UN NETWORKS
ಉಳ್ಳಾಲ : ದಶಕಗಳ ಹಿಂದೆ ಭಾರತದ ವೈದ್ಯಕೀಯ ಕ್ಷೇತ್ರದಲ್ಲಿ ಉತ್ತಮ ವ್ಯವಸ್ಥೆಗಳಿಲ್ಲದೇ ವೈದ್ಯಕೀಯ ಪದವೀಧರರು ಉನ್ನತ ಶಿಕ್ಷಣ, ವೃತ್ತಿಯನ್ನು ಅರಸಿ ವಿದೇಶಗಳಿಗೆ ಹೋಗಿ ಅಲ್ಲಿಯೇ ನೆಲೆ ನಿಲ್ಲಲು ಹಾತೊರೆಯುತ್ತಿದ್ದರು. ಪ್ರಸ್ತುತ ದೇಶದ ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಗುಣಮಟ್ಟದಲ್ಲಿ ಅಭಿವೃದ್ಧಿಯಾಗಿದ್ದು, ಯುವ ವೈದ್ಯರ ಮೇಲೆ ಜನತೆ ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿರುವುದರಿಂದ ಕ್ಲಿನಿಕಲ್ ಸಂಶೋಧನೆಯತ್ತ ಹೆಚ್ಚಿನ ಗಮನ ಹರಿಸುವ ಅಗತ್ಯವಿದೆ ಎಂದು ನವದೆಹಲಿಯ ಕ್ಯಾನ್ಸರ್ ಇನ್‍ಸ್ಟಿಟ್ಯೂಟ್ ಆಫ್ ಇಂಡಿಯಾದ ಮುಖ್ಯಸ್ಥ ಹಾಗೂ ಅಖಿಲ ಭಾರತ ವೈದ್ಯಕೀಯ ಶಿಕ್ಷಣ ಸಂಸ್ಥೆಯ ರೇಡಿಯೇಶನ್ ಆಂಕೋಲಾಜಿ ವಿಭಾಗ ಪ್ರಾಧ್ಯಾಪಕ ಡಾ. ಜಿ.ಕೆ. ರತ್ ಅಭಿಪ್ರಾಯಪಟ್ಟರು.
ಅವರು ದೇರಳಕಟ್ಟೆಯ ಯೇನೆಪೋಯ ವಿವಿ ಕ್ಯಾಂಪಸ್‍ನಲ್ಲಿರುವ `ಯೆನ್‍ಡ್ಯೂರೆನ್ಸ್’ ಒಳಾಂಗಣ ಕ್ರೀಡಾಂಗಣದ ಸಭಾಂಗಣದಲ್ಲಿ ಶನಿವಾರ ನಡೆದ ಯೇನೆಪೋಯ ವಿಶ್ವವಿದ್ಯಾಲಯದ 7ನೇ ಘಟಿಕೋತ್ಸವದಲ್ಲಿ ಘಟಿಕೋತ್ಸವ ಭಾಷಣಗೈದರು.
ಭಾರತ ಸ್ವಾತಂತ್ರ್ಯ ಗಳಿಸಿದ ಸಂದರ್ಭ ದೇಶದೆಲ್ಲೆಡೆ ಪ್ಲೇಗ್, ಮಲೇರಿಯಾ, ಕಾಲರಾ ಲೆಕ್ಕವಿಲ್ಲದಷ್ಟು ಸಂಖ್ಯೆಯಲ್ಲಿ ಜೀವ ಬಲಿತೆಗೆದುಕೊಂಡಿತ್ತು. ಸೂಕ್ತ ಚಿಕಿತ್ಸೆ ಸೂಕ್ತ ವ್ಯವಸ್ಥೆ ಇರದಿರುವುದರಿಂದ ಆ ದಿನಗಳಲ್ಲಿ ಮನುಷ್ಯನ ಸರಾಸರಿ ಜೀವಿತಾವಧಿ ಕೇವಲ 32ವರ್ಷ ವಾಗಿತ್ತು. ಸರಕಾರ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ಕೊಟ್ಟ ಪರಿಣಾಮ ಸರಾಸರಿ ಜೀವಿತಾವ„ 62ವರ್ಷಕ್ಕೇರಿದೆ. ಶುದ್ಧ ನೀರು, ಹಾಲು, ಔಷಧಿ, ಜೀವನಶೈಲಿ ಸ್ವಲ್ಪ ಮಟ್ಟಿಗೆ ಉತ್ತಮವಾಗಿದ್ದುದರಿಂದ ಸಿಡುಬು, ಪೋಲಿಯೋ ಸಂಪೂರ್ಣ ನಿರ್ಮೂಲನೆಗೊಂಡಿದೆ ಎಂದರು.
