UN NETWORKS
ಉಳ್ಳಾಲ : ಸಾಮಾಜಿಕ ಜೀವನದಲ್ಲಿ ಕತ್ತಲೆಯನ್ನು ಹೋಗಲಾಡಿಸಿ ಬೆಳಕಿನಂತೆ ನಮಗೆ ಸಾಧ್ಯವಾದಷ್ಟು ಮಟ್ಟಿಗೆ ಇನ್ನೊಬ್ಬರ ಕಷ್ಟಗಳಲ್ಲಿ ಭಾಗಿಯಾಗುವ ರೀತಿಯಲ್ಲಿ ಕೆಲಸವನ್ನು ಮಾಡಿದಾಗ ಸುಂದರ ಸಮಾಜದ ನಿರ್ಮಾಣ ಸಾಧ್ಯ ಎಂದು ವಿದ್ಯಾರತ್ನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು ಅಭಿಪ್ರಾಯಪಟ್ಟರು.
ದೇರಳಕಟ್ಟೆ ವಿದ್ಯಾರತ್ನ ಆಂಗ್ಲ ಮಾದ್ಯಮ ಶಾಲೆಯಲ್ಲಿ ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ಕಾರ್ಯಕ್ರಮಕ್ಕೆ ಸಾಂಪ್ರದಾಯಿಕವಾಗಿ ಹಣತೆ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅಥಿತಿಗಳಾಗಿ ಆಗಮಿಸಿದ ಜೆಸಿಐ ಮಂಗಳಗಂಗೂತ್ರಿಯ ಅಧ್ಯಕ್ಷ ಬಾದ್ ಷಾ ಸರ್ವಧರ್ಮ ಸಮನ್ವಯತೆಯನ್ನು ಸದಾ ಮೈಗೂಡಿಸಿ ವಿದ್ಯಾರತ್ನ ವಿದ್ಯಾ ಸಂಸ್ಥೆಯಲ್ಲಿ ನಡೆಯುವ ಕಾರ್ಯಕ್ರಮ ಶ್ಲ್ಲಾಘನೀಯ ಎಂದರಲ್ಲದೆ ಬೆಳಕಿನ ಹಬ್ಬ ದೀಪಾವಳಿ ಎಲ್ಲರ ಬಾಳಿಗೂ ಬೆಳಕಾಗಲಿ ಎಂದು ಶುಭಹಾರೈಸಿದರು.
ರೋಟರಿ ಕ್ಲಬ್ ದೇರಳಕಟ್ಟೆಯ ಕಾರ್ಯದರ್ಶಿ ಜಯಪ್ರಕಾಶ್ ರೈ, ಸಂಸ್ಥೆಯ ಕಾರ್ಯದರ್ಶಿ ಸೌಮ್ಯ ಶೆಟ್ಟಿ , ಶಾಲಾ ಮುಖ್ಯೋಪಾಧ್ಯಾಯಿನಿ ನಹೀಮ್ ಹಮೀದ್, ಶಾಲಾ ವಿದಾರ್ಥಿ ನಾಯಕ ಶ್ರೇಯಶ್ ಉಪಸ್ಥಿತರಿದ್ದರು.
ಶಿಕ್ಷಕಿ ಭಾರತಿ ಸ್ವಾಗತಿಸಿದರು, ಸಹ ಶಿಕ್ಷಕ ರಮೇಶ್ ಪೆರಾಡಿ ವಂದಿಸಿದರು, ಶಿಕ್ಷಕ ರವಿಕುಮಾರ್ ಕೋಡಿ ಕಾರ್ಯಕ್ರಮ ನಿರೂಪಿಸಿದರು.