Site icon Ullalavani

ಎಸ್.ಡಿ.ಪಿ.ಐ: ಬಸ್ ತಂಗುದಾಣ ಉದ್ಘಾಟನೆ

UN NETWORKS

ಬಂಟ್ವಾಳ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮಂಚಿ ವಲಯ ಸಮಿತಿ ವತಿಯಿಂದ ಮಂಚಿ ಗ್ರಾಮ ಪಂಚಾಯತ್ ವ್ಯಾಪ್ತಿಗೊಳಪಟ್ಟ ಕುಕ್ಕಾಜೆ ಚೆಕ್ ಪೋಸ್ಟ್ ಬಳಿ ನಿರ್ಮಿಸಿದ ಸಾರ್ವಜನಿಕ ಬಸ್ಸು ತಂಗುದಾಣವನ್ನು ಎಸ್.ಡಿ.ಪಿ.ಐ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಶಾಹುಲ್ ಹಮೀದ್ ಉದ್ಘಾಟಿಸಿದರು.

ಎಸ್.ಡಿ.ಪಿ.ಐ ಜಿಲ್ಲಾ ಸಮಿತಿ ಸದಸ್ಯ ಅಶ್ರಫ್ ಮಂಚಿ ಪ್ರಸ್ತಾವಿಕ ಭಾಷಣ ಮಾಡಿದರು. ಶೈನ್ ಗೈಸ್ ಕುಕ್ಕಾಜೆ ಅಧ್ಯಕ್ಷ ಗಫ್ಫಾರ್ ಕುಕ್ಕಾಜೆ, ಸಾಮಾಜಿಕ ಕಾರ್ಯಕರ್ತ ನಝೀರ್ ಕುಕ್ಕಾಜೆ ಮಾಜಿ ತಾಲೂಕು ಪಂಚಾಯಿತ್ ಸದಸ್ಯ ಡಿ.ಕೆ. ಹಂಝ, ಮಂಚಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮೋಹನ್ ದಾಸ್, ಅಬೂಬಕ್ಕರ್ ಮುಸ್ಲಿಯಾರ್ ಕುಕ್ಕಾಜೆ ಹಾಗೂ ಇರ್ಫಾದ್ ಕುಕ್ಕಾಜೆ (ಮೋನು) ಮತ್ತಿತರರು ಉಪಸ್ಥಿತರಿದ್ದರು.

ಎಸ್.ಡಿ.ಪಿ.ಐ ಗ್ರಾಮ ಸಮಿತಿ ಅಧ್ಧಕ್ಷ ಡಿ.ಎನ್. ಫಾರೂಕ್ ಮಂಚಿ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.

Exit mobile version