ತಂಬಾಕು ಹಾಗೂ ಅಮಲು ಪದಾರ್ಥಗಳ ಸೇವನೆ ಹಲವು ರೋಗಗಳ ಉತ್ಪತ್ತಿಗೆ ಕಾರಣವಾಗಿದೆ. ಹಾಗಿದ್ದರೂ ಬಯೋ ಟೆಕ್ನಾಲಾಜಿ ಹಾಗೂ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಅಭೂತಪೂರ್ವ ಆವಿಷ್ಕಾರಗಳಾಗಿದ್ದು ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆಗಳಿಗೆ ಸಹಾಯಕವಾಗಿದೆ. ಹಾಗಿದ್ದರೂ ಬಳಕೆಯ ಮೇಲೆ ನಿಗಾ ಇರಬೇಕು. ಒಟ್ಟಿನಲ್ಲಿ ಜನರಿಗೆ ತಮ್ಮ ಜೀವನಕ್ರಮದ ಮೇಲೆ ಹತೋಟಿ ಇರಬೇಕು ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ದುಬೈಯ ಕೆಇಎಫ್ ಹೋಲ್ಡಿಂಗ್ಸ್‍ನ ಚೇರ್‍ಮೆನ್ ಪೈಝಲ್ ಕೊಟ್ಟಿಕೋಲನ್ ಪ್ರಪಂಚದ ಇತರ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ಸಮನಾಗಿ ಭಾರತವೂ ಬೆಳೆಯುತ್ತಿದ್ದು ತಂತ್ರಜ್ಞಾನ ಕ್ಷೇತ್ರದಲ್ಲಿ ಬಹಳಷ್ಟು ಪ್ರಗತಿ ಸಾ„ಸಿದೆ. ಹಾಗೆಯೇ ವೈದ್ಯಕೀಯ ಕ್ಷೇತ್ರದಲ್ಲೂ ಸಂಶೋಧನೆಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದರು.ಕುಲಾಧಿಪತಿ ವೈ. ಅಬ್ದುಲ್ಲ ಕುಂಞ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ 421ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಹಾಗೆಯೇ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಬಿಡಿಎಸ್‍ನ ವೋಂಗ್ ಜಿಯಾ ಹುಯ್, ಎಂಬಿಬಿಎಸ್‍ನ ಸಂಪಿರೀತಾ ಯು.ಸಿ, ಬಿಎಸ್ಸಿ ನರ್ಸಿಂಗ್ ಪೋಸ್ಟ್ ಬೇಸಿಕ್‍ನ ಮೆರಿನ್ ಜೋಸೆಫ್, ಬಿಎಸ್ಸಿ ನರ್ಸಿಂಗ್‍ನ ನಿಜಿತಾ ಕುಮಾರಿ ಕೆ, ಫಿಸಿಯೋಥೆರಪಿಯ ಯಾಸಿರ್ ಕೆ. ಅವರಿಗೆ ಬಂಗಾರದ ಪದಕ ನೀಡಿ ಗೌರವಿಸಲಾಯಿತು.
ಕುಲಸಚಿವ ಡಾ. ಜಿ. ಶ್ರೀಕುಮಾರ್ ಮೆನನ್, ಸಹಾಯಕ ಪರೀಕ್ಷಾಂಗ ನಿಯಂತ್ರಣಾ„ಕಾರಿ ಡಾ. ಬಿ.ಟಿ. ನಂದೀಶ್, ಇಸ್ಲಾಮಿಕ್ ಅಕಾಡೆಮಿ ಆಫ್ ಎಜ್ಯುಕೇಶನ್ ಚೇರ್‍ಮೆನ್ ವೈ. ಮಹಮ್ಮದ್ ಕುಂಞ, ಕಾರ್ಯದರ್ಶಿ ಡಾ. ಅಖ್ತರ್ ಹುಸೈನ್, ಟ್ರಸ್ಟಿ ಡಾ. ಸಿ.ಪಿ. ಹಬೀಬ್ ರಹಿಮಾನ್, ಖಾಲಿದ್ ಬಾವಾ, ಯೇನೆಪೋಯ ದಂತ ಮಹಾವಿದ್ಯಾಲಯದ ಡೀನ್ ಡಾ. ಬಿ.ಎಚ್. ಶ್ರೀಪತಿ ರಾವ್, ಯೇನೆಪೋಯ ವೈದ್ಯಕೀಯ ಮಹಾ ವಿದ್ಯಾಲಯದ ಡೀನ್ ಡಾ. ಗುಲಾಂ ಜಿಲಾನಿ ಖಾದಿರಿ, ಯೇನೆಪೋಯ ನರ್ಸಿಂಗ್ ಕಾಲೇಜು ಪ್ರಾಂಶುಪಾಲೆ ಡಾ. ಡೆವಿನಾ ಇ ರೋಡ್ರಿಗಸ್, ಯೈನೆಪೋಯ ಅಲೈಡ್ ಆ್ಯಂಡ್ ಹೆಲ್ತ್ ಸೈನ್ಸಸ್ ಡೀನ್ ಡಾ. ಪದ್ಮಕುಮಾರ್ ಎಸ್, ಬಿಒಎಂ ಸದಸ್ಯರುಗಳಾದ ಡಾ, ವೇದಪ್ರಕಾಶ್ ಮಿಶ್ರಾ, ಪೋ.ಬಿ.ಎ.ವಿವೇಕ್ ರೈ, ಸಂಪತ್ತಿಲ ಪದ್ಮನಾಭ, ಎರಿಕ್ ಸಿ. ಲೋಬೊ ಉಪಸ್ಥಿತರಿದ್ದರು.
ಯೇನೆಪೋಯ ವಿವಿ ಕುಲಪತಿ ಡಾ. ವಿಜಯ ಕುಮಾರ್ ಸ್ವಾಗತಿಸಿದರು. ಡಾ. ರೋಶೆಲ್ ಟೆಲ್ಲಿಸ್ ಹಾಗೂ ಸುನೀತಾ ಪ್ರಭು ಕಾರ್ಯಕ್ರಮ ನಿರೂಪಿಸಿದರು.