Site icon Ullalavani

ಎಸ್ ಎಸ್ ಎಫ್ ತಲಪಾಡಿ‌ ಸೆಕ್ಟರ್ ವತಿಯಿಂದ ಡ್ರಗ್ ಫ್ರೀ ಇಂಡಿಯ ಬೈಕ್ ರ್ಯಾಲಿ

UN NETWORKS

ತಲಪಾಡಿ: ಎಸ್.ಎಸ್.ಎಫ್ ತಲಪಾಡಿ ಸೆಕ್ಟರ್ ವತಿಯಿಂದ ಆಯೋಜಿಸಲಾದ ಡ್ರಗ್ ಫ್ರೀ ಇಂಡಿಯಾ ಬೈಕ್ ರ್ಯಾಲಿ ಕಾರ್ಯಕ್ರಮಕ್ಕೆ ಎಸ್.ವೈ.ಎಸ್ ಕೆ.ಸಿ.ರೋಡ್ ಸೆಂಟರ್ ಅಧ್ಯಕ್ಷ ಎನ್.ಎಸ್.ಉಮ್ಮರಬ್ಬ ಅವರು ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು ಮಾದಕ ಪದಾರ್ಥವು ಮಾನವೀಯತೆಯನ್ನಿ ನಶಿಸಿ ಕ್ರೂರತೆಯನ್ನು ಪ್ರದರ್ಶಿಸುವ ಸಾಧನವಾಗಿದೆ.ಸರ್ವ ಧರ್ಮದವರೂ ಜೊತೆಗೂಡಿ ಮಾದಕ ಪದಾರ್ಥಕಗಳ ಬಗ್ಗೆ ಎಚ್ಚೆತ್ತು ಸಾರ್ವಜನಿಕರಿಗೆ ತಿಳಿಹೇಳಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು.

ಡ್ರಗ್ಸ್ ಮುಕ್ತ ಭಾರತ ಬೈಕ್ ರ್ಯಾಲಿಯು ಕಿನ್ಯದಲ್ಲಿ ಪ್ರಾರಂಭಗೋಡು ಪಂಜಳ,ಪಿಲಿಕೂರು,ಕೆ.ಸಿ.ನಗರ,ಕೆ.ಸಿ.ರೋಡ್ ಮಾರ್ಗವಾಗಿ ತಲಪಾಡಿಯಲ್ಲಿ ಸಮಾರೋಪಗೊಂಡಿತು.

ಸುನ್ನಿ ಜಮೀಯತುಲ್ ಉಲಮಾ ಮಂಗಳೂರು ವಲಯದ ಅಧ್ಯಕ್ಷರಾದ ಬಶೀರ್ ಮದನಿ ಕೂಳೂರು ಮಾದಕ ವಸ್ತುಗಳ ದುಷ್ಪರಿಣಾಮದ ಕುರಿತು ಸಾರ್ವಜನಿಕರು ಜಾಗ್ರತೆವಹಿಸಬೇಕು ಎಂದು ತಿಳಿಸಿದರು.

ಎಸ್.ವೈ.ಎಸ್.ಕೆ.ಸಿ.ರೋಡ್ ಸೆಂಟ್ರಲ್ ಉಪಾಧ್ಯಕ್ಷ ಸಿರಾಜುದ್ಧೀನ್,ಎಸ್.ಎಸ್.ಎಫ್ ತಲಪಾಡಿ ಸೆಕ್ಟರ್ ಅಧ್ಯಕ್ಷ ಅಬ್ದುಲ್ ರಹೀಂ ಝುಹರಿ, ಕೋಶಾಧಿಕಾರಿ ಅಲ್ತಾಫ್ ಕೆ.ಸಿ.ರೋಡ್, ಸದಸ್ಯರಾದ ಹಕೀಂ, ಇಬ್ರಾಹಿಂ ಕೆ.ಸಿ.ರೋಡ್, ಮುಸ್ತಫ ಕೆ.ಸಿ.ನಗರ, ಜಾಫರ್ ಪಿಲಿಕೂರು, ಎಸ್.ಎಸ್.ಎಫ್ ಉಳ್ಳಾಲ ಡಿವಿಸನ್ ಕೋಶಾಧಿಕಾರಿ ಅಬ್ದುಲ್ ಹಮೀದ್,ತಲಪಾಡಿ ಂಚಾಯತ್ ಸದಸ್ಯರಾದ ಹಸೈನಾರ್,ಖಾದರ್ ಮಕ್ಯಾರ್, ಫಯಾಜ್, ಫಾರೂಕ್ ಕೆ.ಸಿ.ನಗರ, ಮಾಜಿ ಪಂಚಾಯತ್ ಸದಸ್ಯರಾದ ಅಬ್ದುಲ್ ಸಲಾಂ, ತಲಪಾಡಿ ವಲಯ ಯೂತ್ ಕಾಂಗ್ರೆಸ್ ಅಧ್ಯಕ್ಷ ಯಾಕುಬ್ ಪಿಲಿಕೂರು ಉಪಸ್ಥಿತರಿದ್ದರು.

ಎಸ್.ಎಸ್,ಎಫ್, ಉಳ್ಳಾಲ ರೀಜನಲ್ ಉಪಾಧ್ಯಕ್ಷ ಸಿ.ಎಮ್.ಮುಸ್ತಫ ಝುಹರಿ ದುಆ ನೆರವೇರಿಸಿದರು.ಎಸ್.ಎಸ್,ಎಫ್,ತಲಪಾಡಿ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಶಿಹಾಬುದ್ದೀನ್ ಧನ್ಯವಾದಗೈದರು.

Exit mobile version