UN NETWORKS
ಉಳ್ಳಾಲ: ವರ್ಷಕ್ಕೆ ಒಂದು ಕೋಟಿ ಉದ್ಯೋಗ ಸೃಷ್ಟಿಸುವುದಾಗಿಯೂ ವಿದೇಶದಲ್ಲಿನ ಕಪ್ಪು ಹಣವನ್ನು ತರಿಸಿ ಪ್ರತಿಯೊಬ್ಬ ಭಾರತೀಯನ ಖಾತೆಗೆ ತಲಾ 15 ಲಕ್ಷ ರೂ. ಜಮಾ ಮಾಡುವುದಾಗಿಯೂ ಭರವಸೆ ನೀಡಿದ ನರೇಂದ್ರ ಮೋದಿಯವರು ಒಬ್ಬ ಸುಳ್ಳುಗಾರ ಎಂಬುದನ್ನು ಸಾಬೀತುಪಡಿಸಿದೆ ಎಂದು ಸಿಪಿಐಎಂನ ದ.ಕ.ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಸುನಿಲ್ ಕುಮಾರ್ ಬಜಾಲ್ ಆರೋಪಿಸಿದ್ದಾರೆ.
ರೈತ ಮುಂದಾಳು ಸಂಜೀವ ಪಿಲಾರ್ ಮಾತನಾಡಿ ಭೂ ಚಳುವಳಿ ನಡೆದು ಇದೀಗ 20 ವರ್ಷಗಳು ಸಂದು ಹೋಗಿದ್ದು, ನೂರಕ್ಕೂ ಅ„ಕ ಭೂರಹಿತ ಕುಟುಂಬಗಳಿಗೆ ಭೂಮಿ ಒದಗಿಸಿದ ಪರಿಣಾಮವಾಗಿ ಇಂದು ಅವರು ತಮ್ಮ ಕುಟುಂಬ ಸಮೇತರಾಗಿ ಜೀವನ ನಡೆಸುತ್ತಿರುವುದನ್ನು ನೆನಪಿಸಿಕೊಂಡು, ಅಂದು ಬಡವರಿಗೆ ಭೂಮಿ ಸಿಗಬೇಕೆಂದು 3 ತಿಂಗಳ ಕಾಲ ನಿರಂತರವಾಗಿ ದಿ| ರಾಮಚಂದ್ರ ಉಚ್ಚಿಲ್‍ರವರ ನೇತೃತ್ವದಲ್ಲಿ ಹೋರಾಟ ನಡೆಯುತ್ತಿರುವಾಗ ಅಂದಿನ ಶಾಸಕರಾಗಿದ್ದವರು ಆ ಚಳವಳಿಯನ್ನು ಹತ್ತಕ್ಕಲು ಶತಾಯ ಗತಾಯ ಪ್ರಯತ್ನಪಟ್ಟು ಸೋಲನ್ನು ಅನುಭವಿಸಿರುವುದನ್ನು ಜ್ಞಾಪಿಸಿಕೊಂಡರು. ಸೋಮೇಶ್ವರ ಗ್ರಾಮದಲ್ಲಿ ಹಲವಾರು ಸಮಸ್ಯೆಗಳಿದ್ದು , ಮುಖ್ಯವಾಗಿ ನೀರಿನ ಸಮಸ್ಯೆ ತೀವ್ರವಾಗಿದ್ದು, ಇವುಗಳ ಪರಿಹಾರಕ್ಕಾಗಿ ಪಂಚಾಯತ್ ಮೇಲೆ ಒತ್ತಡ ತರುವುದಾಗಿ ಸಿಪಿಐಎಂ ನ ಶಾಖಾ ಸಮ್ಮೇಳನಗಳಲ್ಲಿ ನಿರ್ಣಯ ಮಾಡಿರುವುದನ್ನು ಅವರು ವಿವರಿಸಿದರು.
ಹಿರಿಯ ಮುಂದಾಳು ಸುಂದರ ಕುಂಪಲ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಸಭೆಯಲ್ಲಿ ಸಿಪಿಐಎಂನ ಉಳ್ಳಾಲ ವಲಯ ಕಾರ್ಯದರ್ಶಿ ಕೆ. ಕೃಷ್ಣಪ್ಪ ಸಾಲಿಯಾನ್, ಕೋಟೆಕಾರು ಲೋಕಲ್ ಸಮಿತಿ ಕಾರ್ಯದರ್ಶಿ ಬಾಬು ಪಿಲಾರ್, ಶಾಖಾ ಕಾರ್ಯದರ್ಶಿ ಶೇಖರ ಭಂಡಾರಿ, ಪುಷ್ಪಾ, ನಳಿನಾಕ್ಷಿ, ಗಂಗಯ್ಯ ಗಟ್ಟಿ, ಡಿವೈಎಫ್‍ಐ ದ.ಕ. ಜಿಲ್ಲಾ ಮುಖಂಡ ನವೀನ್ ಕೊಂಚಾಡಿ ಉಪಸ್ಥಿತರಿದ್ದರು.
ಚಂದ್ರಹಾಸ ದಾಸ್ ಸ್ವಾಗತಿಸಿದರು. ಕುಂಇïರಾಮ ಕುಂಪಲ ವಂದಿಸಿದರು.