UN NETWORKS
ಉಳ್ಳಾಲ: ಜಗತ್ತಿನ ಮೂಲೆ ಮೂಲೆಗೂ ಸುನ್ನತ್ ಜಮಾತಿನ ಆಶಯ ಮುಟ್ಟಿಸುವ ಉದ್ದೇಶದಿಂದ ವಿದ್ಯಾರ್ಥಿಗಳಿಗೆ ಹತ್ತಿರವಾಗುವ ರೀತಿಯಲ್ಲಿ ಅಲ್ಲಲ್ಲಿ ಮದರಸಗಳ ನಿರ್ಮಿಸಿ ಧಾರ್ಮಿಕ ವಿದ್ಯೆ ಜೊತೆಗೆ ಲೌಕಿಕ ವಿದ್ಯೆಯನ್ನು ನೀಡಲಾಗುತ್ತಿದೆ ಎಂದು ದ.ಕ ಜಿಲ್ಲಾ ಸಂಯುಕ್ತ ಖಾಝಿ ಅಸ್ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಕೂರತ್ ಅಭಿಪ್ರಾಯಪಟ್ಟರು.
ಅವರು ತಲಪಾಡಿ ಗ್ರಾಮದ ಹೊಸನಗರದಲ್ಲಿ ಎಸ್‍ವೈಎಸ್ ಕೆ.ಸಿ ರೋಡು ಸೆಂಟರ್ ಅಧೀನದ ತಾಜುಲ್ ಉಲಮಾ ಎಜ್ಯುಕೇಶನ್ ಸೆಂಟರ್ ಇದರ ವತಿಯಿಂದ ನೂತನವಾಗಿ ನಿರ್ಮಿಸಿದ ಮದರಸ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿರು.
ಧಾರ್ಮಿಕ ಹಾಗೂ ಲೌಕಿಕ ವಿದ್ಯೆ ಪಡೆದಾಗ ಮಾತ್ರ ಸಂಪೂರ್ಣ ಮನುಷ್ಯನಾಗಲು ಸಾಧ್ಯ . ಈ ನಿಟ್ಟಿನಲ್ಲಿ ಮಕ್ಕಳಲ್ಲೇ ಜಾಗೃತಿ ಮೂಡಿಸುವ ಉದ್ದೇಶವನ್ನು ಹೊತ್ತು ಮದರಸಗಳು ಕಾರ್ಯಾಚರಿಸುತ್ತಿವೆ ಎಂದರು.
ರಾಜ್ಯ ಅಹಾರ ಸಚಿವ ಯು.ಟಿ ಖಾದರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ರಾಜ್ಯ ಸರಕಾರ ಧಾರ್ಮಿಕ ಕ್ಷೇತ್ರಕ್ಕೆ ಬಹಳಷ್ಟು ಅನುದಾನ ನೀಡುತ್ತಾ ಬಂದಿದೆ. ಮುಂದೆ ಸಂಸ್ಥೆಯ ಅಭಿವೃದ್ಧಿಗೆ ಬೇಕಾಗುವ ಅನುದಾನವನ್ನು ಬಿಡುಗಡೆ ಮಾಡುವ ಭರವಸೆಯನ್ನು ನೀಡಿದರು.
ದ.ಕ ಜಿಲ್ಲಾ ಸಂಯುಕ್ತ ಖಾಝಿ ಅಸ್ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಕೂರತ್ ನೂತನ ಮದ್ರಸ ಕಟ್ಟಡ ಉದ್ಘಾಟಿಸಿದರು.
ಎಸ್‍ವೈಎಸ್ ಕರ್ನಾಟಕ ರಾಜ್ಯಾಧ್ಯಕ್ಷ ಕೆ.ಪಿ ಹುಸೈನ್ ಸಅದಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಸ್‍ಜೆಯು ತಲಪಾಡಿ ವಲಯಾಧ್ಯಕ್ಷ ಅಬ್ದುರ್ರಶೀದ್ ಝೈನಿ ಅಲ್-ಕಾಮಿಲ್ ಕಾರ್ಯಕ್ರಮ ಉದ್ಘಾಟಿಸಿದರು. ತಲಪಾಡಿ ಗ್ರಾ.ಪಂ ಅಧ್ಯಕ್ಷ ಸುರೇಶ್ ಅಳ್ವ ಶುಭಹಾರೈಸಿದರು.
