UN NETWORKS
ಮಂಜೇಶ್ವರ : ಡಾ| ಬಿ.ಆರ್ ಅಂಬೇಡ್ಕರ್ ದಲಿತ ಸಾಹಿತ್ಯ ಅಕಾಡಮೆ ಕೇರಳ ರಾಜ್ಯ ಸಮಿತಿಯ 21ನೇ ರಾಜ್ಯ ಸಮ್ಮೇಳನವು ಕೋಟ್ಟಯಂ ಜಿಲ್ಲೆಯ ಚೆರ್ತಲ ಕಲಾಭಮಣಿ ನಗರದ ಸೈಂಟ್ ಮಿನ್ನಾಲ್ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಈ ವೇಳೆ ಕಾಸರಗೋಡು ಜಿಲ್ಲೆಯಿಂದ ಪ್ರತಿನಿಧಿಕರಿಸಿದ ಸಾಮಾಜಿಕ ಕಾರ್ಯಕರ್ತ ತುಳಸೀದಾಸ್ ಮಂಜೇಶ್ವರ ಇವರ ಸಮಾಜಸೇವೆಯನ್ನು ಗುರುತಿಸಿ ಡಾ| ಬಿ,ಆರ್ ಅಂಬೇಡ್ಕರ್ ಜ್ಯೋತಿ ಪ್ರಶಸ್ತಿಯನ್ನ ಕೇರಳದ ಸಿವಿಲ್ ಸಪ್ಲೈ ಮಂತ್ರಿಗಳಾದ ತಿಲೋತ್ತಮನ್ ಪ್ರಧಾನಗೈದರು.
ಮಂಜೇಶ್ವರ ಗ್ರಾಮ ಪಂಚಾಯತಿನ ಮಾಜಿ ಸದಸ್ಯರಾಗಿರುವ ತುಳಸೀದಾಸ್‍ರವರು ಪ್ರಸ್ತುತ ಮಂಗಳೂರಿನಲ್ಲಿ ರೈಲ್ವೇ ಉದ್ಯೋಗಿಯಾಗಿದ್ದು, ಶ್ರೀ ಧೂಮಾವತಿ ದೈವಸ್ಥಾನ ಕುಂಬಳೆಯ ಅಧ್ಯಕ್ಷರಾಗಿಯೂ, ಬ್ರೈಟ್ ಮಂಜೇಶ್ವರದ ಅಧ್ಯಕ್ಷರಾಗಿಯೂ, ಭಾರತೀಯ ಮಜ್ದೂರ್ ಸಂಘ (ಬಿ.ಎಂ.ಎಸ್) ಇದರ ಪ್ರಧಾನ ಕಾರ್ಯದರ್ಶಿಯಾಗಿಯೂ, ಬಾಕುಡ ಸಮಾಜದ ಕೇಂದ್ರೀಯ ಮಂಡಳಿಯ ಪ್ರಧಾನ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಸಮಾಜ ಸೇವೆಗಾಗಿ ದೊರೆತ ಡಾ| ಬಿ.ಆರ್ ಅಂಬೇಡ್ಕರ್ ಜ್ಯೋತಿ ಪ್ರಶಸ್ತಿ ಭಾಜನರಾದ ತುಳಸೀದಾಸ್‍ರವರನ್ನು ಮಂಜೇಶ್ವರದ ಜನತೆ ಅಭಿನಂದಿಸಿದೆ.