UN NETWORKS
ಉಳ್ಳಾಲ : ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಷನ್ ಆಫ್ ಇಂಡಿಯಾ ಇದರ 35ನೇ ವರ್ಷದ ಸಂಸ್ಥಾಪನಾ ದಿನದ ಅಂಗವಾಗಿ ಎಸ್ ಐ ಓ ಉಳ್ಳಾಲ ಶಾಖೆಯ ವತಿಯಿಂದ ಧ್ವಜಾರೋಹಣ ಕಾರ್ಯಕ್ರಮವನ್ನು ಇಂದು ಸುಮಯ್ಯಾ ಮಸೀದಿ ಹಿರಾ ನಗರ್ ಬಬ್ಬು ಕಟ್ಟೆಯಲ್ಲಿ ಬೆಳಗ್ಗೆ 7-30ಕ್ಕೆ ಸರಿಯಾಗಿ ಕಾರ್ಯಕ್ರಮ ನೆರೆವೇರಿತು.
ಮುಖ್ಯ ಅಥಿತಿಯಾಗಿ ಆಗಮಿಸಿದ ಜಮಾಅತೇ ಇಸ್ಲಾಮಿ ವಲಯ ಕಾರ್ಯದರ್ಶಿ ಇಲ್ಯಾಸ್ ಇಸ್ಮಾಯಿಲ್ ಧ್ವಜಾರೋಹಣ ಮಾಡೂದರ ಮುಖಾಂತರ ಕಾರ್ಯಕ್ರಮ ಉದ್ಘಾಟಿಸಿದರು .
“ಯುವಕರು ಸಮಾಜದ ಪುನರ್ನಿಮಾಣದ ಕಾರ್ಯದಲ್ಲಿರಬೇಕು ಯವ್ವನವನ್ನು ಹಾಳುಮಾಡಬಾರದು ಉತ್ತಮ ಸಮಾಜದ ವಕ್ತಾರರಾಗಬೇಕು ಎಂದರು ” .
ಇನ್ನೋರ್ವ ಮುಖ್ಯ ಅತಿಥಿ ಎಸ್ ಐ ಓ ಉಳ್ಳಾಲ ಶಾಖೆಯ ಸ್ಥಾಪಕ ಅದ್ಯಕ್ಷರೂ ಸ್ಥಾನೀಯ ಜಮಾಅತ್ ಅಧ್ಯಕ್ಷರಾದ ಜನಾಬ್ ಅಬ್ದುಲ್ ಕರೀಂ ರವರು ಮಾತನಾಡುತ್ತಾ “ಎಸ್ ಐ ಓ ಧಾರ್ಮಿಕ ಜ್ಞಾನದೊಂದಿಗೆ ಸಾಮಾಜಿಕ ಕಳಕಳಿಯನನ್ನುಂಟು ಮಾಡುವ ಸಂಘಟನೆ ಇಂದು ದೇಶಾದ್ಯಂತ ಬೆಳೆದು 35 ವರ್ಷಗಳು ದಾಟಿದೆ ಇನ್ನೂ ಬೆಳೆಯಬೇಕು ಸಮಾಜದಲ್ಲಿ ಶಾಂತಿ ಸೌಹಾರ್ದತೆಗೆ ವಿಧ್ಯಾರ್ಥಿಗಳಲ್ಲಿ ಜಾಗ್ರತಿ ಮೂಡಿಸುವ ಕೆಲಸ ಮಾಡಬೇಕೆಂದರು”. ಜಮಾಅತೇ ಇಸ್ಲಾಮಿ ವಲಯ ಕಾರ್ಯದರ್ಶಿ ,ಇನ್ನೋರ್ವ ಅಥಿತಿಯಾದ ಸಮಾಜ ಸೇವಾ ಘಟಕದ ಅಧ್ಯಕ್ಷರಾದ ಸಿ ಎಚ್ ಸಲಾಂ ಹಿತವಚನವಿತ್ತರು ಎಸ್ ಐ ಓ ಉಳ್ಳಾಲ ಶಾಖೆಯ ಅಧ್ಯಕ್ಷರಾದ ಅಶೀರುದ್ದೀನ್ ಆಲಿಯಾ ಸ್ವಾಗತ ಮತ್ತು ಪ್ರಾಸ್ತಾವಿಕ ನುಡಿದರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಝಾಮ್ ಎಸ್ ಐ ಓ ಘೋಷಣಾ ವಾಖ್ಯ ಹೇಳಿದರು. ಸೈಫ್ ಕಿರಾಅತ್ ಪಠಿಸಿದರು . ಅನಿವಾಸಿ ಹುಸೇನ್ ರವರು ಉಪಸ್ಥಿತರಿದ್ದರು. ತಾಜುದ್ದೀನ್ ಕಾರ್ಯಕ್ರಮ ನಿರೂಪಿಸಿದರು