ಈ ಸಂದರ್ಭ ಎಸ್‍ಜೆಎಂ ತಲಪಾಡಿ ವಲಯಾಧ್ಯಕ್ಷ ಪಿ.ಎಂ ಮುಹಮ್ಮದ್ ಮದನಿ, ಕೆ.ಸಿರೋಡು ಮುದರ್ರಿಸ್ ಮುನೀರ್ ಸಖಾಫಿ, ಖತೀಬ್ ಹನೀಫ್ ಸಖಾಫಿ, ಉಚ್ಚಿಲ ರಹ್ಮಾನಿಯ ಮಸೀದಿ ಖತೀಬ್ ಅಕ್ಬರ್ ಅಲಿ ಸಅದಿ, ಎಸ್ಸೆಸ್ಸೆಫ್ ಕೋಟೆಕಾರ್ ಸೆಕ್ಟರ್ ಅಧ್ಯಕ್ಷ ಅಬ್ದುಲ್ ಬಾರಿ ಸಅದಿ, ತಲಪಾಡಿ ಸೆಕ್ಟರ್ ಅಧ್ಯಕ್ಷ ಇಬ್ರಾಹೀಂ ಝುಹುರಿ, ಹೊಸನಗರ ತಾಜುಲ್ ಉಲಮಾ ಮಸೀದಿ ಖತೀಬ್ ಅಬ್ದುಲ್ ಸಲಾಂ, ಎಸ್ ಎಂಎ ಉಳ್ಳಾಲ ಝೋನ್ ಅಧ್ಯಕ್ಷ ಅಹ್ಮದ್ ಕುಂಞ ಹಾಜಿ ಪಿಲಿಕೂರು, ತಲಪಾಡಿ ರೀಜಿನಲ್ ಅಧ್ಯಕ್ಷ ಅಬ್ಬಾಸ್ ಹಾಜಿ ಕೊಮರಂಗಳ, ಫಲಾಹ್ ವಿದ್ಯಾಸಂಸ್ಥೆ ಅಧ್ಯಕ್ಷ ಯು.ಬಿ ಮುಹಮ್ಮದ್ ಹಾಜಿ, ಕೋಟೆಕಾರ್ ಮರ್ಕಝುಲ್ ಹಿದಾಯ ಅಧ್ಯಕ್ಷ ಕೆ.ಎಂ ಅಬ್ದುಲ್ಲ ಹಾಜಿ, ಉಚ್ಚಿಲ್ ಜುಮಾ ಮಸೀದಿ ಅಧ್ಯಕ್ಷ ಅಬ್ಬಾಸ್ ಹಜಿ ಪೆರಿಬೈಲ್, ಕೆ.ಎಸ್ ಬಾವಾ ಹಾಜಿ, ಮೇರಳಗುಡ್ಡೆ ಜುಮಾ ಮಸೀದಿ ಅಧ್ಯಕ್ಷ ಇಸ್ಮಾಯಿಲ್ ಹಾಜಿ ಕೊಪ್ಪಳ, ಹೊಸನಗರ ಯು.ಟಿ ಮಸೀದಿ ಅಧ್ಯಕ್ಷ ನಝೀರ್, ಮೊಹಮ್ಮದ್ ಬಾವಾ ಮುಂತಾದವರು ಉಪಸ್ಥಿತರಿದರು.
ಎಸ್‍ವೈಎಸ್ ಕೆ.ಸಿ ರೋಡ್ ಸೆಂಟರ್ ಅಧ್ಯಕ್ಷ ಎನ್.ಎಸ್ ಉಮರ್ ಮಾಸ್ಟರ್ ಸ್ವಾಗತಿಸಿದರು. ಪ್ರ.ಕಾರ್ಯದರ್ಶಿ ಕೆ.ಎಂ ಫಾರುಕ್ ವಂದಿಸಿದರು.