Site icon Ullalavani

ಯುವಪೀಳಿಗೆಗೆ ಹಬ್ಬದ ಮಹತ್ವ ತಿಳಿಸುವ ಕಾರ್ಯ ಆಗಲಿ : ಜಿತೇಂದ್ರ ಕೊಟ್ಟಾರಿ

UN NETWORKS

ಉಳ್ಳಾಲ : ಸನಾತನ ಸಂಸ್ಕೃತಿಯನ್ನು ಬಿಂಬಿಸುವಂತಹ ದೀಪಾವಳಿ ಉತ್ಸವವನ್ನು ಸಾಮೂಹಿಕವಾಗಿ ಆಚರಿಸುವ ಮೂಲಕ ನಮ್ಮ ಮುಂದಿನ ಪೀಳಿಗೆಗೆ ಹಬ್ಬ ಹರಿದಿನಗಳ ಮಹತ್ವ ತಿಳಿಸುವ ಕಾರ್ಯ ಆಗಬೇಕು ಎಂದು ದ.ಕ. ಜಿಲ್ಲಾ ಬಿಜೆಪಿ ವಕ್ತಾರ ಜಿತೇಂದ್ರ ಕೊಟ್ಟಾರಿ ಅಭಿಪ್ರಾಯಪಟ್ಟರು.

ಕುತ್ತಾರು ಶ್ರೀ ರಾಜರಾಜೇಶ್ವರೀ ಸಿದ್ಧಿ ವಿನಾಯಕ ದೇವಸ್ಥಾನ ಕುತ್ತಾರಿನಲ್ಲಿ ವೀರ ಸಾವರ್ಕರ್ ಪ್ರತಿಷ್ಠಾನ ಕುತ್ತಾರ್ ಇದರ ದ್ವಿತೀಯ ವರ್ಷದ ಗೂಡುದೀಪ ಸ್ಪರ್ಧಾ ಸಂಭ್ರಮ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ದೀಪಾವಳಿ ಉತ್ಸವದೊಂದಿಗೆ ಗೋಪೂಜೆಗೂ ಮಹತ್ವದ ಸ್ಥಾನವಿದೆ. ನಮ್ಮ ಗೋ ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗುವುದರೊಂದಿಗೆ ಕೃಷಿ ಸಂಸ್ಕೃತಿಯನ್ನು ಬೆಳೆಸುವ ಕಾರ್ಯ ಆಗಬೇಕು ಎಂದರು.

ಗೋಪೂಜೆ ನೆರವೇರಿಸಿ ಮಾತನಾಡಿದ ವಿಶ್ವಹಿಂದೂ ಪರಿಷತ್‍ನ ಮುಖಂಡ ಬಿ.ನಾರಾಯಣ ಕುಂಪಲ ಮಾತನಾಡಿ ಗೋವು ಕೇವಲ ಒಂದು ಪಶುವಾಗದೆ ಮುಕ್ಕೋಟಿ ದೇವತರಗಳ ಆವಾಸ ಸ್ಥಾನವಾಗಿದ್ದು,ಇದು ಧಾರ್ಮಿಕ ನೆಲೆಯಲ್ಲಿ ಮಾತ್ರವಲ್ಲದೆ, ವೈಜ್ಞಾನಿಕ, ಆರೋಗ್ಯ ದೃಷ್ಠಿಯಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ ಎಂದರು. ಗೋವಿನ ಅರ್ಕದಿಂದ ಕ್ಯಾನ್ಸರ್ ಶಮನ ಮಾಡುವ ಶಕ್ತಿಯಿದ್ದು, ಬೆನ್ನುಮೂಳೆಯಲ್ಲಿರುವ ಸೂರ್ಯ ನಾಡಿಯನ್ನು ನಾವು ಸ್ಪರ್ಶ ಮಾಡಿದರೆ ನರದೋಷ ದೌರ್ಬಲ್ಯ ನಿವಾರಣೆಯಾಗುತ್ತದೆ. ಈ ನಿಟ್ಟಿನಲ್ಲಿ ಗೋ ಸಂಪತ್ತನ್ನು ಉಳಿಸುವ ಕಾರ್ಯದಲ್ಲಿ ಎಲ್ಲರೂ ಕಟಿಬದ್ಧರಾಗಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುತ್ತಾರು ಶ್ರೀ ಪಂಜಂದಾಯ ಬಂಟ ವೈದ್ಯನಾಥ ದೈವಸ್ಥಾನದ ಆಡಳಿತ ಮೊಕ್ತೇಸರ ರವೀಂದ್ರನಾಥ್ ಪೂಂಜ ಮಾಗಂತಡಿ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ರವೀಂದ್ರ ಶೆಟ್ಟಿ ಉಳಿದೊಟ್ಟು , ಬಿಜೆಪಿ ರಾಜ್ಯ ಸಹ ವಕ್ತಾರೆ ಸುಲೋಚನಾ ಜಿ. ಕೆ. ಭಟ್, ಮುನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ರೂಪ ಶೆಟ್ಟಿ, ಕುತ್ತಾರು ಶ್ರೀ ರಾಜರಾಜೇಶ್ವರೀ ಸಿದ್ಧಿ ವಿನಾಯಕ ದೇವಸ್ಥಾನದ ಅಧ್ಯಕ್ಷ ಯಾದವ ಗಟ್ಟಿ ಮುಂಡೋಳಿ, ದಕ್ಷಿಣ ವಲಯ ವಿಭಾಗದ ಎಸಿಪಿ ಎ.ರಾಮ ರಾವ್, ಸರ್ವೇಯರ್ ನಾಗರಾಜ್ ಕೋಟೆಕಾರ್, ಮೂಕಾಂಬಿಕಾ ಕನ್‍ಸ್ಟ್ರಕ್ಷನ್‍ನ ಚಂದ್ರಹಾಸ ಪಂಡಿತ್‍ಹೌಸ್, ಗೌರವ ಸಲಹೆಗಾರ ಗೋಪಾಲ ಕುತ್ತಾರು, ಅಧ್ಯಕ್ಷ ಪದ್ಮನಾಭ ಮರ್ಕೆದು, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಸಿಂಪೋನಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸ್ಥಳೀಯ ಪ್ರತಿಭಾನ್ವಿತರನ್ನು ಗೌರವಿಸಲಾಯಿತು.ಸಮಿತಿ ಗೌರವ ಸಲಹೆಗಾರರಾದ ಚಂದ್ರಹಾಸ್ ಉಳ್ಳಾಲ್ ಸ್ವಾಗತಿಸಿದರು. ಉಪಾಧ್ಯಕ್ಷ ಸುಜಿತ್ ಮಾಡೂರು ಪ್ರಸ್ತಾವನೆಗೈದರು. ರಾಜೇಶ್ ಉಳ್ಳಾಲ್ ವಂದಿಸಿದರು. ರೋಹಿತ್ ಉಳ್ಳಾಲ್ ಆಶಿಕ್ ಮಾಡೂರು ಕಾರ್ಯಕ್ರಮ ನಿರ್ವಹಿಸಿದರು.

Exit mobile version