ನಗರಸಭಾ ಅಧ್ಯಕ್ಷ ಹುಸೈನ್ ಕುಂಞÂಮೋನು, ಸದಸ್ಯ ಮಹಮ್ಮದ್ ಮುಕಚ್ಚೇರಿ, ಯುವಕಾಂಗ್ರೆಸ್ ಅಧ್ಯಕ್ಷ ಸಿ.ಎಂ.ರವೂಫ್, ಮುಖಂಡಾದ ಫೈರೋಜ್ ಉಳ್ಳಾಲ್, ಡೆನ್ನಿಸ್ ಡಿಸೋಜ, ಯೂಸುಫ್ ಉಳ್ಳಾಲ್, ಯು.ಬಿ.ಸಲೀಂ ಇನ್ನಿತರರು ಉಪಸ್ಥಿತರಿದ್ದರು.

ಯು.ಎ.ಇಸ್ಮಾಯಿಲ್ ಕಾರ್ಯಕ್ರಮ ನಿರೂಪಿಸಿದರು.

Exit mobile version