Site icon Ullalavani

ಕೋಟೆಕಾರು ಬಲ್ಯ ಅಂಬೇಡ್ಕರ್ ಭವನಕ್ಕೆ ಶಿಲಾನ್ಯಾಸ

UN NETWORKS

ಕೋಟೆಕಾರು: ಕೋಟೆಕಾರು ಪಟ್ಟಣ ಪಂಚಾಯತ್ ವ್ಯಾಪ್ತಿಯ ಬಲ್ಯದ ಎಸ್ ಸಿ ಕಾಲನಿಯಲ್ಲಿ ರೂ 7.94 ಲಕ್ಷ ವೆಚ್ಚದ ಅನುದಾನದಲ್ಲಿ ಅಂಬೇಡ್ಕರ್ ಭವನಕ್ಕೆ ಶಿಲಾನ್ಯಾಸ ಕಾರ್ಯಕ್ರಮವನ್ನು ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಉದಯ ಕುಮಾರ್ ಶೆಟ್ಟಿಯವರು ನೆರವೇರಿಸಿದರು.

ಈ ಸಂಧರ್ಭದಲ್ಲಿ ದ.ಕ ಜಿಲ್ಲಾ ಪಂಚಾಯತ್ ನ ಮಾಜಿ ಉಪಾಧ್ಯಕ್ಷರಾದ ಸತೀಶ್ ಕುಂಪಲ,ರಾಜ್ಯ ಬಿ.ಜೆ.ಪಿ ಕಾರ್ಯಕಾರಿಣಿ ಸದಸ್ಯ ರವೀಂದ್ರ ಶೆಟ್ಟಿ ಉಳಿದೊಟ್ಟು,ಕೋಟೆಕಾರ್ ಪಟ್ಟಣ ಪಂಚಾಯತ್ ಉಪಾಧ್ಯಕ್ಷ ಅನಿಲ್ ಕುಮಾರ್ ಬಗಂಬಿಲ,ಸ್ಥಾಯಿ ಸಮಿತಿ ಅಧ್ಯಕ್ಷರಾದ ಭಾರತಿ ರಾಘವ ಗಟ್ಟಿ,ಸ್ಥಳೀಯ ಪಟ್ಟಣ ಪಂಚಾಯತ್ ಸದಸ್ಯರಾದ ಮೋಹನ್ ಬಲ್ಯ,ಉಮೇಶ್ ಗಾಂಭೀರ್,ಅಜಿತ್,ಸುಂದರ ಆಚಾರಿ ಕೋಟೆಕಾರು, ಬಾಬು ಮುಗೇರ,ಮಾಧವ ರಾವ್,ಶಂಕರ ಬಲ್ಯ,ಕೃಷ್ಣಪ ಬಲ್ಯ,ಪುರುಷೋತ್ತಮ,ರಾಮಣ್ಣ ಪೂಜಾರಿ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

Exit mobile version